238 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ನೇಮಕಾತಿ

ಹಾವೇರಿ: ಜಿಲ್ಲೆಯ ವಿವಿಧ ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಡಿಯಲ್ಲಿ 238 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು, ಸವಣೂರು ಹಾಗೂ ಶಿಗ್ಗಾಂವ್ ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಡಿಯಲ್ಲಿ ಖಾಲಿ ಇರುವ 61 ಅಂಗನವಾಡಿ ಕಾರ್ಯಕರ್ತೆ ಹಾಗೂ 177 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗೌರವ ಸೇವೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು … More

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕ್ರೀಡಾಕೋಟಾದಡಿ ಗ್ರೂಪ್ ಸಿ, ಡಿ ಹುದ್ದೆಗಳಿಗೆ ನೇಮಕಾತಿ

ದಕ್ಷಿಣ ಮಧ್ಯ ರೈಲ್ವೆಯಲ್ಲಿ 2025-26ನೇ ಸಾಲಿಗೆ ಕ್ರೀಡಾಕೋಟಾದಡಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶ (RRC) ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ (ಗ್ರೂಪ್ ಸಿ-21 ಹಾಗೂ ಗ್ರೂಪ್ ಡಿ – 40) ಸೇರಿದಂತೆ ಒಟ್ಟು 61 ಹುದ್ದೆಗಳಿಗೆ ಕ್ರೀಡಾ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನ.24ರೊಳಗೆ RRC SCR ಅಧಿಕೃತ ಜಾಲತಾಣ https://iroams.com/rrc_scr_sports2025/ಕ್ಕೆ ಭೇಟಿ … More

ಗುಪ್ತಚರ ಇಲಾಖೆ (IB) ಸೆಕ್ಯೂರಿಟಿ ಅಸಿಸ್ಟೆಂಟ್(MT) ಶ್ರೇಣಿ-1 ಪರೀಕ್ಷೆಯ ಕೀ ಉತ್ತರ ಬಿಡುಗಡೆ

ಗೃಹ ವ್ಯವಹಾರಗಳ ಸಚಿವಾಲಯದ ಸಹಾಯಕ ಗುಪ್ತಚರ ಬ್ಯುರೋದಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್(ಮೋಟಾರ್ ಟ್ರಾನ್ಸ್ಪೋರ್ಟ್) ಹುದ್ದೆಗಳ ನೇಮಕಾತಿ ಸಂಬಂಧ ಅ.30ಕ್ಕೆ ನಡೆಸಲಾದ ಶ್ರೇಣಿ-1 ಪರೀಕ್ಷೆಯ ಕೀ ಉತ್ತರವನ್ನು ನ.01 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಗುಪ್ತಚರ ಇಲಾಖೆಯಲ್ಲಿ ಒಟ್ಟು 455 ಭದ್ರತಾ ಸೆಕ್ಯೂರಿಟಿ ಅಸಿಸ್ಟೆಂಟ್ (ಮೋಟಾರ್ ಟ್ರಾನ್ಸ್ಪೋರ್ಟ್) ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಶ್ರೇಣಿ-1 ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನುಅ.30ರಂದು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು, ಇದೀಗ ಸದರಿ ಪರೀಕ್ಷೆಯ ಕೀ ಉತ್ತರವನ್ನು ಇಲಾಖೆಯೂ IB ಅಧಿಕೃತ … More

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಇನ್ಸ್ಪೆಕ್ಟರ್ (ಲೆಕ್ಕಾಧಿಕಾರಿ)ಗಳ ನೇಮಕ

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ(ಐ.ಟಿ.ಬಿ.ಪಿ) ಮಹಾನಿರ್ದೇಶನಾಲಯವು ಗ್ರೂಪ್ “ಬಿ” ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 05 ಇನ್ಸ್ಪೆಕ್ಟರ್ (ಲೆಕ್ಕಾಧಿಕಾರಿ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನ.21 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: (ಎ) … More

“NHAI”ನಲ್ಲಿ ಸ್ಟೆನೋಗ್ರಾಫರ್, ಲೆಕ್ಕಪರಿಶೋಧಕ ಸೇರಿ ವಿವಿಧ ಹುದ್ದೆಗಳ ನೇಮಕಾತಿ

ಭಾರತ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ವಿವಿಧ ವೃಂದಗಳಲ್ಲಿ ಉಪ ವ್ಯವಸ್ಥಾಪಕರು, ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ, ಕಿರಿಯ ಭಾಷಾಂತರ ಅಧಿಕಾರಿ, ಲೆಕ್ಕಪರಿಶೋಧಕ ಹಾಗೂ ಸ್ಟೆನೋಗ್ರಾಫರ್ ಸೇರಿದಂತೆ ಒಟ್ಟು 84 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NAHI ಅಧಿಕೃತ ಜಾಲತಾಣ https://cdn.digialm.com/EForms/configuredHtml/1258/95810/Index.htmlಕ್ಕೆ ಭೇಟಿ … More

BMRCL – “ನಮ್ಮ ಮೆಟ್ರೋ”ದಲ್ಲಿ ಸೂಪರ್ವೈಸರ್ ಹುದ್ದೆಗಳ ನೇಮಕ

ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಸೂಪರ್ವೈಸರ್ (ಕಾರ್ಯಾಚರಣಾ ಮೇಲ್ವಿಚಾರಕರ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರೋ ಯೋಜನಾ ವಿಭಾಗದಲ್ಲಿ ಕಾರ್ಯಾಚರಣಾ ಮೇಲ್ವಿಚಾರಕರ (ಕಾರ್ಯಾಚರಣೆ ಸುರಕ್ಷತೆ) ಒಟ್ಟು 04 ಹುದ್ದೆಗಳಿಗೆ ಅರ್ಹ ಮತ್ತು ಅನುಭವಿ ನಿವೃತ್ತ ರೈಲ್ವೆ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತೆಯನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು BMRCL ಅಧಿಕೃತ ವೆಬ್ಸೈಟ್ https://english.bmrc.co.in/career/ಗೆ ಭೇಟಿ ನೀಡಿ. ನ.17ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೇಮಕಾತಿ ಅಧಿಸೂಚನೆಯಲ್ಲಿ ಬಿಎಂಆರ್‌ಸಿಎಲ್‌ ತಿಳಿಸಿದೆ. … More

2026ರ ವಾಣಿಜ್ಯ ಪರೀಕ್ಷೆಗೆ ನೋಂದಾಯಿಸಲು ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಜನವರಿ-2026ರ ವಾಣಿಜ್ಯ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಹೊರಡಿಸಿದ ಪ್ರಕಟಣೆ ತಿಳಿಸಿದೆ. 2026ರ ಜನವರಿಯಲ್ಲಿ ನಡೆಯುವ ವಾಣಿಜ್ಯ ಪರೀಕ್ಷೆಗಳಾದ ಆಂಗ್ಲ ಮತ್ತು ಕನ್ನಡ ಬೆರಳಚ್ಚು ಪರೀಕ್ಷೆ ಹಾಗೂ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅರ್ಹ ಮತ್ತು ಆಸಕ್ತ ಖಾಸಗಿ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ವಾಣಿಜ್ಯ ಶಿಕ್ಷಣ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಲು ನ.15ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಮುಖ … More

NMMS ವಿದ್ಯಾರ್ಥಿವೇತನ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

2025-26ನೇ ಶೈಕ್ಷಣಿಕ ಸಾಲಿಗೆ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸಕ್ತ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ (Local body schools) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು NMMS ಪರೀಕ್ಷೆಗೆ ಅರ್ಜಿ ಸಲ್ಲಸಲು ಅರ್ಹರು. ಸದರಿ ಪರೀಕ್ಷೆಯು ಕೆ.ಎಸ್‌.ಕ್ಯು.ಎ.ಎ.ಸಿ (KSQUAC)ವತಿಯಿಂದ ಡಿ.7ಕ್ಕೆ ನಡೆಯಲಿದೆ. ಆಸಕ್ತ ಮತ್ತು … More

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಚೇರಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯದ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಶಿರಸ್ತೇದಾರ್/ಉಪ ತಹಶೀಲ್ದಾರ್(01), ಆರ್ಥಿಕ ಮತ್ತು ಲೆಕ್ಕ ಪರಿಶೋಧನಾಧಿಕಾರಿ(01) ಹಾಗೂ ಐಟಿ ಸಿಬ್ಬಂದಿ 2 ಕಿರಿಯ ಪ್ರೋಗ್ರಾಮರ್ & ನೆಟ್ವರ್ಕಿಂಗ್ ಮ್ಯಾನೇಜರ್(01) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತೆ. ಸದರಿ ಹುದ್ದೆಗಳಿಗೆ ಸೇರ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ನವೆಂಬರ್ 09ರೊಳಗೆ ಆಫ್ ಲೈನ್ ಮೂಲಕ ತಮ್ಮ ರೆಸ್ಯೂಮ್‌(Resume) ಅನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ನೇಮಕಾತಿಯ ಪ್ರಮುಖ ದಿನಾಂಕಗಳು: … More

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್‌ ತರಬೇತಿಗೆ ಅವಕಾಶ; ಅರ್ಜಿ ಆಹ್ವಾನ

ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್‌ ತರಬೇತಿ ನೀಡಲು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಒಟ್ಟು 21 ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಬರವಣಿಗೆಯಲ್ಲಿ ಪರಿಣಿತಿ ಹೊಂದಿರುವ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ನ.15ರೊಳಗೆ https://forms.gle/Qth3f5FjMHXSxTB68 ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಮಾಧ್ಯಮ … More