ಕೆಸೆಟ್‌ 2025ರ ತಾತ್ಕಾಲಿಕ ಫಲಿತಾಂಶ ಪಟ್ಟಿ ಪ್ರಕಟ

2025ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್‌ 2025)ಯ ತಾತ್ಕಾಲಿಕ ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಶುಕ್ರವಾರ ಬಿಡುಗಡೆ ಮಾಡಿದೆ. ಅಂತಿಮ ಕೀ ಉತ್ತರಗಳನ್ವಯ ತಾತ್ಕಾಲಿಕ ಅಂಕಗಳನ್ನು ನ.15 ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ನ.17ರವರೆಗೆ ಅವಕಾಶ ನೀಡಲಾಗಿತ್ತು. ಸದರಿ ಪರೀಕ್ಷೆಯ ವಿಷಯವಾರು ಕಟ್‌-ಆಫ್‌ ಅಂಕದೊಂದಿಗೆ ತಾತ್ಕಾಲಿಕ ಫಲಿತಾಂಶ ಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಲಾಗಿದೆ. ಯುಜಿಸಿ ಸೂತ್ರ ಮತ್ತು ರಾಜ್ಯ ಮೀಸಲಾತಿ ನೀತಿಯ ಪ್ರಕಾರ ಅಭ್ಯರ್ಥಿಗಳ ಮೆರಿಟ್‌ ಪಟ್ಟಿಯನ್ನು ತಯಾರಿಸಲಾಗಿದೆ. 🠂 ಹೆಚ್‌.ಪ್ರಸನ್ನ, … More

RRB NTPC ಯುಜಿ ಸಿಬಿಟಿ-1ರ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು CEN 06/2024ರ ಅಡಿಯಲ್ಲಿ ಅಧಿಸೂಚಿಸಲಾದ NTPC ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಪೂರ್ವ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ಫಲಿತಾಂಶವನ್ನು ನ.21ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಒಟ್ಟು 3445 ಹುದ್ದೆಗಳ ನೇಮಕಾತಿ ಸಂಬಂಧ ಮೊದಲನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ -1 ಅನ್ನು ಆಗಸ್ಟ್ 07 ರಿಂದ ಸೆಪ್ಟೆಂಬರ್ 09 ರವರೆಗೆ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಸದರಿ ಪರೀಕ್ಷೆಯ ಫಲಿತಾಂಶವನ್ನು RRB ಅಧಿಕೃತ ಜಾಲತಾಣ … More

ರಾಯಚೂರು ಮತ್ತು ಕೊಪ್ಪಳ ಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗಾವಕಾಶ

ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ(RDCCB)ವು ಕಲ್ಯಾಣ ಕರ್ನಾಟಕ ವೃಂದ ಮತ್ತು ಉಳಿಕೆ ಮೂಲ ವೃಂದದ ಗ್ರೂಪ್‌-ಎ, ಗ್ರೂಪ್‌-ಬಿ, ಗ್ರೂಪ್‌-ಸಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಕೆಕೆ ವೃಂದದಲ್ಲಿ 53 ಹುದ್ದೆಗಳು ಹಾಗೂ 17 ನಾನ್‌-ಕೆಕೆ ವೃಂದದಲ್ಲಿ ಶಾಖಾ ವ್ಯವಸ್ಥಾಪಕರು ಗ್ರೇಡ-1, ಸಹಾಯಕರ ಗ್ರೇಡ-1, ಅಟೆಂಡರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಪಿಯುಸಿ, ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನ.21 ರಿಂದ ಡಿ.22ರವರೆಗೆ … More

ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ವಿವಿಧ ಇಲಾಖೆ/ಸಂಸ್ಥೆ/ನಿಗಮ/ಮಂಡಳಿಯಲ್ಲಿನ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಗುರುವಾರ ಬಿಡುಗಡೆ ಮಾಡಿದೆ. ಕೆಕೆ ವೃಂದದ ಪರೀಕ್ಷೆಗಳು ಡಿ.20, 21 ಮತ್ತು 2026ರ ಜ.24, ಫೆ.22ರಂದು ನಡೆಯಲಿವೆ. 2026ರ ಜ.10, 11, 12 ಮತ್ತು 25 ರಂದು ಉಳಿಕೆ ಮೂಲ ವೃಂದ ಪರೀಕ್ಷೆಗಳು ನಡೆಯಲಿವೆ. ಇನ್ನುಳಿದ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ … More

RRC ದಕ್ಷಿಣ ಪೂರ್ವ ರೈಲ್ವೆ(SER)ಯಲ್ಲಿ ಅಪ್ರೆಂಟಿಸ್‌ ತರಬೇತಿ

ದಕ್ಷಿಣ ಪೂರ್ವ ರೈಲ್ವೆ(SER)ಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಒಟ್ಟು 1785 ಅಭ್ಯರ್ಥಿಗಳಿಗೆ ಗೊತ್ತುಪಡಿಸಿದ ಟ್ರೇಡ್‌ಗಳಿಗೆ ಭರ್ತಿ ಮಾಡಿಕೊಂಡು ತರಬೇತಿ ನೀಡಲು ರೈಲ್ವೆ ನೇಮಕಾತಿ ಕೋಶ (RRC) ಅರ್ಜಿ ಆಹ್ವಾನಿಸಿದೆ. ವಿವಿಧ ಕಾರ್ಯಾಗಾರಗಳು/ಘಟಕಗಳಲ್ಲಿ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್, ಪೇಂಟರ್ ಹಾಗೂ ರೆಫ್ರಿಜರೇಟರ್ ಮತ್ತು ಎಸಿ ಮೆಕ್ಯಾನಿಕ್ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ತರಬೇತಿ ನೀಡಲಿದೆ. ಸದರಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಲು ಡಿ.17 ಕೊನೆ ದಿನವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RRCSER ಅಧಿಕೃತ … More

RRB ಗ್ರೂಪ್‌-ಡಿ ಪರೀಕ್ಷೆ 2025ರ ಪರೀಕ್ಷಾ ನಗರ, ದಿನಾಂಕ ಹಾಗೂ ಶಿಫ್ಟ್‌ಗಳ ವಿವರ ಬಿಡುಗಡೆ

ರೈಲ್ವೆ ನೇಮಕಾತಿ ಮಂಡಳಿಯು CEN NO: 08/2024ರ ಅಡಿಯಲ್ಲಿ ಅಧಿಸೂಚಿಸಲಾದ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಸಂಬಂಧ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಅಂತಿಮ ವೇಳಾಪಟ್ಟಿ ಹಾಗೂ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು ಬುಧವಾರ (ನ.18)ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಜನವರಿ 22ರಂದು ಒಟ್ಟು 32,438 ಗ್ರೂಪ್ ಡಿ (7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್‌ನ ಹಂತ 1ರ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಲಾಗಿತ್ತು. ಮೊದಲ ಹಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯನ್ನು 2025ರ … More

ಪಿಎಂ ಕಿಸಾನ್‌ 21ನೇ ಕಂತಿನ ಹಣ ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಾಯಿತ 9 ಕೋಟಿ ರೈತರ ಬ್ಯಾಂಕ್‌ ಖಾತೆಗೆ ಪಿಎಂ ಕಿಸಾನ್‌ 21ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿಜಿಟಲ್‌ ವರ್ಗಾವಣೆ ಮಾಡಿದರು. ತಮಿಳುನಾಡಿನ ಕೊಯಮತ್ತೂರಿನಲ್ಲಿ ಬುಧವಾರ(ನ.19) ಮಧ್ಯಾಹ್ನ 1:30 ಗಂಟೆಗೆ ನಡೆದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಹಣ ವರ್ಗಾವಣೆ ಹಾಗೂ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸಿ, ಸುಮಾರು 18,000 ಸಾವಿರ ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ … More

ಸಂಪುಟ ಸಚಿವಾಲಯದಲ್ಲಿ ಉಪ ಕ್ಷೇತ್ರ ಅಧಿಕಾರಿ(DFO) ಹುದ್ದೆಗಳ ನೇಮಕ

ಭಾರತ ಸರ್ಕಾರದ ಸಂಪುಟ ಸಚಿವಾಲಯದಲ್ಲಿ 250 ಉಪ ಕ್ಷೇತ್ರ ಅಧಿಕಾರಿ(Deputy Field Officer) ಹುದ್ದೆಗಳ ಭರ್ತಿಗಾಗಿ ಆಫ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯ ಗೇಟ್‌ ಸ್ಕೋರ್‌ ಜೊತೆಗೆ ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ/ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸುದ್ದಿಯ ಕೊನೆಯಲ್ಲಿ ನೀಡಲಾದ ವಿಳಾಸಕ್ಕೆ ಡಿ.14ರೊಳಗೆ ತಲುಪುವಂತೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ … More

JNVST Class 6 Hall Ticket 2025: ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ

ನವೋದಯ ವಿದ್ಯಾಲಯ ಸಮಿತಿಯು 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿ ಸಂಬಂಧ ನಡೆಸಲಾಗುವ ಜವಾಹ‌ರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯ (JNVST) ಪ್ರವೇಶ ಪತ್ರವನ್ನು ಮಾಡಲಾಗಿದೆ. 6ನೇ ತರಗತಿ ಪ್ರವೇಶಾತಿಗಾಗಿ 2025ರ ಡಿಸೆಂಬರ್ 13ರಂದು ಮೊದಲ ಹಂತದಲ್ಲಿ ನಡೆಸಲಾಗುವ ಜವಾಹ‌ರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯ (JNVST) ಪ್ರವೇಶ ಪತ್ರವನ್ನು ಬಿಡುಗಡೆ ಅಧಿಕೃತವಾಗಿ ಮಾಡಲಾಗಿದ್ದು, JNVST ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು NVS ಅಧಿಕೃತ ಜಾಲತಾಣ https://navodaya.gov.in/nvs/en/Home1/ ಕ್ಕೆ ಭೇಟಿ ನೀಡಿ. ತಮ್ಮ ಲಾಗಿನ್ ರುಜುವಾತುಗಳನ್ನು … More

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೇಷಲಿಸ್ಟ್‌ ಆಫೀಸರ್‌(SO) ಹುದ್ದೆಗಳ ನೇಮಕ

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಬ್ಯಾಂಕ್ ಆಫ್ ಇಂಡಿಯಾ (bank of India)ನಲ್ಲಿ 115 ಸ್ಪೇಷಲಿಸ್ಟ್‌ ಆಫೀಸರ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ವಿವಿಧ ವಿಭಾಗಗಳಲ್ಲಿ ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ, ಕಾನೂನು ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ನ.30ರೊಳಗೆ ಅಧಿಕೃತ ವೆಬ್ ಸೈಟ್ https://ibpsreg.ibps.in/boioct25/ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ನೇಮಕಾತಿಯ ಅಧಿಸೂಚನೆಯಲ್ಲಿ … More