ಯುಪಿಎಸ್ಸಿ ಎನ್‌ಡಿಎ ಪರೀಕ್ಷೆ-IIರ ನೋಂದಣಿಗೆ ಅರ್ಜಿ ಆಹ್ವಾನ
2026ನೇ ಸಾಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ-IIರ ನೋಂದಣಿಗಾಗಿ ಕೇಂದ್ರ ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಸೇನಾಪಡೆಗೆ 208 ಸ್ಥಾನ, ನೌಕಾಪಡೆ 42 ಸ್ಥಾನ, ವಾಯುಪಡೆಗೆ 120 ಸ್ಥಾನ ಮತ್ತು ನೌಕಾ ಅಕಾಡೆಮಿ 10+2 ಕೆಡೆಟ್ ಪ್ರವೇಶ ಯೋಜನೆಗೆ 24 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂ.09ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsc.gov.in/ಗೆ … More