ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ವು ಭರ್ತಿಯಾಗದೆ ಉಳಿದ(ಬ್ಯಾಕ್‌ಲಾಗ್) ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲು ಕ್ಲರಿಕಲ್ ಕೇಡರ್‌ನ ಜೂನಿಯರ್ ಅಸೋಸಿಯೇಟ್(ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳನ್ನು ನೇಮಕ ಮಾಡಲು ವಿಶೇಷ ನೇಮಕಾತಿ ಅಭಿಯಾನದ ಮೂಲಕ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕದಲ್ಲಿ 120 ಸ್ಥಾನಗಳು ಸೇರಿದಂತೆ ದೇಶದಾದ್ಯಂತ ಒಟ್ಟು 1538 ಬ್ಯಾಕ್‌ಲಾಗ್ ಸ್ಥಾನಗಳಿಗೆ ಭರ್ತಿ ಮಾಡಲಾಗುತ್ತಿದೆ. ಯಾವುದೇ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಅಧಿಕೃತ ಜಾಲತಾಣ https://sbi.bank.in/web/careers/Current-openings ಅಥವಾ https://ibpsreg.ibps.in/sbijasrdjl26/ದ ಮೂಲಕ ಆ.27ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಮತ್ತು ಶುಲ್ಕ ಪಾವತಿಸಲು ಕೊನೆದಿನಾಂಕ-ಆಗಸ್ಟ್ 07 ರಿಂದ ಆಗಸ್ಟ್ 27ರವರೆಗೆ
- ಪೂರ್ವಭಾವಿ ಪರೀಕ್ಷೆಯ ದಿನಾಂಕ(ತಾತ್ಕಾಲಿಕ)- ಸೆಪ್ಟೆಂಬರ್ 2026
- ಮುಖ್ಯ ಪರೀಕ್ಷೆಯ ದಿನಾಂಕ(ತಾತ್ಕಾಲಿಕ)- ಅಕ್ಟೋಬರ್/ನವೆಂಬರ್ 2026
ಪ್ರವರ್ಗಾವರು ಹುದ್ದೆಗಳ ಸಂಖ್ಯೆ:
- SC/ಎಸ್ಸಿ ವರ್ಗ – 207 ಸ್ಥಾನ
- ST/ಎಸ್ಟಿ – 1219 ಸ್ಥಾನ
- OBC/ಒಬಿಸಿ – 112 ಸ್ಥಾನ
ಶೈಕ್ಷಣಿಕ ಅರ್ಹತೆ:
31-12-2026ರಂತೆ;
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ(Graduation) ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು. ಪದವಿ ಅಂತಿಮ ವರ್ಷದಲ್ಲಿರುವ ಅಭ್ಯರ್ಥಿಗಳೂ ಸಹ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
01-04-2026ರಂತೆ;
ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳು. (ಅಭ್ಯರ್ಥಿಗಳು 02.04.1998 ಕ್ಕಿಂತ ಮುಂಚಿತವಾಗಿ ಮತ್ತು 01.04.2006ಕ್ಕಿಂತ ತಡವಾಗಿ ಜನಿಸಿರಬಾರದು). ನಿಯಮಾನುಸಾರ ವರ್ಗವಾರು ವಯೋಮಿತಿ ಸಡಿಲಿಕೆ ಇರಲಿದೆ.
ಸಂಬಳ:
ವೇತನ ಶ್ರೇಣಿ; ರೂ. 24050-1340/3-28070-1650/3-33020-2000/4-41020-2340/7-57400-4400/1-61800-2680/1-64480.
ಆರಂಭಿಕ ಮೂಲ ವೇತನ; ರೂ.26,730/- (ಪದವೀಧರರಿಗೆ ನೀಡಲಾಗುವ ಎರಡು ಮುಂಗಡ ಇನ್‌ಕ್ರಿಮೆಂಟ್‌ಗಳು ಸೇರಿದಂತೆ).
ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಆರಂಭಿಕ ಒಟ್ಟು ಮಾಸಿಕ ವೇತನವು ಭತ್ಯೆಗಳೂ ಸೇರಿದಂತೆ ಸುಮಾರು ರೂ.46,000/- ಇರಲಿದೆ.
ಆಯ್ಕೆ ಪ್ರಕ್ರಿಯೆ:
- ಹಂತ-1: ಪೂರ್ವಭಾವಿ ಪರೀಕ್ಷೆ
- ಹಂತ-2: ಮುಖ್ಯ ಪರೀಕ್ಷೆ
- ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ(LLPT)
- ಅಂತಿಮ ಮೆರಿಟ್ ಪಟ್ಟಿ
ಅರ್ಜಿ ಶುಲ್ಕ:
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
- ಒಬಿಸಿ ಅಭ್ಯರ್ಥಿಗಳಿಗೆ ರೂ.750/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಹಂತ-1 ಅರ್ಹ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ https://sbi.bank.in/web/careers/current-openingsನಲ್ಲಿ ಲಭ್ಯವಿರುವ https://ibpsreg.ibps.in/sbijasrdjl26/ ಅರ್ಜಿ ನಮೂನೆ ಲಿಂಕ್‌ಗೆ ಭೇಟಿ ನೀಡಿ.
ಹಂತ-2 ನಂತರ ಹೊಸ ಅಭ್ಯರ್ಥಿಗಳಾಗಿದ್ದಲ್ಲಿ, ನೋಂದಣಿ ಮಾಡಿಕೊಳ್ಳಿ
ಹಂತ-3 ಲಾಗಿನ್ ಆದನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಸಂಪೂರ್ಣ ವಿವರಗಳನ್ನು ತುಂಬಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Official Notification PDF | Download |
| Online Application Form Link | Apply Now |
| Official Website | sbi.bank.in |
| More Updates | Karnatakahelp.in |
Good
Hi
Hi