ICAIನಲ್ಲಿ ನಿರ್ದೇಶಕ, ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಿಶ್ವದ ಅತಿದೊಡ್ಡ ವೃತ್ತಿಪರ ಲೆಕ್ಕಪತ್ರ ಸಂಸ್ಥೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICAI)ದಲ್ಲಿ ನಿರ್ದೇಶಕ(ಕಾನೂನು) ಮತ್ತು ನಾನಾ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 109 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.15ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ಜಾಲತಾಣ https://icaisr.onlineregistrationform.org/ICAISR/ಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ವಿಭಾಗವಾರು … More

ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಕೀ ಉತ್ತರ ಪ್ರಕಟ

2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ವಿಷಯವಾರು ಅಧಿಕೃತ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಿಸಿದೆ. ಮಾ.13 ರಿಂದ ಏ.02ವರೆಗೆ ಪರೀಕ್ಷೆಗಳು ಜರುಗಿದ್ದವು. ವಿದ್ಯಾರ್ಥಿಗಳು ಮಂಡಲಿಯ ಅಧಿಕೃತ ಜಾಲತಾಣ(https://kseeb.karnataka.gov.in/)ದ ಮೂಲಕ ವಿಷಯವಾರು ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಲು ಅವಕಾಶ ನೀಡಿದೆ. ಗಮನಿಸಿ ವಿದ್ಯಾರ್ಥಿಗಳೇ: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶದ ಕುರಿತು ಯಾವುದೇ ಅಧಿಕೃತ ದಿನಾಂಕದ ಕುರಿತು ಮಾಹಿತಿ ಲಭ್ಯವಿರುವುದಿಲ್ಲ. ಊಹಾಪೋಹಗಳಿಗೆ ಕಿವಿಗೊಡದಿರಿ. ವಿಷಯವಾರು ಕೀ ಉತ್ತರ ನೋಡುವುದು ಹೇಗೆ.? … More

IRFCನಲ್ಲಿ ಸಹಾಯಕ, ಸ.ವ್ಯವಸ್ಥಾಪಕ ಹುದ್ದೆಗಳ ಭರ್ತಿ

ರೈಲ್ವೆ ಸಚಿವಾಲಯದಡಿ ಬರುವ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್‌ ಲಿಮಿಟೆಡ್(IRFC) ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಸಹಾಯಕ(ಎನ್‌ಇ5 ಲೆವೆಲ್‌) 16 ಸ್ಥಾನಗಳು, ಸಹಾಯಕ ವ್ಯವಸ್ಥಾಪಕ/ಫೈನಾನ್ಸ್‌(ಇ1 ಲೆವೆಲ್‌) 07 ಸ್ಥಾನಗಳು ಸೇರಿದಂತೆ ಒಟ್ಟು 23 ಅಭ್ಯರ್ಥಿಗಳನ್ನು ನೇಮಕ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 01ರವರೆಗೆ ಅವಕಾಶವಿದೆ. ಬಿ.ಕಾಂ ಜೊತೆಗೆ ಸಿಎ/ಸಿಎಂಎ, ಎಂಬಿಎ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗಾಗಿ ಐಆರ್‌ಎಫ್‌ಸಿ ಅಧಿಕೃತ ಜಾಲತಾಣ https://irfc.co.in/active-jobsಕ್ಕೆ ಭೇಟಿ ನೀಡಿ. ನೇಮಕಾತಿಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ … More

ಉಚಿತ ‘ಟೈಲರಿಂಗ್’ ತರಬೇತಿ ಶಿಬಿರ

ಹೊಸಕೋಟೆ: ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಏಪ್ರಿಲ್ ತಿಂಗಳ ಮೂರನೆಯ ವಾರದಿಂದ 31 ದಿನ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಂಬರೀಶ ಬಿ ಸಿ ಅವರು ತಿಳಿಸಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಯ 18-45 ವಯೋಮಾನದ ಕನ್ನಡ ಓದಲು-ಬರೆಯಲು ತಿಳಿದಿರುವ ಯುವತಿಯರು ಹಾಗೂ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಊಟ, ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುತ್ತದೆ. ಬಿಪಿಎಲ್‌ ಕಾರ್ಡುದಾರರಿಗೆ ಮೊದಲ ಆದ್ಯತೆ ನೀಡಲಾಗುವುದು. … More

ಹೊಸ ನ್ಯಾಯಬೆಲೆ ಅಂಗಡಿ ಮಂಜೂರು; ಅರ್ಜಿ ಆಹ್ವಾನ

ಯಾದಗಿರಿ: ಯಾದಗಿರಿ ತಾಲೂಕು ಸೇರಿದಂತೆ ಶಹಾಪೂರ, ಹುಣಸಗಿ ತಾಲೂಕಿನ ನಾನಾ ಗ್ರಾಮಗಳಿಗೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಅವರು ತಿಳಿಸಿದ್ದಾರೆ. ಯಾದಗಿರಿ ತಾಲೂಕಿನ ಸೌರಾಷ್ಟ್ರ ಹಳ್ಳಿ, ಕಿಲ್ಲನಕೇರಾ, ಶಹಾಪೂರ ತಾಲೂಕಿನ ಮುಡಬೂಳ, ರಸ್ತಾಪೂರ, ಹುಣಸಗಿ ತಾಲೂಕಿನ ನಾರಾಯಣಪೂರದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು,ಅಗತ್ಯ ದಾಖಲೆಗಳೊಂದಿಗೆ ಏ.30ರೊಳಗೆ ಅರ್ಜಿ(ನಮೂನೆ-ಎ)ರಲ್ಲಿ … More

ವಾಯುಪಡೆ ಶಾಲೆಯಲ್ಲಿ ಹೆಲ್ಪರ್ಸ್ ಸೇರಿ ವಿವಿಧ ಹುದ್ದೆಗಳ ಭರ್ತಿ

ಬೆಂಗಳೂರು: ಜಾಲಹಳ್ಳಿ ವಾಯುಪಡೆ ಶಾಲೆಯಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 06 ಪಿಜಿಟಿ, 01 ಟಿಜಿಟಿ, 08 ಪಿಆರ್‌ಟಿ, 05 ಹೆಲ್ಪರ್ಸ್ ಹಾಗೂ 05 ಪಾರ್ಟ್ ಟೈಮ್ ಇನ್ಸ್ಟ್ರಕ್ಟರ್ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ನೇಮಕ ನಡೆಯಲಿದ್ದು, ಗುತ್ತಿಗೆ, ನಿಯಮಿತ, ಎಂಪೆನೆಲ್‌ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.11 ಕೊನೆಯದಿನವಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು AFSJAL ಅಧಿಕೃತ ಜಾಲತಾಣ https://www.afsjal.org/index.phpದಲ್ಲಿ ವಿದ್ಯಾರ್ಹತೆ ಕುರಿತು ನೀಡಲಾದ ಅಧಿಸೂಚನೆ ಪರಿಶೀಲಿಸಿ, ಅರ್ಜಿ ನಮೂನೆ ಡೌನ್ಲೋಡ್ … More

IDBI ಬ್ಯಾಂಕಿನಲ್ಲಿ ಸ್ಪೇಷಲಿಸ್ಟ್‌ ಆಫೀಸರ್‌ಗಳ ಭರ್ತಿ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(IDBI) 33 ವಿವಿಧ ಸ್ಪೇಷಲಿಸ್ಟ್‌ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಡೆಪ್ಯೂಟಿ ಜನರಲ್ ಮ್ಯಾನೇಜರ್ 05 ಸ್ಥಾನಗಳು, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ 11 ಸ್ಥಾನಗಳು, ಮ್ಯಾನೇಜರ್ 09 ಸ್ಥಾನಗಳು, ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ 08 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಮಾ.25 ರಿಂದ ಏ.08 ರವರೆಗೆ ಕಾಲಾವಕಾಶವಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಐಡಿಬಿಐ ಅಧಿಕೃತ ಜಾಲತಾಣದ ಕರಿಯರ್‌ ವಿಭಾಗದಲ್ಲಿ … More

ಕೊಚ್ಚಿಯ NSRY, NAYನಲ್ಲಿ ಅಪ್ರೆಂಟಿಸ್‌ಶಿಪ್‌

ಕೊಚ್ಚಿಯ ನೌಕಾ ಹಡಗು ದುರಸ್ತಿ ಯಾರ್ಡ್(NSRY) ಹಾಗೂ ನಾವೆಲ್ ಏರ್ ಕ್ರಾಫ್ಟ್ ಯಾರ್ಡ್(NAY)ನಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಕಂಪ್ಯೂಟರ್ ಆಪರೇಷನ್ ಆಫ್ ಪ್ರೋಗ್ರಾಮಿಂಗ್, ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್, ಫಿಟ್ಟರ್ ಹಾಗೂ ಮೆಕ್ಯಾನಿಕ್ ಸೇರಿದಂತೆ ವಿವಿಧ ಟ್ರೇಡ್‌ಗಳಿಗೆ ಒಟ್ಟು 240 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಏ.03ರೊಳಗೆ ತಲುಪಿಸಬೇಕು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ: ಕಂಪ್ಯೂಟರ್ ಆಪರೇಷನ್ … More

ಖನಿಜ ಮತ್ತು ವಸ್ತು ತಂತ್ರಜ್ಞಾನ ಸಂಸ್ಥೆ(IMMT)ಯಲ್ಲಿ MTS ಹುದ್ದೆಗಳ ನೇಮಕಾತಿ

ಭುವನೇಶ್ವರಂ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯಡಿ ಬರುವ ಪ್ರಮುಖ ಸಂಶೋಧನಾ ಸಂಸ್ಥೆಯಾಗಿರುವ ಖನಿಜ ಮತ್ತು ವಸ್ತು ತಂತ್ರಜ್ಞಾನ ಸಂಸ್ಥೆ(IMMT)ಯು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 07 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಏ.21ರವರೆಗೆ ಅವಕಾಶವಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ 25 ವರ್ಷದೊಳಗಿನ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಐಎಂಎಂಟಿ ಅಧಿಕೃತ ಜಾಲತಾಣ https://www.immt.res.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: IMMT ಅಧಿಕೃತ … More

JEE ಮುಖ್ಯ ಪರೀಕ್ಷೆ 2026ರ ಸೆಷನ್-2: ಪ್ರವೇಶ ಪತ್ರ ಬಿಡುಗಡೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜಂಟಿ ಪ್ರವೇಶ ಪರೀಕ್ಷೆ(ಮುಖ್ಯ) 2026 ಸೆಷನ್-2ರ ಪ್ರವೇಶ ಪತ್ರವನ್ನು ಮಾ.29ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏ.02 ರಿಂದ 08ರವರಿಗೆ ಪರೀಕ್ಷೆ ಜರುಗಲಿವೆ. ಪರೀಕ್ಷೆಯ ಪ್ರವೇಶ ಪತ್ರ, ಸಿಟಿ ಇಂಟೀಮೇಷನ್ ಸ್ಲಿಪ್ ಹಾಗೂ ವೇಳಾಪಟ್ಟಿಯನ್ನು ಜೆಇಇ ಎನ್‌ಟಿಎ ಅಧಿಕೃತ ಜಾಲತಾಣ https://jeemain.nta.nic.in/ದ ಮೂಲಕ ಪರಿಶೀಲಿಸಬಹುದು ಹಾಗೂ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. JEE-2026 ಸೆಷನ್-2 ಪ್ರವೇಶ ಪತ್ರ ಬಿಡುಗಡೆ ಏ.02 ಮತ್ತು … More