ರೈಲ್ವೆ ಇಲಾಖೆ: ಸೆಕ್ಷನ್‌ ಕಂಟ್ರೋಲರ್‌ ನೇಮಕಾತಿ

ಪದವೀಧರರಿಗೆ ಅವಕಾಶ

Published on:

Updated On:

ರೈಲ್ವೆ ನೇಮಕಾತಿ ಮಂಡಳಿಯು ಕೇಂದ್ರೀಕೃತ ಉದ್ಯೋಗ ಅಧಿಸೂಚನೆ(ಸಿಇಎನ್) ಸಂಖ್ಯೆ 03/2026ರಡಿ ಸೆಕ್ಷನ್‌ ಕಂಟ್ರೋಲರ್‌(ವಿಭಾಗ ನಿಯಂತ್ರಕ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ಒಟ್ಟು 119 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಪದವೀಧರ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಸಕ್ತ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣ https://www.rrbapply.gov.in/ದ ಮೂಲಕ ಆ.14ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 15, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್‌ 14, 2026
  • ಅರ್ಜಿ ಶುಲ್ಕ ಪಾವತಿಗೆ ಕೊನೆದಿನ – ಆಗಸ್ಟ್‌ 16
  • ಅರ್ಜಿ ನಮೂನೆ ತಿದ್ದುಪಡಿಗೆ ಆ.17 ರಿಂದ 26ರವರೆಗೆ ಅವಕಾಶವಿದೆ.

ಶೈಕ್ಷಣಿಕ ಅರ್ಹತೆ:

ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ:

01-07-2026ರಂತೆ;

ಕನಿಷ್ಠ 20 ವರ್ಷಗಳು ಗರಿಷ್ಠ 33 ವರ್ಷಗಳು

ಆಯ್ಕೆ ವಿಧಾನ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)
  • ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ(CBAT)
  • ದಾಖಲೆ ಪರಿಶೀಲನೆ(DV)
  • ವೈದ್ಯಕೀಯ ಪರೀಕ್ಷೆ(MD)

ಸಂಬಳ:

7ನೇ CPC ಯಲ್ಲಿ ಮಟ್ಟ 6ರಂತೆ ಮಾಸಿಕವಾಗಿ ರೂ.35400/- ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಮಹಿಳೆ/ಟ್ರಾನ್ಸ್ಜೆಂಡರ್‌/ಮಾಜಿ ಸೈನಿಕ/ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ/ಇಬಿಸಿ/ಪಿಡಬ್ಲ್ಯೂಬಿಡಿ ವರ್ಗದ ಅಭ್ಯರ್ಥಿಗಳಿಗೆ – ರೂ.250/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.500/-

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗೆ…

ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ, ಹೊಸ ಬಳಕೆದಾರರಾಗಿದ್ದಲ್ಲಿ ಹೊಸ ಖಾತೆ ಸೃಜಿಸಿ ಅಥವಾ ಈಗಾಗಲೇ ಬಳಕೆದಾರರಾಗಿದ್ದಲ್ಲಿ ನೇರವಾಗಿ ಲಾಗಿನ್‌ ಮಾಡಿಕೊಳ್ಳಿ. ನಂತರ “Online Application” ವಿಭಾಗದ ಮೇಲೆ ಕ್ಲಿಕ್ಕಿಸಿ, ಮುಂದೆ CEN No. 03/2026 – Section Controller ರಡಿ ನೀವು ಸಲ್ಲಿಸಲಿಚ್ಛಿಸುವ ರೈಲ್ವೆ ನೇಮಕಾತಿ ಮಂಡಳಿಯನ್ನು ಆಯ್ಕೆ ಮಾಡಿಕೊಳ್ಳಿ. ಉದಾ: ಬೆಂಗಳೂರು. ತದನಂತರ “Next” ಬಟನ್‌ ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ನಮೂನೆ ಪುಟ ಪರದೆಯಾಗುತ್ತದೆ. ಅಲ್ಲಿ ಈ ಕೆಳಗಿನ ಹಂತಗಳನ್ನು ಯಶಸ್ವಿಯಾಗಿ ಮಾಹಿತಿ ತುಂಬುವ ಮುಖೇನ ಅರ್ಜಿ ಸಲ್ಲಿಸಿ;

– Personal Details(ವೈಯಕ್ತಿಕ ವಿವರಗಳು)
– Other Details(ಇತರೆ ವಿವರಗಳು)
– Educational Qualification(ಶೈಕ್ಷಣಿಕ ಅರ್ಹತೆ)
– Upload Profile Documents (ಅಪ್ಲೋಡ್‌ ಪ್ರೊಫೈಲ್‌ ದಾಖಲೆಗಳು)
– Preference and Preview and Submit(ಆದ್ಯತೆ, ಪೂರ್ವವೀಕ್ಷಣೆ ಮತ್ತು ಸಲ್ಲಿಸು)

Important Direct Links:

Official Short Notification PDFDownload
Official Detailed Notification PDFDownload
Online Application Form LinkApply Now
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

16 thoughts on “ರೈಲ್ವೆ ಇಲಾಖೆ: ಸೆಕ್ಷನ್‌ ಕಂಟ್ರೋಲರ್‌ ನೇಮಕಾತಿ”

Leave a Comment