ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯು ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ‘ನರ್ಸಿಂಗ್ ಆಫೀಸರ್ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ (NORCET)-11’ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 2218 ಸ್ಥಾನಗಳಿಗೆ ನೇಮಕ ನಡೆಯಲಿದೆ. ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ಇರಲಿದೆ. ಬಿ.ಎಸ್ಸಿ(ಆನರ್ಸ್) ನರ್ಸಿಂಗ್/ಬಿ.ಎಸ್ಸಿ ನರ್ಸಿಂಗ್, ಬಿ.ಎಸ್ಸಿ(ಪೋಸ್ಟ್ ಸರ್ಟಿಫಿಕೇಟ್)/ಪೋಸ್ಟ್-ಬೇಸಿಕ್ ಬಿ.ಎಸ್ಸಿ ನರ್ಸಿಂಗ್ ಅಥವಾ ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಏಮ್ಸ್ ಅಧಿಕೃತ ಜಾಲತಾಣ https://www.aiimsexams.ac.in/auth/loginಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಪರೀಕ್ಷೆ ನೋಂದಣಿ ಆರಂಭ ದಿನಾಂಕ -ಜುಲೈ 24
- ನೋಂದಣಿ ಮಾಡಲು ಕೊನೆದಿನಾಂಕ – ಆಗಸ್ಟ್ 13
- ಪೂರ್ವಭಾವಿ ಪರೀಕ್ಷೆ ದಿನಾಂಕ – ಸೆಪ್ಟೆಂಬರ್ 12
- ಮುಖ್ಯ ಪರೀಕ್ಷೆ ದಿನಾಂಕ- ಸೆಪ್ಟೆಂಬರ್ 30
ಶೈಕ್ಷಣಿಕ ಮಾನದಂಡ:
ಬಿ.ಎಸ್ಸಿ(ಆನರ್ಸ್) ನರ್ಸಿಂಗ್/ಬಿ.ಎಸ್ಸಿ ನರ್ಸಿಂಗ್, ಬಿ.ಎಸ್ಸಿ(ಪೋಸ್ಟ್ ಸರ್ಟಿಫಿಕೇಟ್)/ಪೋಸ್ಟ್-ಬೇಸಿಕ್ ಬಿ.ಎಸ್ಸಿ ನರ್ಸಿಂಗ್.
ಅಥವಾ
ಜಿಎನ್‌ಎಮ್ (GNM – General Nursing Midwifery) ಡಿಪ್ಲೊಮಾ ಜೊತೆಗೆ ಕನಿಷ್ಠ 50 ಹಾಸಿಗೆಗಳ (50 beds) ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.
ಭಾರತೀಯ ನರ್ಸಿಂಗ್ ಕೌನ್ಸಿಲ್/ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನರ್ಸ್ ಮತ್ತು ಮಿಡ್‌ವೈಫ್ ಆಗಿ ನೋಂದಣಿಯಾಗಿರಬೇಕು.
ವಯಸ್ಸಿನ ಮಿತಿ:
13-08-2026ರಂತೆ; 18 ವರ್ಷದಿಂದ 30ವರ್ಷದ ವಯೋಮಾನದವರಾಗಿರಬೇಕು.
ನೇಮಕಾತಿ ನಿಯಮಗಳ ಪ್ರಕಾರ ವಿಶೇಷ ವರ್ಗಗಳಿಗೆ ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ಆಯ್ಕೆ ಪ್ರಕ್ರಿಯೆ:
- ಹಂತ-1 ಪೂರ್ವಭಾವಿ ಪರೀಕ್ಷೆ
- ಹಂತ-2 ಮುಖ್ಯ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಸಂಬಳ:
ಪೇ ಮ್ಯಾಟ್ರಿಕ್ಸ್ ಲೆವೆಲ್: ಲೆವೆಲ್ 07 (Level 07)
ಪೂರ್ವ-ಪರಿಷ್ಕೃತ ಪೇ ಬಾಂಡ್: PB-2 (ರೂ.9,300 – 34,800)
ಗ್ರೇಡ್ ಪೇ: ರೂ. 4,600/-
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ ರೂ.3000/-
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.2400/-
ಅಂಗವಿಕಲ ವ್ಯಕ್ತಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಪರೀಕ್ಷೆಗೆ ಹೇಗೆ ನೋಂದಣಿ ಮಾಡುವುದು?
ಹಂತ-1 ಅರ್ಹ ಆಸಕ್ತ ಅಭ್ಯರ್ಥಿಗಳು https://www.aiimsexams.ac.in/advertisement/6a6350f7e5a81c4267f4ff04ಕ್ಕೆ ಭೇಟಿ ನೀಡಿ.
ಹಂತ-2 ನಂತರ ಹೊಸ ಅಭ್ಯರ್ಥಿಗಳಾಗಿದ್ದಲ್ಲಿ “Create a new account?” ಈಗಾಗಲೇ ಬಳಕೆದಾರರಾಗಿದ್ದರೆ “Login to Apply” ಮೇಲೆ ಕ್ಲಿಕ್ಕಿಸಿ ಅರ್ಜಿ ನಮೂನೆ ತುಂಬಿ, ಅಲ್ಲಿ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ-3 ತದನಂತರ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Official Notification PDF | Download |
| Online Application Form Link(Direct Links) | Apply Now |
| Official Website | aiimsexams.ac.in |
| More Updates | KarnatakaHelp.in |
Please accept the request
job
Job application in GNM Nurse