CSIR UGC-NET ಜೂನ್-2026ರ ಪರೀಕ್ಷಾ ನೋಂದಣಿಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ

Published on:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026ನೇ ಸಾಲಿನ ಜೂನ್ ಮಾಹೆಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR), ವಿಶ್ವವಿದ್ಯಾನಿಲಯ ಅನುದಾನ ಆಯೋಗ ಜಂಟಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌)ಯ ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ, ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ, ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹಾಗೂ ಇತರೆ ಸಂಶೋಧನಾ ಕ್ಷೇತ್ರಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್, ಪಿಎಚ್‌ಡಿ ಪ್ರವೇಶ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಿದಾಗಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಅಭ್ಯರ್ಥಿಗಳು ಜೂನ್ 19 ರೊಳಗೆ NTA ಅಧಿಕೃತ ವೆಬ್‌ಸೈಟ್ https://csirnet.nta.nic.in/ ಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

CSIR UGC-NET ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ – ಮೇ 27, 2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ಜೂನ್ 19, 2026
  • ಆನ್‌ಲೈನ್‌ನಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 20, 2026
  • ಆನ್‌ಲೈನ್‌ನಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡಲು ಕೊನೆಯ ದಿನಾಂಕ – ಜೂನ್ 22-23, 2026
  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುವ ದಿನಾಂಕ – ಜುಲೈ 17 ಮತ್ತು 18, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ 55% ಅಂಕಗಳೊಂದಿಗೆ ಅರ್ಹತಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ:

01-07-2026 ರಂತೆ;

• ಜೆ.ಆರ್.ಎಫ್ ಪರೀಕ್ಷೆಗೆ ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು.

• ಪಿಎಚ್‌ಡಿ ಪ್ರವೇಶ ಹಾಗೂ ಸಹಾಯಕ ಪ್ರಾಧ್ಯಾಪಕರ ಅರ್ಹತೆ ಪರೀಕ್ಷೆಗೆ – ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲ.

ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ ಹಾಗೂ ತೃತೀಯ ಲಿಂಗ ಮತ್ತು ಮಹಿಳಾ ಅರ್ಜಿದಾರರಿಗೆ – 05 ವರ್ಷಗಳವರೆಗೆ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದೆ.

ಒಟ್ಟು ಪರೀಕ್ಷಾ ಪತ್ರಿಕೆಗಳು:

1. ರಾಸಾಯನಿಕ ವಿಜ್ಞಾನ – ಸಬ್ಜೆಕ್ಟ್ ಕೋಡ್ 701

2. ಭೂಮಿ, ವಾತಾವರಣ. ಸಾಗರ ಮತ್ತು ಗ್ರಹ ವಿಜ್ಞಾನಗಳು – ಸಬ್ಜೆಕ್ಟ್ ಕೋಡ್ 702

3. ಲೈಫ್ ಸೈನ್ಸಸ್ – ಸಬ್ಜೆಕ್ಟ್ ಕೋಡ್ 703

4. ಗಣಿತ ವಿಜ್ಞಾನ – ಸಬ್ಜೆಕ್ಟ್ ಕೋಡ್ 704

5. ಭೌತಿಕ ವಿಜ್ಞಾನ – ಸಬ್ಜೆಕ್ಟ್ ಕೋಡ್ 705

CSIR UGC NET ಪರೀಕ್ಷಾ ದಿನಾಂಕ:

CSIR UGC NET ಜೂನ್-2026ರ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜುಲೈ 17 ಮತ್ತು 18 ರಂದು (ಬೆಳಿಗ್ಗೆ 09 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 03 ರಿಂದ ಸಂಜೆ 06 ರವರೆಗೆ) ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ.

ಆಯ್ಕೆ ವಿಧಾನ:

ಕಂಪ್ಯೂಟರ್ ಆಧಾರಿತ ಪರೀಕ್ಷೆ
ದಾಖಲೆ ಪರಿಶೀಲನೆ
ಅರ್ಹತಾ ಪಟ್ಟಿ

ಪರೀಕ್ಷಾ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ – ₹1150
ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹600
ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ₹325

ಅರ್ಜಿ ಸಲ್ಲಿಕೆ ಪ್ರಕ್ರಿಯೆ…

• NTA ಅಧಿಕೃತ ವೆಬ್‌ಸೈಟ್ https://csirnet.nta.nic.in/ಗೆ ಭೇಟಿ ನೀಡಿ.

• ನಂತರ ಅಭ್ಯರ್ಥಿ ಚಟುವಟಿಕೆ ವಿಭಾಗದ ಕೆಳಗೆ ನೀಡಲಾಗಿರುವ – “ಜಂಟಿ CSIR-UGC NET ಜೂನ್ – 2026 ಕ್ಕೆ ನೋಂದಣಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.

• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ಮಾಹಿತಿ, ಇತ್ತೀಚಿನ ಛಾಯಾಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಿ. ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಉಲ್ಲೇಖಕ್ಕಾಗಿ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://csirnet.nta.nic.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment