ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಶೈಕ್ಷಣಿಕ ವರ್ಷದ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳು/ಪೋಷಕರು ಆದರ್ಶ ವಿದ್ಯಾಲಯ ಅಧಿಕೃತ ಜಾಲತಾಣ http://164.100.133.7:82/frmappack.aspx?apln=mseatselದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ವಿಕ್ಷೀಸಬಹುದು ಹಾಗೂ ಕಟ್ಆಫ್ ಮಾಹಿತಿಯನ್ನೊಳಗೊಂಡ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
1 ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಹಾಗೂ ಕಟ್ಆಫ್ ಪಿಡಿಎಫ್
Adarsha Vidyalaya 1st Round Allotment List 2026 PDF Link
ಆದರ್ಶ ವಿದ್ಯಾಲಯ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ 2026 ನೋಡುವುದು ಹೇಗೆ.?
ಹಂತ-1 ಅಧಿಕೃತ ಜಾಲತಾಣಕ್ಕೆ http://164.100.133.7:82/home.aspx ಭೇಟಿ ನೀಡಿ.
ಹಂತ-2 ಮುಖಪುಟದ ಮೆನುದಲ್ಲಿ “2026-27 ನೇ ಸಾಲಿನ 6 ನೇ ತರಗತಿಗೆ ಪ್ರವೇಶ” ವಿಭಾಗದಡಿ ನೀಡಲಾದ “ಸೀಟು ಹಂಚಿಕೆಯನ್ನು ಪರಿಶೀಲಿಸಿ” ಎಂಬ ಉಪವಿಭಾಗದ ಮೇಲೆ ಒತ್ತಿ.
Adarsha Vidyalaya 1St Round Selection List 2026 Check Process
ಹಂತ-3 ನಂತರ ಹೊಸಪುಟ ತೆರೆಯುತ್ತದೆ, ಅಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಅಥವಾ ಸ್ಯಾಟ್ಸ್ ಸಂಖ್ಯೆ ಭರ್ತಿ ಮಾಡಿ. ಸರಿಯಾಗಿ ಭದ್ರತಾ ಕೋಡ್ ಹಾಕಿ, ತದನಂತರ ಸಲ್ಲಿಸು(Submit) ಗುಂಡಿ ಮೇಲೆ ಒತ್ತುವ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು.