ಸ್ವ ಉದ್ಯೋಗಕ್ಕೆ ಸಾಲ-ಸಹಾಯಧನ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ

Published on:

Updated On:

ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2026-27ನೇ ಸಾಲಿನ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ ಸಾಲ-ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಸಮುದಾಯದ(ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನೆರವು ನೀಡಿ, ಸ್ವಾವಲಂಬಿಗಳನ್ನಾಗಿಸುವ ಧ್ಯೇಯೋದ್ದೇಶ ಹೊಂದಿದೆ. ಯೋಜನೆಯಡಿ ₹1 ಲಕ್ಷದಿಂದ ₹2 ಲಕ್ಷದವರೆಗೆ ಸಾಲ ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು, ಇದರಲ್ಲಿ ಶೇ.20ರಷ್ಟು ಸಹಾಯಧನ ಹಾಗೂ ಉಳಿದ ಶೇ.80ರಷ್ಟು ಸಾಲದ ಮೊತ್ತವಾಗಿರುತ್ತದೆ. ಅಭ್ಯರ್ಥಿಯು ಶೇ.4ರ ಬಡ್ಡಿದರದಲ್ಲಿ 34 ಕಂತುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.

ರಾಜ್ಯ ಬ್ರಾಹ್ಮಣ ಸಮುದಾಯದ 18 ರಿಂದ 65 ವಯೋಮಾನದ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://ksbdb.co.in/Loan/registerಕ್ಕೆ ಭೇಟಿ ನೀಡಿ, ಆ.31ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗಾಗಿ ಸಾಮಾನ್ಯ ಅರ್ಹತೆಗಳು

→ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (EWS ಪ್ರಮಾಣ ಪತ್ರ) ಹೊಂದಿರಬೇಕು

→ ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲಾಗುತ್ತದೆ.(ಈ 33% ಮೀಸಲಾತಿಯಲ್ಲಿ ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಶೇ 50% ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ)

→ ವಿಶೇಷಚೇತನರಿಗೆ ಶೇ 5% ಮೀಸಲಾತಿ ನೀಡಲಾಗುವುದು.

→ ಅರ್ಜಿದಾರರ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು

ಸ್ವ ಉದ್ಯೋಗ ಸಾಲ ಸೌಲಭ್ಯದ ವಿವರ

1 ಲಕ್ಷ ಸಾಲ ಪಡೆದರೆ: ಇದರಲ್ಲಿ ರೂ.20,000/- ಸಹಾಯಧನ(Subsidy), ಉಳಿದ ರೂ.80,000/- ಸಾಲವನ್ನು ಮುಂದಿನ 3 ವರ್ಷಗಳವರೆಗೆ ಪ್ರತಿ ಮಾಹೆಯ 5ನೇ ತಾರೀಖಿನ ಒಳಗಾಗಿ ರೂ.2,511/- ರಂತೆ ಮರುಪಾವತಿ ಮಾಡಬೇಕಾಗಿರುತ್ತದೆ.

2 ಲಕ್ಷ ಸಾಲ ಪಡೆದರೆ: ಇದರಲ್ಲಿ ರೂ.40,000/- ಸಹಾಯಧನ, ಇನ್ನುಳಿದ ರೂ.1,60,000/- ಸಾಲದ ಮೊತ್ತವಾಗಿರುತ್ತದೆ. ಮುಂದಿನ 3 ವರ್ಷಗಳ ಕಾಲ ಪ್ರತಿ ಮಾಹೆಯ 5ನೇ ತಾರೀಖಿನೊಳಗೆ ರೂ.5,022/- ರಂತೆ ಮರುಪಾವತಿ ಮಾಡಬೇಕಾಗಿರುತ್ತದೆ.

*ಸಾಲ ಮತ್ತು ಸಹಾಯಧನವನ್ನು ನೇರ ನಗದು ವರ್ಗಾವಣೆ (DBT) ಮುಖಾಂತರ ಬಿಡುಗಡೆ ಮಾಡಲಾಗುತ್ತದೆ.

Important Direct Links:

KSBDB Vipra Swa Udyama Nera Sala Scheme online Application 2026-27 LinkApply Now
Official Websiteksbdb.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment