ಒಡಿಸ್ಸಾ: ದೇಶದ ಅತಿದೊಡ್ಡ ಉಕ್ಕು ತಯಾರಿಕಾ ಸಾರ್ವಜನಿಕ ವಲಯದ ಉದ್ದಿಮೆಯಾದ ಭಾರತೀಯ ಉಕ್ಕು ಪ್ರಾಧಿಕಾರ ಲಿಮಿಟೆಡ್(SAIL)ನ ಪ್ರಮುಖ ಘಟಕವಾಗಿರುವ ರೌರ್ಕೆಲಾ ಉಕ್ಕು ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಕಾಯ್ದೆಯಡಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಟ್ರೇಡ್ ಅಪ್ರೆಂಟಿಸ್(421), ಪದವೀಧರ(275) ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್(414) ಸೇರಿದಂತೆ ಒಟ್ಟು 1110 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಸಂಬಂಧಿತ ಟ್ರೇಡ್ನಲ್ಲಿ ಐಟಿಐ, ಪದವಿ, ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಅಪ್ರೆಂಟಿಸ್ ಪೋರ್ಟಲ್ https://www.apprenticeshipindia.gov.in/ ಅಥವಾ https://nats.education.gov.in/ನಲ್ಲಿ ನೋಂದಣಿಯಾಗಿ ಗೊತ್ತುಪಡಿಸಿದ ದಿನಾಂಕ ಹಾಗೂ ವಿಳಾಸದಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಮುಖ್ಯ ದಿನಾಂಕಗಳು:
- ಅಧಿಸೂಚನೆ ದಿನಾಂಕ – ಜುಲೈ 17
- ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ – ಆಗಸ್ಟ್ 26
- ನೇರ ಸಂದರ್ಶನ ದಿನಾಂಕಗಳು – ಸೆಪ್ಟೆಂಬರ್ 01ರಿಂದ 26ರವೆರೆಗೆ
ಶೈಕ್ಷಣಿಕ ಅರ್ಹತೆ:
ಟ್ರೇಡ್ ಅಪ್ರೆಂಟಿಸ್‌ಗಳಿಗೆ; ಸಂಬಂಧಿತ ವಿಷಯಗಳಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ಪದವೀಧರ ಅಪ್ರೆಂಟಿಸ್‌ಗಳಿಗೆ; ಸಂಬಂಧಿತ ವಿಭಾಗ/ವಿಷಯದಲ್ಲಿ ಪದವಿ (ಇಂಜಿನಿಯರಿಂಗ್, ಬಿಎ, ಬಿಎಸ್ಸಿ, ಬಿ.ಕಾಂ, ಬಿಸಿಎ, ಬಿಬಿಎ) ಪಡೆದಿರಬೇಕು.
ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ; ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ(ಜಿಎನ್‌ಎಂ, ಡಿಪಿ, ಡಿಎಂಎಲ್‌ಟಿ, ಡಿಆರ್‌ಟಿ, ಟಿಎಕ್ಸ್‌ಟಿ, ಡಿಒಟಿಟಿ, ಡಿಪಿ) ಹೊಂದಿರಬೇಕು.
ವಿಶೇಷ ಸೂಚನೆ: ಕಳೆದ ಐದು ವರ್ಷದಲ್ಲಿ(2022, 2023, 2024, 2025 ಮತ್ತು 2026) ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರು.
ವಯೋಮಿತಿ:
31-08-2026ರಂತೆ; ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ ವಯಸ್ಸಿನ ಮಿತಿ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
- ಶಾರ್ಟ್ ಲಿಸ್ಟ್
- ನೇರ ಸಂದರ್ಶನ
- ದಾಖಲಾತಿ ಪರಿಶೀಲನೆ
ಮಾಸಿಕ ಸ್ಟೈಫಂಡ್ ಮಾಹಿತಿ:
ಟ್ರೇಡ್ ಅಪ್ರೆಂಟಿಸ್‌ಗಳಿಗೆ; ರೂ.10,560/- (ಕೋಪಾ ಹಾಗೂ ವೆಲ್ಡರ್ ಟ್ರೇಡ್‌ಗೆ ರೂ.9600/-)
ಪದವೀಧರ ಅಪ್ರೆಂಟಿಸ್‌ಗಳಿಗೆ; ರೂ.12,300/-
ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ; ರೂ.10,900/-
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ.?
ಆಸಕ್ತ ಅಭ್ಯರ್ಥಿಗಳು ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು https://www.apprenticeshipindia.gov.in/candidate-loginನಲ್ಲಿ ನೋಂದಣಿಯಾಗಬೇಕು.
ಆಸಕ್ತ ಅಭ್ಯರ್ಥಿಗಳು ಪದವೀಧರ /ಟೆಕ್ನಿಷಿಯನ್ ಅಪ್ರೆಂಟಿಸ್ ಅಭ್ಯರ್ಥಿಗಳು https://nats.education.gov.in/student_type.phpನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ನೇರ ಸಂದರ್ಶನದ ವೇಳಾಪಟ್ಟಿ:
ಸಂದರ್ಶನ ನಡೆಯುವ ಸ್ಥಳ: ಕೇಂದ್ರ ಮನರಂಜನಾ ಕೊಠಡಿ, ತರಬೇತಿದಾರರ ಹಾಸ್ಟೆಲ್, ಸೆಕ್ಟರ್ -5, ರೂರ್ಕೆಲಾ -769002, ಜಿಲ್ಲೆ: ಸುಂದರಗಢ (ಒಡಿಶಾ).
Important Direct Links:
| Official Notification PDF | Download |
| Trade Apprentice Online Application Form Link | Apply Now |
| Graduate/Technician Apprentice Online Application Form Link | Apply Now |
| Official Website | sail.co.in |
| More Updates | KarnatakaHelp.in |