ಪಂಜಾಬ್ ನ್ಯಾಷನಲ್ ಬ್ಯಾಂಕ್(PNB)ನಲ್ಲಿ ‘ಎಸ್‌ಒ’ ಹುದ್ದೆಗಳ ನೇಮಕಾತಿ: ಪದವೀಧರರಿಂದ ಅರ್ಜಿ ಆಹ್ವಾನ

ಬಿ.ಇ, ಬಿ.ಟೆಕ್‌ ಅರ್ಹತೆ | ಸಿಬಿಟಿ ಮುಖೇನ ಆಯ್ಕೆ

Published on:

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ವಿಶೇಷ ಅಧಿಕಾರಿ(SO) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಧಿಕಾರಿ(ಸಿವಿಲ್ ಎಂಜಿನಿಯರ್) 21, ಅಧಿಕಾರಿ(ಎಲೆಕ್ಟ್ರಿಕಲ್ ಇಂಜಿನಿಯರ್) 07 ಹಾಗೂ ಅಧಿಕಾರಿ(ಮೆಕ್ಯಾನಿಕಲ್ ಇಂಜಿನಿಯರ್) 02 ಸೇರಿದಂತೆ ಒಟ್ಟು 30 ಸ್ಥಾನಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆಯ ಮುಖಾಂತರ ಭರ್ತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಮೇ 05 ರೊಳಗೆ ಬ್ಯಾಂಕಿನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಲಿಂಕ್‌-https://ibpsreg.ibps.in/pnbvpapr26/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 21, 2026
  • ಅರ್ಜಿ ಸಲ್ಲಿಸಲು‌ ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 05, 2026
  • ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ – ಮೇ 27, 2026

ಶೈಕ್ಷಣಿಕ ಅರ್ಹತೆ:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ/ಅನುಮೋದಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ./ ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

01-01-2026 ರಂತೆ;

ಕನಿಷ್ಠ ಮಿತಿ 20 ವರ್ಷಗಳು, ಗರಿಷ್ಠ ಮಿತಿ 30 ವರ್ಷಗಳು

ವಯೋಮಿತಿ ಸಡಿಲಿಕೆ; ಇತರ ಹಿಂದುಳಿದ ವರ್ಗಗಳು (ಒಬಿಸಿ) ಅಭ್ಯರ್ಥಿಗಳಿಗೆ 03 ವರ್ಷಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಆನ್‌ಲೈನ್ ಲಿಖಿತ ಪರೀಕ್ಷೆ
  • ವೈಯಕ್ತಿಕ ಸಂದರ್ಶನ
  • ದಾಖಲೆ ಪರಿಶೀಲನೆ

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಯಮಗಳ ಅನುಸಾರ ಮೂಲ ವೇತನ ನೀಡಲಾಗುತ್ತದೆ ಜೊತೆಗೆ ಡಿಎ, ಸಿಸಿಎ, ಎಚ್‌ಆರ್‌ಎ/ಲೀಸ್ಡ್ ಅಕಾಮಡೇಷನ್, ರಜೆ ದರ ರಿಯಾಯಿತಿ, ವೈದ್ಯಕೀಯ ವಿಮೆ, ನಿವೃತ್ತಿ ಸೌಲಭ್ಯಗಳು ಮತ್ತು ಇತರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ:

ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹1180
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ₹59

ಅರ್ಜಿ‌ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ:

• ಮೊದಲಿಗೆ IBPS ನ‌ ಅಧಿಕೃತ ಜಾಲತಾಣ https://ibpsreg.ibps.in/pnbvpapr26/ ಕ್ಕೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ನೋಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.

Punjab National Bank So Engineer Online Form 2026
Pnb So Engineer Online Form 2026

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ‌ಪಾವತಿ‌ ಮಾಡಿ.

• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://pnb.bank.in/Home.aspx
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment