CTET February 2026: ಫಲಿತಾಂಶ ಪ್ರಕಟ

ಪ್ರಸಕ್ತ ಸಾಲಿನ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(ಫೆಬ್ರವರಿ ಆವೃತ್ತಿ)ಯ ಫಲಿತಾಂಶವನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಸೋಮವಾರ ಪ್ರಕಟಿಸಿದೆ. ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಫೆ.07 ಮತ್ತು 08ರಂದು ನಡೆಸಲಾಗಿತ್ತು. ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ https://cbseresults.nic.in/CtetFeb26ii/CtetFeb26iix.htmಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು. ಸಿಟಿಇಟಿ ಫಲಿತಾಂಶ ಪರಿಶೀಲನೆ ಹೇಗೆ..? ಹಂತ – 1 ಅಧಿಕೃತ ಲಿಂಕ್‌https://cbseresults.nic.in/CtetFeb26ii/CtetFeb26iix.htmಗೆ ಭೇಟಿ. ಹಂತ-2 ನಂತರ ಅಭ್ಯರ್ಥಿಗಳು ತಮ್ಮ “Enter your Roll Number/ರೋಲ್‌ ನಂಬರ್‌” ನಮೂದಿಸಿ, “Submit/ಸಲ್ಲಿಸು” ಮೇಲೆ ಒತ್ತುವ … More

‘ಬ್ಯಾಂಕ್ ನೋಟ್ ಪೇಪರ್ ಮಿಲ್’ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿ

ಮೈಸೂರು: ಇಲ್ಲಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(BNPMIPL) ವಿವಿಧ ವೃಂದದ ಸಹಾಯಕ ವ್ಯವಸ್ಥಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಏ.11ರವರೆಗೆ ಅವಕಾಶವಿದೆ. ಸಹಾಯಕ ವ್ಯವಸ್ಥಾಪಕ(ಫೈನಾನ್ಸ್ & ಅಕೌಂಟ್ಸ್) 02 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ(ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್) 02 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ(ಸಿವಿಲ್) 02 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಅಭ್ಯರ್ಥಿಗಳಿಗೆ ಮಾಸಿಕ ₹52,000 ಸಂಬಳ ಸಿಗಲಿದೆ. ಅಧಿಕೃತ ವೆಬ್‌ಸೈಟ್‌ https://bnpmindia.com/ನಲ್ಲಿ ಲಭ್ಯವಿರುವ ವಿಸ್ತೃತ ಅಧಸೂಚನೆ ಓದಿ, ಅಲ್ಲಿಯೇ ಅರ್ಜಿ ನಮೂನೆ … More

ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ 2025-26ನೇ ಸಾಲಿಗೆ ವಸತಿಸಹಿತ ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ನೋಂದಣಿ ಮಾಡಲು ಮಾ.26 ರಿಂದ 31ರವೆರೆಗೆ ಅವಕಾಶವಿದೆ. ವಿದ್ಯಾರ್ಥಿಯು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಹ ಆಸಕ್ತರು ನೋಂದಣಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://erp.dom.karnataka.gov.in/aplಗೆ ಭೇಟಿ ನೀಡಿ. ಪ್ರಮುಖ ದಿನಾಂಕಗಳು: ವಿದ್ಯಾರ್ಹತೆ: ವಿದ್ಯಾರ್ಥಿಯು 12ನೇ ತರಗತಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು. ವಯಸ್ಸಿನ ಮಿತಿ: 31-03-2026ರಂತೆ; … More

RDPR: ಓಂಬುಡ್ಸ್‌ಪರ್ಸನ್ಸ್‌ ಹುದ್ದೆಗಳ ಭರ್ತಿ

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಸಂಬಂಧ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ವಿವಿಧ ಜಿಲ್ಲೆಗಳಿಗೆ ಓಂಬುಡ್ಸ್‌ಪರ್ಸನ್ಸ್‌ ನೇಮಕಾತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದು ಅರೆಕಾಲಿಕ ಹುದ್ದೆಯಾಗಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಜಾಲತಾಣ(rdpr.karnataka.gov.in)ದ ಮೂಲಕ ಅರ್ಜಿ ನಮೂನೆ … More

ತುಮಕೂರು ಮಹಾನಗರ ಪಾಲಿಕೆ: ಪೌರ ಕಾರ್ಮಿಕರ ನೇಮಕಾತಿ

ತುಮಕೂರು: ಜಿಲ್ಲೆಯ ಮಹಾನಗರಪಾಲಿಕೆ ಸೇರಿದಂತೆ ತಿಪಟೂರು, ಶಿರಾ ನಗರಸಭೆಗಳಿಗೆ ಪೌರಕಾರ್ಮಿಕ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಏ.09ರ ಸಂಜೆ 5 ಗಂಟೆಯವರೆಗೆ ಕಾಲಾವಕಾಶವಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಆಯಾ ಸಂಬಂಧಿತ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಜೊತೆಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: • ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ … More

RITES ಲಿಮಿಟೆಡ್‌ನಲ್ಲಿ ವಿವಿಧ ಉದ್ಯೋಗಾವಕಾಶ

ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿರುವ, ರೈಲ್ವೆ ಸಚಿವಾಲಯದ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ(RITES) ಲಿಮಿಟೆಡ್‌ 15 ಸಹಾಯಕ (ಮಾನವ ಸಂಪನ್ಮೂಲ-HR) ಮತ್ತು 11 ಸಹಾಯಕ ವ್ಯವಸ್ಥಾಪಕ(ಹಣಕಾಸು) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಸ್ಥಾನಗಳಿಗೆ ನಿಯಮಿತ ಆಧಾರದಡಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆರ್‌ಐಟಿಇಎಸ್‌ ಲಿಮಿಟೆಡ್ ಅಧಿಕೃತ ಜಾಲತಾಣ https://recruit.rites.com/frmRegistration.aspxಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಏ.27ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ✓ ಸಹಾಯಕ (HR) ಹುದ್ದೆಗೆ; … More

ಐಐಐಟಿ ರಾಯಚೂರು: ಸಹಾಯಕ ಪ್ರಾಧ್ಯಾಪಕರ ಭರ್ತಿ

ರಾಯಚೂರು: ಇಲ್ಲಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿಆರ್‌)ಯು ಸಹಾಯಕ ಪ್ರಾಧ್ಯಾಪಕ ಗ್ರೇಡ್‌-I ಮತ್ತು II ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಒಟ್ಟು 08 ಸ್ಥಾನಗಳಿಗೆ ನೇಮಕ ನಡೆಯುತ್ತಿದೆ. ಅಭ್ಯರ್ಥಿಗಳು ಪಿಎಚ್.ಡಿ ಪೂರ್ಣಗೊಳಿಸಿರಬೇಕು. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಐಐಐಟಿಆರ್‌ ಅಧಿಕೃತ ಜಾಲತಾಣ https://iiitr.ac.in/careersಕ್ಕೆ ಭೇಟಿ ನೀಡಿ, ಏ.20ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸಂಬಂಧಿತ ವಿಭಾಗಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಮತ್ತು ಸಂಶೋಧನಾ ದಾಖಲೆಯೊಂದಿಗೆ ಪಿಎಚ್‌ಡಿ ಪದವಿಯನ್ನು … More

ಕಲಬುರಗಿ ಜಿಲ್ಲೆಯಲ್ಲಿ ಪೌರಕಾರ್ಮಿಕರ ನೇರ ನೇಮಕಾತಿ

ಕಲಬುರಗಿ: ಜಿಲ್ಲೆಯ ಶಹಬಾದ್ ನಗರಸಭೆಯ ವ್ಯಾಪ್ತಿಯಲ್ಲಿ 42 ಪೌರಕಾರ್ಮಿಕರ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಅರ್ಜಿ ಆಹ್ವಾನಿಸಿದೆ. ಸದರಿ ಹುದ್ದೆಗೆ ಯಾವುದೇ ವಿದ್ಯಾರ್ಹತೆ ಅನ್ವಯಿಸುವುದಿಲ್ಲ.ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ತಿಳಿದಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 01ರ ಸಂಜೆ 5.30 ಗಂಟೆಯವರೆಗೆ ಅವಕಾಶವಿದ್ದು, ಆಸಕ್ತ ಉದ್ಯೋಗಾಕಾಂಕ್ಷಿಗಳು ಶಹಬಾದ್ ನಗರಸಭೆ ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಜೊತೆಗೆ ನಿಗದಿತ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು … More

KREIS/EMRS 2026: ಅಂತಿಮ ಫಲಿತಾಂಶ, ಮೆರಿಟ್‌ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಮಾ.01ರಂದು ನಡೆದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಂಗಳವಾರ ಪ್ರಕಟಿಸಿದೆ. ತಾತ್ಕಾಲಿಕ ಫಲಿತಾಂಶವನ್ನು ಮಾ.17ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಸ್ವೀಕೃತ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿ ಅಭ್ಯರ್ಥಿಗಳ ಅಂತಿಮ ಫಲಿತಾಂಶ ಹಾಗೂ ತಾತ್ಕಾಲಿಕ ಮೆರಿಟ್‌ ಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ(https://cetonline.karnataka.gov.in/kea/kreis2026)ದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಸಿದೆ. … More

ಪೌರಕಾರ್ಮಿಕರ ನೇಮಕಾತಿ

ದಾವಣಗೆರೆ: ಜಿಲ್ಲೆ ವ್ಯಾಪ್ತಿಯ ಹರಿಹರ ನಗರಸಭೆಗೆ 04 ಪೌರಕಾರ್ಮಿಕರ ನೇಮಕಾತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಏ.10ರವರೆಗೆ ಕಾಲಾವಕಾಶವಿದೆ. ಕನ್ನಡ ಮಾತನಾಡಲು ಬರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಹರಿಹರ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: ಸದರಿ ಹುದ್ದೆಗೆ ಯಾವುದೇ ವಿದ್ಯಾರ್ಹತೆ ಅನ್ವಯಿಸುವುದಿಲ್ಲ ಹಾಗೂ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ತಿಳಿದಿರಬೇಕು. ಅರ್ಜಿದಾರರ ಗಮನಕ್ಕೆ; ಪ್ರಸ್ತುತ ಕೆಲಸ … More