ಕೆಇಎ ಫಾರ್ಮಸಿ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ

ಒಟ್ಟು 233 ಹುದ್ದೆಗಳ | ಅರ್ಜಿ ಸಲ್ಲಿಕೆಗೆ ಸೆ.03 ಕೊನೆದಿನ

Published on:

Updated On:

ಬೆಂಗಳೂರು: ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ(ಇಎಸ್‌ಐಎಸ್‌ಎಂಎಸ್‌) ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್)ದಲ್ಲಿ ಉಳಿಕೆ ಮೂಲ ವೃಂದ ಹಾಗೂ ಕೆಕೆ ವೃಂದದಲ್ಲಿ ಖಾಲಿಯಿರುವ ಗ್ರೂಪ್-ಸಿ ವೃಂದದ ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್(ಶುಶೂಷಾಧಿಕಾರಿ) ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.03ರವೆರೆಗೆ ವಿಸ್ತರಿಸಿದೆ.

ಆರ್‌ಪಿಸಿ 188 ಮತ್ತು ಕೆಕೆ 45 ಸೇರಿದಂತೆ ಒಟ್ಟು 233 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಡಿಪ್ಲೊಮಾ ಇನ್ ಫಾರ್ಮಸಿ, ಜನರಲ್ ನರ್ಸಿಂಗ್, ಬಿ.ಎಸ್ಸಿ ನರ್ಸಿಂಗ್ ಅಥವಾ ಜಿಎನ್‌ಎಂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ(https://cetonline.karnataka.gov.in/RECT-app_nur_phar/login)ದ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಆಗಸ್ಟ್‌ 07
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್‌ 03(ವಿಸ್ತರಣೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್‌ 04(ವಿಸ್ತರಣೆ)
  • ಅರ್ಜಿ ನಮೂನೆ ತಿದ್ದುಪಡಿ ಮಾಡಲು ಆಗಸ್ಟ್‌ 31 ರಿಂದ ಸೆಪ್ಟೆಂಬರ್‌ 03ರವೆರೆಗೆ ಅವಕಾಶ

ಹುದ್ದೆಗಳ ವಿವರ:

ಹುದ್ದೆಗಳ ಹೆಸರುಆರ್‌ಪಿಸಿ ಹುದ್ದೆಗಳ ಸಂಖ್ಯೆಕೆಕೆ ಹುದ್ದೆಗಳ ಸಂಖ್ಯೆ
ಫಾರ್ಮಸಿ ಆಫೀಸರ್ ಆರ್‌ಪಿಸಿ 92+05(ಕೈ)+01(ಹಿಂ)ಕೆಕೆ 05+06(ಕೈ)
ನರ್ಸಿಂಗ್ ಆಫೀಸರ್ (ಶುಶೂಷಾಧಿಕಾರಿ)ಆರ್‌ಪಿಸಿ 72+11(ಕೈ)+07(ಹಿಂ)ಕ್ರೈಸ್‌-ಕೆಕೆ 17+06(ಹಿಂ) / 11(ಕೈ)
ಒಟ್ಟು188 ಆರ್‌ಪಿಸಿ45 ಕೆಕೆ

*(ಹಿಂ) – ಹಿಂದಿನ ನೇಮಕಾತಿಯಲ್ಲಿ ಭರ್ತಿಯಾಗದೇ ಉಳಿದಿರುವ ಹಿಂಬಾಕಿ ಹುದ್ದೆಗಳು.
(ಕೈ) – ಭಾರತೀಯ ಸಂವಿಧಾನ 371(ಜೆ) ಅನುಷ್ಠಾನ ಸಂಬಂಧ ಕೈತಪ್ಪಿದ ರೋಸ್ಟರ್ ಬಿಂದುಗಳನ್ನು ಸರಿದೂಗಿಸಲು ಭರ್ತಿ ಮಾಡಬೇಕಾಗಿರುವ ಹುದ್ದೆಗಳು.

ಶೈಕ್ಷಣಿಕ ಅರ್ಹತೆ:

ಫಾರ್ಮಸಿ ಆಫೀಸರ್ ಹುದ್ದೆಗೆ; ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಇನ್ ಫಾರ್ಮಸಿ(Diploma in Pharmacy) ಹೊಂದಿರಬೇಕು ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು.

ನರ್ಸಿಂಗ್ ಆಫೀಸರ್ ಹುದ್ದೆಗೆ; ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್(Diploma in General Nursing) ಹೊಂದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು.

ನರ್ಸಿಂಗ್ ಆಫೀಸರ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಹುದ್ದೆಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್(B.Sc Nursing) ಪದವಿ ಅಥವಾ ಪಿಯುಸಿ ಜೊತೆಗೆ ಜಿಎನ್‌ಎಂ(GNM) ಕೋರ್ಸ್ ಪೂರ್ಣಗೊಳಿಸಿರಬೇಕು.

ಗಮನಿಸಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ/ಪ್ರಮಾಣಪತ್ರ ಹೊಂದಿರಬೇಕು. ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಅದರಂತೆ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ;

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು
  • ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು

ಮಾಜಿ ಸೈನಿಕರು, ವಿಶೇಷ ಚೇತನರು, ವಿಧವೆಯರು ಹಾಗೂ ಇತರೆ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ವಿಧಾನ:

  • ಸ್ಪರ್ಧಾತ್ಮಕ ಪರೀಕ್ಷೆ
  • ದಾಖಲೆಗಳ ಪರಿಶೀಲನೆ

ವೇತನ ಶ್ರೇಣಿ:

ಫಾರ್ಮಸಿ ಆಫೀಸರ್ ಹುದ್ದೆಗೆ; ರೂ.44,425 ರಿಂದ 83700/-
ನರ್ಸಿಂಗ್ ಆಫೀಸರ್ ಹುದ್ದೆಗೆ; ರೂ.54175 ರಿಂದ 99400/-

ಅರ್ಜಿ ಶುಲ್ಕ:

  • ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳ(2ಎ/2ಬಿ/3ಎ/3ಬಿ) ಅಭ್ಯರ್ಥಿಗಳಿಗೆ ರೂ.750/- (ರೂ.500 ಅರ್ಜಿ ಶುಲ್ಕ + ರೂ.250 ಪ್ರಕ್ರಿಯೆ ಶುಲ್ಕ)
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.500/- (ರೂ.250 ಅರ್ಜಿ ಶುಲ್ಕ + ರೂ.250 ಪ್ರಕ್ರಿಯೆ ಶುಲ್ಕ)
  • ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.250/- (ಪ್ರಕ್ರಿಯೆ ಶುಲ್ಕ ಮಾತ್ರ)

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/RECT-app_nur_phar/loginಗೆ ಭೇಟಿ ನೀಡಿ, ಡಿಜಿಲಾಕರ್‌ ಮೂಲಕ ನೋಂದಣಿಯಾಗಿ ಅರ್ಜಿ ನಮೂನೆ ತುಂಬಿ. ಕೇಳಲಾದ ದಾಖಲೆಗಳನ್ನು ಅಪ್ಲೋಡ್‌ ಮಾಡಿ ಹಾಗೂ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 080-23460460 ಅನ್ನು ಸಂಪರ್ಕಿಸಬಹುದಾಗಿದೆ.

Important Direct Links:

Last Date Extension Notice PDF(Dated on 31/08/2026)Download
Official Notification PDF(RPC)Download
Official Notification PDF(KK)Download
Posts Clarification (KK) PDFDownload
Posts Clarification (RPC) PDFDownload
Online Application Form LinkApply Now
Official Websitekea.kar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment