ಸಾಮಾನ್ಯ ಪ್ರವೇಶ ಪರೀಕ್ಷೆ(CAT 2026)ಗೆ ಅರ್ಜಿ ಆಹ್ವಾನ

Published on:

ದೇಶದ ಪ್ರತಿಷ್ಠಿತ ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳ(IIMs) ವಿವಿಧ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ(CAT 2026)ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರೀಕ್ಷೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಆ.03ರಂದು ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಲಿದ್ದು, ಸೆ.15ರ ಸಂಜೆ 5:00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ವರ್ಷದ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ನ.29ರ ಭಾನುವಾರದಂದು ಮೂರು ಅವಧಿಗಳಲ್ಲಿ(Sessions) ದೇಶದ ಸುಮಾರು 170 ನಗರಗಳಲ್ಲಿ ನಡೆಯಲಿದೆ. ಅಭ್ಯರ್ಥಿಗಳು ನೋಂದಣಿಗಾಗಿ ಅಧಿಕೃತ ವೆಬ್‌ಸೈಟ್ https://iimcat.ac.in ಗೆ ಭೇಟಿ ನೀಡಬಹುದು.

ಪ್ರಮುಖ ದಿನಾಂಕಗಳು:

  • ನೋಂದಣಿ ಆರಂಭ – ಆಗಸ್ಟ್ 3(ಬೆಳಿಗ್ಗೆ 10:00)
  • ನೋಂದಣಿ ಕೊನೆಯ ದಿನಾಂಕ – ಸೆಪ್ಟೆಂಬರ್ 15(ಸಂಜೆ 5:00)
  • ಪ್ರವೇಶ ಪತ್ರ(Admit Card) ಡೌನ್ಲೋಡ್ – ನವೆಂಬರ್ 4ರಿಂದ ನವೆಂಬರ್ 29ರವರೆಗೆ
  • ಪರೀಕ್ಷಾ ದಿನಾಂಕ – ನವೆಂಬರ್ 29, 2026

ಅರ್ಹತೆಗಳು:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಪದವಿ(Bachelor’s Degree) ಹೊಂದಿರಬೇಕು.

ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಕನಿಷ್ಠ ಶೇ. 45 ರಷ್ಟು ಅಂಕಗಳು ಕಡ್ಡಾಯವಾಗಿದೆ.

ಪದವಿ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳೂ ಸಹ ತಾತ್ಕಾಲಿಕ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಮೀಸಲಾತಿ ವಿವರಗಳು:

ಕಾನೂನು ನಿಯಮಾವಳಿಗಳ ಪ್ರಕಾರ, ಒಟ್ಟು ಸೀಟುಗಳಲ್ಲಿ ಈ ಕೆಳಗಿನಂತೆ ಮೀಸಲಾತಿ ಕಲ್ಪಿಸಲಾಗಿದೆ:

  • ಪರಿಶಿಷ್ಟ ಜಾತಿ (SC): ಶೇ. 15
  • ಪರಿಶಿಷ್ಟ ಪಂಗಡ (ST): ಶೇ. 7.5
  • ಇತರ ಹಿಂದುಳಿದ ವರ್ಗಗಳು (NC-OBC): ಶೇ. 27
  • ಆರ್ಥಿಕವಾಗಿ ಹಿಂದುಳಿದ ವರ್ಗಗಳು (EWS): ಗರಿಷ್ಠ ಶೇ. 10
  • ವಿಕಲಚೇತನರು (PwBD): ಶೇ. 5

ನೋಂದಣಿ ಮತ್ತು ಅರ್ಜಿ ಶುಲ್ಕ:

  • ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ₹1,350
  • ಇತರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ₹2,700

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1800 210 0175 ಅನ್ನು ಸಂಪರ್ಕಿಸಬಹುದು.

Important Direct Links:

CAT 2026 Information Bulletin PDFDownload
CAT 2026 Eligibility Details PDFDownload
Online Application Form LinkApply Now
Official Websiteiimcat.ac.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

3 thoughts on “ಸಾಮಾನ್ಯ ಪ್ರವೇಶ ಪರೀಕ್ಷೆ(CAT 2026)ಗೆ ಅರ್ಜಿ ಆಹ್ವಾನ”

Leave a Comment