ದೂರದರ್ಶನ, ಆಕಾಶವಾಣಿಯಲ್ಲಿ ಕಾಪಿರೈಟರ್ ಹುದ್ದೆಗಳ ನೇಮಕಾತಿ

ಭಾರತದ ಸಾರ್ವಜನಿಕ ಸೇವಾ ಪ್ರಸಾರ ಕೇಂದ್ರವಾಗಿರುವ ಪ್ರಸಾರ ಭಾರತೀಯು ದೂರದರ್ಶನದ ಪ್ರಾದೇಶಿಕ ಸುದ್ದಿ ಘಟಕ ಮತ್ತು ಆಕಾಶವಾಣಿಯಲ್ಲಿ ಕಾಪಿರೈಟರ್ (ನಕಲು ಸಂಪಾದಕ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಪ್ರಸ್ತುತ ಖಾಲಿ ಇರುವ ಒಟ್ಟು 29 ಕಾಪಿರೈಟರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಸಾರ ಭಾರತಿ ಆವೇದನ್ ಅಧಿಕೃತ ಪೋರ್ಟಲ್ https://avedan.prasarbharti.org/ ಗೆ ಭೇಟಿ ನೀಡಿ. ಡಿ.03 ರೊಳಗೆ … More

ಬಿ.ಇಡಿ ಪ್ರವೇಶಾತಿ 2025: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

2025-26ನೇ ಸಾಲಿನ ಬಿ.ಇಡಿ ಕೋರ್ಸ್‌ ಪ್ರವೇಶಾತಿಗೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯು ಮಂಗಳವಾರ ಪ್ರಕಟಿಸಿದೆ. ಅರ್ಜಿ ಸಲ್ಲಿಕೆಗೆ ಅ.3 ರಿಂದ ನ.3ವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳನ್ವಯ ರೋಸ್ಟರ್‌ ಮತ್ತು ಮೆರಿಟ್‌ ಆಧಾರದಲ್ಲಿ ಸೀಟು ಹಂಚಿಕೆ ಪಟ್ಟಿ ತಯಾರಿಸಿ ಇಲಾಖೆಯ ವೆಬ್‌ಸೈಟ್‌ https://sts.karnataka.gov.in/GPSTRHK/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್‌ ಬಳಸಿ ನ.25 ರಿಂದ ಡಿ.5ರೊಳಗೆ ನಿಗದಿತ ಶುಲ್ಕದ … More

ಏಕಲವ್ಯ ಮಾದರಿ ವಸತಿ ಶಾಲೆ: 7267 ಹುದ್ದೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿನ (EMRS-2025) ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳ ನೇಮಕಾತಿ ಪರೀಕ್ಷೆ ಶ್ರೇಣಿ-Iರ ವೇಳಾಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಬಿಡುಗಡೆಯಾಗಿದೆ. ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಮಿತಿಯು ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಪ್ರಸ್ತುತ 2025ನೇ ಸಾಲಿನಲ್ಲಿ ವಿವಿಧ ವೃಂದಗಳಲ್ಲಿ ಒಟ್ಟು 7267 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹುದ್ದೆಗಳ ಶ್ರೇಣಿ-I ಪರೀಕ್ಷೆಯನ್ನು ಡಿಸೆಂಬರ್ 13 ರಿಂದ 21 ರವರೆಗೆ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿನಿತ್ಯ ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪರೀಕ್ಷೆಯ … More

ಉತ್ತರ ರೈಲ್ವೆಯಲ್ಲಿ 4116 ಶಿಶಿಕ್ಷುಗಳ ಬೃಹತ್ ನೇಮಕಾತಿ

2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ವಿವಿಧ ಟ್ರೇಡ್‌ಗಳಿಗೆ 4116 ಅಪ್ರೆಂಟಿಸ್‌ ಹುದ್ದೆಗಳ ನಿಯೋಜನೆಗಾಗಿ ಉತ್ತರ ರೈಲ್ವೆ (NR)ಯ ರೈಲ್ವೆ ನೇಮಕಾತಿ ಕೋಶ (RRC)ವು ಅಧಿಸೂಚನೆ ಹೊರಡಿಸಿದೆ. ಫಿಟ್ಟರ್/ಟರ್ನರ್, ವೆಲ್ಡರ್ (ಜಿ&ಇ), ಎಲೆಕ್ಟ್ರಿಷಿಯನ್, ಮೆಷಿನಿಸ್ಟ್, ಪೇಂಟರ್ (ಜನರಲ್)/ಕಾರ್ಪೆಂಟರ್, ಮೆಕ್ಯಾನಿಕ್ (ಮೋಟಾರ್ ವೆಹಿಕಲ್)/ಮೆಕ್ಯಾನಿಕ್ (ಡೀಸೆಲ್), ರೆಫ್ರಿಜರೇಟರ್ ಎಸಿ ಮೆಕ್ಯಾನಿಕ್ ಇತರೆ ಸಂಬಂಧಿತ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ತರಬೇತಿ ನೀಡಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು RRCNR ಅಧಿಕೃತ ಜಾಲತಾಣ https://rrcnr.org/ ಕ್ಕೆ … More

BELನಲ್ಲಿ ಅಪ್ರೆಂಟಿಸ್‌ಶಿಪ್, ವಾಕ್-ಇನ್‌ಗೆ ಕರೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಡಿಪ್ಲೋಮಾ ಹಾಗೂ ಪದವೀಧರ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಬೆಲ್‌ನ ಕಲಿಕಾ ಮತ್ತು ಅಭಿವೃದ್ಧಿ ಕೇಂದ್ರ ಅಧಿಸೂಚನೆ ಪ್ರಕಟಿಸಿದೆ. ಸದರಿ ಹುದ್ದೆಗಳ ಅರ್ಹತಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲಾತಿಗಳೊಂದಿಗೆ ನ.27ರಂದು ನಡೆಸಲಾಗುವ ವಾಕ್-ಇನ್(ಲಿಖಿತ ಪರೀಕ್ಷೆ)ಗೆ ಹಾಜರಾಗಬಹುದು ಎಂದು ಬೆಲ್‌ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ನೇಮಕಾತಿಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ✓ ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ … More

ಉಚಿತ ಸಿಸಿಟಿವಿ ಅಳವಡಿಕೆ ಮತ್ತು ಸರ್ವಿಸಿಂಗ್ ತರಬೇತಿ

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗಿ ಪುರುಷರಿಗೆ ಉಚಿತ ಸಿಸಿಟಿವಿ ಅಳವಡಿಕೆ ಮತ್ತು ಸರ್ವಿಸಿಂಗ್ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಅಂಬರೀಶ ಬಿ ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.15 ರಿಂದ 13 ದಿನಗಳ ಕಾಲ ತರಬೇತಿ ಇರಲಿದ್ದು, ಸ್ವಯಂ ಉದ್ಯೋಗಿಗಳಾಗಲು ಇಚ್ಛಿಸುವ 18 ರಿಂದ 45 ವರ್ಷ ವಯೋಮಾನದ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ಪುರುಷರು ಅರ್ಜಿ ಸಲ್ಲಿಸಬಹುದು. ಉಚಿತ ತರಬೇತಿ … More

“ಏಮ್ಸ್‌” ಸಾಮಾನ್ಯ ನೇಮಕಾತಿ ಪರೀಕ್ಷೆ-4ಕ್ಕೆ ಅರ್ಜಿ ಆಹ್ವಾನ

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು(AIIMS) ಮತ್ತು ಇತರೆ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿನ ಗ್ರೂಪ್-ಬಿ ಹಾಗೂ ಗ್ರೂಪ್-ಸಿ ಹುದ್ದೆಗಳನ್ನು ಸಾಮಾನ್ಯ ನೇಮಕಾತಿ ಪರೀಕ್ಷೆ-4ರ ಮೂಲಕ ಭರ್ತಿಗಾಗಿ ಏಮ್ಸ್‌ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ವಿವಿಧ ಬೋಧಕೇತರ ವೃಂದಗಳಲ್ಲಿ ಖಾಲಿ ಇರುವ ಒಟ್ಟು 1383 ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.02ರೊಳಗೆ ಅರ್ಜಿ ಸಲ್ಲಿಸಲು AIIMS ಅಧಿಕೃತ … More

ಧಾರ್ಮಿಕ ಸಂಸ್ಥೆಗಳಲ್ಲಿನ ಅರ್ಚಕರು, ನೌಕರರ ಮಕ್ಕಳಿಗೆ 1ಲಕ್ಷರೂ.ವರೆಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ 2024-2025ನೇ ಸಾಲಿಗೆ ಧಾರ್ಮಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರು, ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಸಂಸ್ಥೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರ ಮಕ್ಕಳ ಪದವಿ ಪೂರ್ವ ಹಾಗೂ ಪದವಿ ನಂತರದ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ 5 ಸಾವಿರರೂ. ಗಳಿಂದ 1 ಲಕ್ಷರೂ.ಗಳವರೆಗೆ … More

K-RIDEನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾಗಿರುವ ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್‌ನಲ್ಲಿ ವಿವಿಧ ವೃಂದದ ಪ್ರಧಾನ ವ್ಯವಸ್ಥಾಪಕ ಹಾಗೂ ಹಿರಿಯ ಕಚೇರಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನ.15ರಿಂದ ಪ್ರಾರಂಭವಾಗಿದೆ. ಸಿಗ್ನಲಿಂಗ್ ಮತ್ತು ದೂರಸಂಪರ್ಕ, ಖರೀದಿ, ಹಣಕಾಸು ವೃಂದದಲ್ಲಿ 03 ಪ್ರಧಾನ ವ್ಯವಸ್ಥಾಪಕ ಹುದ್ದೆಗಳು ಮತ್ತು 01 ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಡೆಪ್ಯುಟೇಶನ್/ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು … More

ವಾಯುವ್ಯ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಕೆ ಪ್ರಾರಂಭ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ವೃಂದದ ದರ್ಜೆ 2 ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ನೇರ ನೇಮಕಾತಿ ಮೂಲಕ 27 ಹುದ್ದೆಗಳು, 06 ಹುದ್ದೆಗಳನ್ನು ಆಂತರಿಕ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಿದೆ. ಪದವಿ ಮತ್ತು ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅರ್ಹ ಅಭ್ಯರ್ಥಿಗಳು ಡಿ.10 ರೊಳಗೆ ಕೆಇಎ ಅಧಿಕೃತ ವೆಬ್‌ಸೈಟ್‌ ಲಿಂಕ್‌ https://cetonline.karnataka.gov.in/KEARECRUITMENT_NWKRTC/FORMS/LOGIN.ASPXಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು … More