ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯಲ್ಲಿ ಕಾನೂನು ಸಲಹೆಗಾರರ ನೇಮಕ

ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು 05 ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ (Senior Public Prosecutor) ಹುದ್ದೆಗಳ ಭರ್ತಿಗಾಗಿ ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿವರೆಗೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು. NIA ಅಧಿಕೃತ ಜಾಲತಾಣ https://nia.gov.in/recruitment-noticesನಲ್ಲಿ ಅರ್ಜಿ ನಮೂನೆ ಡೌನ್ಲೋಡ್‌ ಮಾಡಿಕೊಂಡು ಭರ್ತಿ ಮಾಡಿ, ಜೊತೆಗೆ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ, ಸಂಸ್ಥೆಯ ಕೇಂದ್ರ ಕಚೇರಿಯ ವಿಳಾಸಕ್ಕೆ ಜ.12ರೊಳಗೆ ತಲುಪುವಂತೆ ತ್ವರಿತ ಅಂಚೆಯ ಮೂಲಕ ಕಳುಹಿಸಿಕೊಡಬೇಕು. ಅರ್ಜಿ … More

ಜಿಲ್ಲಾ ಆಸ್ಪತ್ರೆ ಮತ್ತು ನಮ್ಮ ಕ್ಲಿನಿಕ್‌ಗಳಲ್ಲಿ ಉದ್ಯೋಗಾವಕಾಶ

ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್‌ಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಹೃದಯ ರೋಗ ತಜ್ಞ, ಕನ್ಸಲ್ಟಂಟ್ ಮೆಡಿಸಿನ್, ಫಿಜಿಶಿಯನ್, ಅರಿವಳಿಕೆ ತಜ್ಞ, ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹಾಗೂ ಶುಶ್ರೂಷಕ ಸೇರಿದಂತೆ ಇತರೆ ಒಟ್ಟು 43 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ … More

ರಾಷ್ಟ್ರೀಯ ಪರೀಕ್ಷಾ ಭವನ (NTH): ಯುವ ವೃತ್ತಿಪರರ ಭರ್ತಿ

ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧೀನದ ಪ್ರಯೋಗಾಲಯವಾಗಿರುವ ರಾಷ್ಟ್ರೀಯ ಪರೀಕ್ಷಾ ಭವನ(NTH)ದಲ್ಲಿ ವಿವಿಧ ಯುವ ವೃತ್ತಿಪರರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿವಿಧ ವೃಂದಗಳಲ್ಲಿ ಹಿರಿಯ ಯುವ ವೃತ್ತಿಪರರು(05) ಹಾಗೂ ಕಿರಿಯ ಯುವ ವೃತ್ತಿಪರರು(20) ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಪದವೀಧರ ಅಥವಾ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://nth.gov.in/recruitment-noticesನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ನಿಗದಿತ … More

ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ(BCAS)ದಲ್ಲಿ ಗ್ರೂಪ್ ‘ಎ’, ‘ಬಿ’, ‘ಸಿ’ ಹುದ್ದೆಗಳ ಭರ್ತಿ

ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದಡಿ ಬರುವ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS)ದಲ್ಲಿ ಗ್ರೂಪ್ ‘ಎ’, ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಲಾಗಿದೆ. ಉಪ ನಿರ್ದೇಶಕ, ಕಾನೂನು ಅಧಿಕಾರಿ, ಸಹಾಯಕ ನಿರ್ದೇಶಕ, ಹಿರಿಯ ವಾಯುಯಾನ ಭದ್ರತಾ ಅಧಿಕಾರಿ, ಹಿರಿಯ ವಾಯುಯಾನ ಭದ್ರತಾ ಸಹಾಯಕ, ಸಿಬ್ಬಂದಿ ಕಾರು ಚಾಲಕ ಸೇರಿದಂತೆ ಒಟ್ಟು 43 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಯೋಗ ಹಾಗೂ ಅಲ್ಪಾವಧಿಯ ಆಧಾರದ ಮೇಲೆ ಭರ್ತಿ ಮಾಡಕೊಳ್ಳಲಿದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ … More

ಬಿಜಾಪುರ ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳು.. ಹೀಗೆ ಅರ್ಜಿ ಸಲ್ಲಿಸಿ

ರಕ್ಷಣಾ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮ ಸಂಸ್ಥೆಯಾಗಿರುವ ಬಿಜಾಪುರದ ಸೈನಿಕ ಶಾಲೆಯು ವಿವಿಧ ವೃಂದದ ಸಿಬ್ಬಂದಿಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪಿಜಿಟಿ(02), ಟಿಜಿಟಿ(07), ಸಂಗೀತ ಶಿಕ್ಷಕ(01), ಕೌನ್ಸಿಲರ್(01), ಕ್ರಾಫ್ಟ್ ಇನ್ಸ್ಟ್ರಕ್ಟರ್(01) ಹಾಗೂ ವಾರ್ಡ್ ಬಾಯ್ಸ್(04), ಪಿಇಎಂ/ಪಿಟಿಐ ಕಮ್-ಮ್ಯಾಟ್ರಾನ್ (ಮಹಿಳೆ 01), ನರ್ಸಿಂಗ್ ಸಿಸ್ಟರ್(01) ಸೇರಿ ಒಟ್ಟು 18 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್‌ https://ssbj.in/ನಲ್ಲಿ ನಿಗದಿತ ನಮೂನೆ ಪಡದು ಅರ್ಜಿ ಭರ್ತಿ … More

ನೌಕಾಪಡೆಯಲ್ಲಿ ಕಮಿಷನ್ಡ್ ಆಫೀಸರ್ ಹುದ್ದೆಗಳ ನೇಮಕ

ಭಾರತೀಯ ನೌಕಾಪಡೆಯು 2026ರ ಜುಲೈ ಮಾಹೆಯ 10+2 ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆಯಡಿ ಕಮಿಷನ್ಡ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ. ಕೇರಳದ ಎಜಿಮಲದ ಭಾರತೀಯ ನೌಕಾಪಡೆ ಅಕಾಡೆಮಿಯ ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆಗೆ ಅವಿವಾಹಿತ 37 ಪುರುಷ ಅಭ್ಯರ್ಥಿಗಳನ್ನು ಹಾಗೂ 07 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 44 ಸ್ಥಾನಗಳನ್ನು ಶಾಶ್ವತ ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತರು ಜ.19ರೊಳಗೆ ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ … More

ಕರ್ನಾಟಕ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ; ಅರ್ಜಿ ಹೀಗೆ ಸಲ್ಲಿಸಿ…

ಕರ್ನಾಟಕ ಮತ್ತು ಗೋವಾ ಪ್ರದೇಶದ ಆದಾಯ ತೆರಿಗೆ ಇಲಾಖೆಯು ಕೇಂದ್ರ ನೇರ ತೆರಿಗೆ ಮಂಡಳಿಯ (CBDT) ಯುವ ವೃತ್ತಿಪರ ಯೋಜನೆಯಡಿ ಯುವ ವೃತ್ತಿಪರರ ಭರ್ತಿಗಾಗಿ ಬೆಂಗಳೂರು ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರ ಕಚೇರಿ ಅಧಿಸೂಚನೆ ಹೊರಡಿಸಿದೆ. ಒಟ್ಟು 03 ಯುವ ವೃತ್ತಿಪರ(Young Professional) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಧಿಕೃತ ಜಾಲತಾಣದಲ್ಲಿ ಅರ್ಜಿ ನಮೂನೆಯನ್ನು ಪಡೆದು ತುಂಬಿ ಇ-ಮೇಲ್‌ ವಿಳಾಸ benqaluru.vos@incometax.qov.inಕ್ಕೆ … More

BELನಲ್ಲಿ ಟ್ರೈನಿ ಎಂಜಿನಿಯರ್/ಆಫೀಸರ್-I ಹುದ್ದೆಗಳ ಭರ್ತಿ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಘಾಜಿಯಾಬಾದ್ ಘಟಕದಲ್ಲಿ ಟ್ರೈನಿ ಎಂಜಿನಿಯರ್, ಆಫೀಸರ್-I ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗಗಳಲ್ಲಿ 117 ಟ್ರೈನಿ ಎಂಜಿನಿಯರ್ ಹಾಗೂ 02 ಟ್ರೈನಿ ಆಫೀಸರ್-I ಸೇರಿದಂತೆ ಒಟ್ಟು 119 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲಿ ಜ.09 ಕೊನೆಯ ದಿನವಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು BEL ನ ಅಧಿಕೃತ ವೆಬ್ಸೈಟ್ https://coecmamsupport.com/bel/scanqrಗೆ ಭೇಟಿ … More

ರೈಲ್ವೆ ಇಲಾಖೆಯಲ್ಲಿ ಗ್ರೂಪ್‌-ಡಿ ಹುದ್ದೆಗಳು, ಅರ್ಜಿ ಸಲ್ಲಿಕೆ ಪ್ರಾರಂಭ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ ಸಂಖ್ಯೆ08/2025ರಡಿ ರೈಲ್ವೆ ಇಲಾಖೆಯಲ್ಲಿನ ವಿವಿಧ ಗ್ರೂಪ್‌-ಡಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಹಿರಿಯ ಪ್ರಚಾರ ನಿರೀಕ್ಷಕ, ಪ್ರಯೋಗಾಲಯ ಸಹಾಯಕ ಗ್ರೇಡ್ III, ಮುಖ್ಯ ಕಾನೂನು ಸಹಾಯಕ, ಕಿರಿಯ ಅನುವಾದಕ, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ, ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ವೈಜ್ಞಾನಿಕ ಸಹಾಯಕ ಸೇರಿದಂತೆ ಒಟ್ಟು 312 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಜನವರಿ 29ರೊಳಗೆ ಆರ್‌ಆರ್‌ಬಿ ಅಧಿಕೃತ ಪೋರ್ಟಲ್‌ https://www.rrbapply.gov.in/ಗೆ ಭೇಟಿ ಅರ್ಜಿ … More

ಗಡಿ ಭದ್ರತಾ ಪಡೆ(BSF)ಯಲ್ಲಿ ಕಾನ್‌ಸ್ಟೇಬಲ್ (GD) ಹುದ್ದೆಗಳ ಭರ್ತಿ

ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದಡಿ ಬರುವ ಗಡಿ ಭದ್ರತಾ ಪಡೆ(BSF)ಯಲ್ಲಿ ಕ್ರೀಡಾ ಕೋಟಾದಡಿ 549 ಕಾನ್‌ಸ್ಟೇಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಗಳ ನೇಮಕಾತಿಗಾಗಿ ಬಿಎಸ್‌ಎಫ್ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. 277 ಪುರುಷ ಸ್ಥಾನಗಳು ಹಾಗೂ 272 ಮಹಿಳಾ ಸ್ಥಾನಗಳಿಗೆ ನಿಗದಿತ ಕ್ರೀಡೆ/ಆಟಗಳ ವಿಭಾಗಗಳಲ್ಲಿ ಸಾಧನೆಗೈದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವವರು ಜನವರಿ 15 ರೊಳಗೆ BSF ಅಧಿಕೃತ ವೆಬ್ಸೈಟ್ https://rectt.bsf.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ … More