ಯುಜಿಸಿಇಟಿ 3ನೇ, ನೀಟ್ 2ನೇ ಸುತ್ತಿಗೆ ಆಯ್ಕೆ ಸಲ್ಲಿಸಲು ಸೆ.8 ಕೊನೆ ದಿನ
ಇಂಜಿನಿಯರಿಂಗ್ ಸೇರಿ ವಿವಿಧ ಕೋರ್ಸುಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಹಾಗೂ ವೈದ್ಯಕೀಯ, ದಂತವೈದ್ಯಕೀಯ ಕೋರ್ಸುಗಳ ಎರಡನೇ ಸುತ್ತಿನ ಮುಂದುವರಿದ ಸುತ್ತಿನ ಸೀಟು ಹಂಚಿಕೆಗೆ ಸೆ.6 ರಿಂದ 8ರವರೆಗೆ ಇಚ್ಚೆ/ಆಯ್ಕೆಗಳನ್ನು ಹೊಸದಾಗಿ ಸೇರಿಸಲು/ಬದಲಾಯಿಸಲು/ಅಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಹೊಸದಾಗಿ ಬೆಳಗಾವಿ ಜೆಎನ್‌ಎಮ್ ಕಾಲೇಜಗೆ 12 ವೈದ್ಯಕೀಯ ಸೀಟುಗಳು, ಮೈಸೂರು ಫರೂಕಿಯ ದಂತ ವೈದ್ಯಕೀಯ ಕಾಲೇಜಿಗೆ 40 ಸೀಟುಗಳು ಮತ್ತು ಬಿಜಿಎಸ್ … More