ನಾಳೆ; ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ 2026 ಪ್ರಕಟ!

Published on:

ಬೆಂಗಳೂರು: 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-01ರ ಫಲಿತಾಂಶವನ್ನು ಏ.23ರಂದು ಮಧ್ಯಾಹ್ನ 12ಗಂಟೆಗೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶವನ್ನು ಮಂಡಳಿಯ ಅಧಿಕೃತ ಜಾಲತಾಣ https://karresults.nic.in/ದಲ್ಲಿ ಹಾಗೂ ಕರ್ನಾಟಕ ಒನ್‌ ಮೊಬೈಲ್‌ ಅಪ್ಲಿಕೇಶನ್‌ ಮೂಲಕವೂ ಪರಿಶೀಲನೆ ಮಾಡಬಹುದು. ವಿದ್ಯಾರ್ಥಿಗಳು ನೋಂದಾಯಿತ ಮೊಬೈಲ್‌ ಸಂಖ್ಯೆ ಎಸ್‌ಎಮ್‌ಎಸ್‌ ಅಥವಾ ವಾಟ್ಸ್ಯಾಪ್‌ ಮೂಲಕ ಫಲಿತಾಂಶದ ಕುರಿತು ಮಾಹಿತಿ ರವಾನಿಸಲಾಗುವುದು.

ಇದೇ ಮೊದಲ ಬಾರಿಗೆ, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ(Marks Card)ಯನ್ನು ಡಿಜಿಲಾಕರ್‌ ಅಧಿಕೃತ ಜಾಲತಾಣ https://www.digilocker.gov.in/ಗೆ ಭೇಟಿ ನೀಡಿ ಡೌನ್ಲೋಡ್‌ ಮಾಡಲು ಅವಕಾಶ ನೀಡಲಾಗಿದೆ ಎಂದು ಮಂಡಳಿ ಹೇಳಿದೆ.

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment