ನೌಕಾಪಡೆ ಎಸ್‌ಎಸ್‌ಸಿ ಆಫೀಸರ್‌ ಭರ್ತಿ; ಅರ್ಜಿ ಗಡುವು ವಿಸ್ತರಣೆ

ಸುಮಾರು ₹1,20,000/- ಮಾಸಿಕ ವೇತನ!

Published on:

ಕೇರಳ: ಭಾರತೀಯ ನೌಕಾಪಡೆಯು ಕೇರಳದ ಎಳಿಮಲಾದಲ್ಲಿನ ಇಂಡಿಯನ್ ನೇವಲ್ ಅಕಾಡೆಮಿ(ಐಎನ್‌ಎ)ಯಲ್ಲಿ ಜೂನ್ 2027ರಿಂದ ಪ್ರಾರಂಭಿಸಲಿರುವ ವಿವಿಧ ಕೋರ್ಸ್‌ಗಳಿಗಾಗಿ ಶಾರ್ಟ್ ಸರ್ವಿಸ್ ಕಮಿಷನ್(ಎಸ್‌ಎಸ್‌ಸಿ)ಅಧಿಕಾರಿ ಹುದ್ದೆಗಳಿಗೆ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

‌ಎಕ್ಸಿಕ್ಯೂಟಿವ್, ಎಜುಕೇಶನ್‌, ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಬ್ರಾಂಚ್‌ಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆ.03ರವರೆಗೆ ಅಧಿಕೃತ ಜಾಲತಾಣ www.joinindiannavy.gov.inಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಜೂನ್‌ 25
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಆಗಸ್ಟ್‌ 03(ವಿಸ್ತರಣೆ)

ಅರ್ಹತೆಗಳು:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.60 ರಷ್ಟು ಅಂಕಗಳೊಂದಿಗೆ ಬಿಇ/ಬಿ.ಟೆಕ್ ಪದವಿ ಅಥವಾ ಸಂಬಂಧಿತ ಸ್ನಾತಕೋತ್ತರ ಪದವಿಗಳನ್ನು(ಎಂ.ಎಸ್ಸಿ, ಎಂಸಿಎ, ಎಂಬಿಎ, ಎಂ.ಟೆಕ್) ಹೊಂದಿರಬೇಕು.

ಅಭ್ಯರ್ಥಿಗಳ ಹುಟ್ಟಿದ ದಿನಾಂಕವು ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಯೋಮಿತಿಯ ಒಳಗಿರಬೇಕು (ವಿವಿಧ ಹುದ್ದೆಗಳಿಗೆ ಜುಲೈ 2000 ರಿಂದ ಜುಲೈ 2008 ರ ನಡುವೆ ಜನಿಸಿದವರು ಅರ್ಹರಾಗಿರುತ್ತಾರೆ).

ವೇತನ ಮತ್ತು ಸೇವಾ ಅವಧಿ:

ಆಯ್ಕೆಯಾದ ಅಭ್ಯರ್ಥಿಗಳನ್ನು ‘ಸಬ್ ಲೆಫ್ಟಿನೆಂಟ್'(Sub Lieutenant) ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಆರಂಭಿಕ ಮಾಸಿಕ ಒಟ್ಟು ವೇತನ ಸುಮಾರು ರೂ.1,20,000/- ಇರಲಿದ್ದು, ಇದರೊಂದಿಗೆ ಇತರ ಭತ್ಯೆಗಳು ಮತ್ತು ಗ್ರೂಪ್ ಇನ್ಶೂರೆನ್ಸ್ ಸೌಲಭ್ಯಗಳು ದೊರೆಯಲಿವೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕವಾಗಿ 12 ವರ್ಷಗಳ ಅವಧಿಗೆ ಶಾರ್ಟ್ ಸರ್ವಿಸ್ ಕಮಿಷನ್ ನೀಡಲಾಗುವುದು. ಇದನ್ನು ಅಗತ್ಯತೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ 2 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ www.joinindiannavy.gov.in ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಮತ್ತು ಅಂಕಪಟ್ಟಿಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ.

Important Direct Links:

Official Notification PDFDownload
Online Application Form LinkApply Now
Official Websitejoinindiannavy.gov.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

2 thoughts on “ನೌಕಾಪಡೆ ಎಸ್‌ಎಸ್‌ಸಿ ಆಫೀಸರ್‌ ಭರ್ತಿ; ಅರ್ಜಿ ಗಡುವು ವಿಸ್ತರಣೆ”

Leave a Comment