ಯುಜಿ ಸಿಇಟಿ 2026: ವಿಷಯವಾರು ಕೀ ಉತ್ತರ ಪ್ರಕಟ

ಆಕ್ಷೇಪಣೆಗೆ ಏ.30 ಗಡುವು

Published on:

ಬೆಂಗಳೂರು: ಇಂಜಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಸೀಟು ಹಂಚಿಕೆ ಸಂಬಂಧ ಏ.23 ಮತ್ತು 24 ರಂದು ನಡೆಸಿದ್ದ ಪ್ರವೇಶ ಪರೀಕ್ಷೆಯ ವಿಷಯವಾರು ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಭಾನುವಾರ(ಏ.26) ಪ್ರಕಟಿಸಿದೆ.

ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ವಿಷಯವಾರು ಒಟ್ಟು 16 ವರ್ಷನ್‌ಗಳ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ugcet2026ದಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಏ.30ರ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್‌ ರೂಪದಲ್ಲಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಯುಜಿಸಿಇಟಿ 2026 ವಿಷಯವಾರು ಕೀ ಉತ್ತರಗಳ ಪಿಡಿಎಫ್‌

ವಿಷಯದ ಹೆಸರುಕೀ ಉತ್ತರ ಪಿಡಿಎಫ್‌ ಲಿಂಕ್‌
ಭೌತಶಾಸ್ತ್ರ(Physics)ಡೌನ್ಲೋಡ್‌ ಮಾಡಿ
ರಾಸಾಯನಶಾಸ್ತ್ರ(Chemistry)ಡೌನ್ಲೋಡ್‌ ಮಾಡಿ
ಗಣಿತಶಾಸ್ತ್ರ(Mathematics)ಡೌನ್ಲೋಡ್‌ ಮಾಡಿ
ಜೀವಶಾಸ್ತ್ರ(Biology)ಡೌನ್ಲೋಡ್‌ ಮಾಡಿ

ಯುಜಿಸಿಇಟಿ 2026 ಕೀ ಉತ್ತರಗಳನ್ನು ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಕೆಇಎ ಜಾಲತಾಣ https://cetonline.karnataka.gov.in/kea/indexnew.aspxಕ್ಕೆ ಭೇಟಿ.

ಹಂತ-2 ನಂತರ ಮೆನುನಲ್ಲಿ ನೀಡಲಾದ “ಪ್ರವೇಶಗಳು” ವಿಭಾಗದಡಿ “ಯುಜಿ ಸಿಇಟಿ – 2026” ಉಪವಿಭಾಗವನ್ನು ಆರಿಸಿಕೊಳ್ಳಿ, ನಂತರ ಇದರಡಿ ಒದಗಿಸಲಾದ “UGCET – 2026 ಕೀ ಉತ್ತರ (26-04-2026)” ಮೇಲೆ ಒತ್ತುವ ಮೂಲಕ ವಿಷಯವಾರು ಕೀ ಉತ್ತರಗಳಿರುವ ಪಿಡಿಎಫ್‌ ಇರುತ್ತವೆ. ನಿಮಗೆ ಬೇಕಾದವುಗಳನ್ನು ಡೌನ್ಲೋಡ್‌ ಮಾಡಿಕೊಳ್ಳಿ.

Important Direct Links:

Notice PDFDownload
Objection LinkObjection Now
Official Websitekea.kar.nic.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

2 thoughts on “ಯುಜಿ ಸಿಇಟಿ 2026: ವಿಷಯವಾರು ಕೀ ಉತ್ತರ ಪ್ರಕಟ”

Leave a Comment