ಕೆಸಿಇಟಿ 2026: ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ನೋಂದಣಿಯ ಕೊನೆ ದಿನಾಂಕವನ್ನು ಫೆ.16 ರಿಂದ ಫೆ.22ರವೆರೆಗೆ ವಿಸ್ತರಿಸಿದೆ. ಅರ್ಜಿ ಶುಲ್ಕ ಪಾವತಿಸಲು ಫೆ.24ರ ಸಂಜೆ 5:30ರವೆರೆಗೆ ಅವಕಾಶವಿದೆ. ಇನ್ನು ಯಾರು ಅರ್ಜಿ ಸಲ್ಲಿಕೆ ಮಾಡಿಲ್ಲವೋ ಹಾಗೂ ಅರ್ಜಿ ಶುಲ್ಕ ಪಾವತಿಸಲು ಬಾಕಿ ಉಳಿದ ಅಭ್ಯರ್ಥಿಗಳ ಅನುಕೂಲಕ್ಕಾಗಿ ದಿನಾಂಕವನ್ನು ವಿಸ್ತರಿಸಲಾಗಿದೆ. ಸದರಿ ಪರೀಕ್ಷೆಗೆ ಇಲ್ಲಿಯವರೆಗೆ ಸುಮಾರು 287909 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಕೆಇಎ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. … More

ಕೆಇಎ: ಅಂಕಪಟ್ಟಿ ಪ್ರಕಟ

ವಿವಿಧ ಇಲಾಖೆ/ಮಂಡಳಿ/ಸಂಸ್ಥೆ/ನಿಗಮದ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ರಾಜ್ಯದಾದ್ಯಂತ ಜ.25ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂಕ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಇಲಾಖಾವಾರು ಪ್ರತ್ಯೇಕ ಅಂಕಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/keaದಲ್ಲಿ ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಬಹುದಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ಸಹಾಯಕ ಸಂಚಾರ ನಿರೀಕ್ಷಕ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಜೂನಿಯರ್ ಸಹಾಯಕ, ಕರ್ನಾಟಕ ಸೋಪ್ಸ್ … More

KREIS/EMRS 2026: ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಾಲೆಗಳ ಪ್ರವೇಶಾತಿ ಪ್ರವೇಶ ಪರೀಕ್ಷೆ ನೋಂದಣಿಯ ಕೊನೆಯ ದಿನಾಂಕವನ್ನು ಫೆ.07ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಫೆ.02ರವರೆಗೆ ನೋಂದಣಿಗೆ ಅವಕಾಶವಿತ್ತು. ಪರಿಶಿಷ್ಟ ಜಾತಿಯ ಒಳವೀಸಲು ಪ್ರವರ್ಗಗಳಾದ ಪ್ರವರ್ಗ ಎ, ಪ್ರವರ್ಗ ಬಿ, ಪ್ರವರ್ಗ ಸಿ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರದಲ್ಲಿ ಮುದ್ರಿತವಾಗಿರುವ ಆರ್‌ಡಿ ಸಂಖ್ಯೆ ನಮೂದಿಸಿ, ಅರ್ಜಿಯನ್ನು ಸಲ್ಲಿಸಬೇಕು ಎಂದು ಕೆಇಎ … More

ಕೆಇಎ ಜ.25ರ ಪರೀಕ್ಷೆಯ ಕೀ ಉತ್ತರ ಪ್ರಕಟ

ವಿವಿಧ ಇಲಾಖೆ/ಸಂಸ್ಥೆ/ಮಂಡಳಿ/ನಿಗಮದ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಜ.25ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮಂಗಳವಾರ(ಜ.27) ಪ್ರಕಟಿಸಿದೆ. ಕೀ ಉತ್ತರಗಳಿಗೆ ಜ.29ರ ಬೆಳಗ್ಗೆ 09 ಗಂಟೆಯೊಳಗೆ ಪ್ರತಿ ಆಕ್ಷೇಪಣೆಗೆ ₹25ರಂತೆ ಪಾವತಿಸಿ, ಆಕ್ಷೇಪಣೆ ಸಲ್ಲಿಸಬಹುದು. ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ದ ಮೂಲಕ ಪತ್ರಿಕೆವಾರು ಕೀ ಉತ್ತರಗಳ ಪರಿಶೀಲನೆ ಹಾಗೂ ಆಕ್ಷೇಪಣೆ ಸಲ್ಲಿಸಬಹುದು. ಕೆಇಎ ಜ.25ರ ಪರೀಕ್ಷೆಯ ಕೀ ಉತ್ತರಗಳನ್ನು ಹೇಗೆ ಡೌನ್ಲೋಡ್‌ ಮಾಡುವುದು? ಹಂತ-1 ಕೆಇಎ ಅಧಿಕೃತ … More

ಏಕಲವ್ಯ ಮಾದರಿ ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ನೋಂದಣಿ ಆರಂಭ

2026-27ನೇ ಸಾಲಿಗೆ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 12 ಏಕಲವ್ಯ ಮಾದರಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ನೋಂದಣಿ ಮಾಡಬಹುದು. ಕೆಇಎ ಪರೀಕ್ಷೆ ನಡೆಸಿ, ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಿದೆ. ಪ್ರವೇಶ ಪರೀಕ್ಷೆಯು ಮಾ.01ರಂದು ಜರುಗಲಿದೆ. ಫೆ.02ರೊಳಗೆ ನೋಂದಣಿ ಮಾಡಲು ನಿಮಗೆ ಹತ್ತಿರವಿರುವ, ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗೆ ನಿಗದಿತ ದಾಖಲೆಗಳೊಂದಿಗೆ ಭೇಟಿ ನೀಡಿ. ಮುಖ್ಯ ದಿನಾಂಕಗಳು: … More

ಕೆಇಎ ಜ.25ರ ಸ್ಪರ್ಧಾತ್ಮಕ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ

ವಿವಿಧ ಇಲಾಖೆ/ಸಂಸ್ಥೆ/ಮಂಡಳಿ/ನಿಗಮದ ಮೂಲ ಉಳಿಕೆ ವೃಂದದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಸಂಬಂಧ ಜ.25ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಂಗಳವಾರ ಬಿಡುಗಡೆಗೊಳಿಸಿದೆ. ಸಾಮಾನ್ಯ ಜ್ಞಾನ-2 ಪತ್ರಿಕೆ ಬೆಳಗ್ಗೆ 10:30 ರಿಂದ 12:30ರವೆರೆಗೆ ಹಾಗೂ ಕನ್ನಡ, ಇಂಗ್ಲೀಷ್‌, ಕಂಪ್ಯೂಟರ್‌ ಜ್ಞಾನ-2 ಪತ್ರಿಕೆ ಮಧ್ಯಾಹ್ನ 02:30ರಿಂದ ಸಂಜೆ 4:30ರವರೆಗೆ ಜರುಗಲಿದೆ. ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣದ ಲಿಂಕ್‌ https://www.cetonline.karnataka.gov.in/KEA_EXAM_PORTAL/Forms/Candidates/Login ಮೂಲಕ ತಮ್ಮ ಹಾಲ್‌ ಟಿಕೆಟ್‌ ಡೌನ್ಲೋಡ್‌ … More

ಕೆಇಎ ಪರೀಕ್ಷೆ: ಜ.10, 11ರ ತಾತ್ಕಾಲಿಕ ಫಲಿತಾಂಶ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ/ಮಂಡಳಿಯ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಜ.10 ಮತ್ತು ಜ.11ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಕೀ ಉತ್ತರ ಹಾಗೂ ತಾತ್ಕಾಲಿಕ ಫಲಿತಾಂಶವನ್ನು ಸೋಮವಾರ(ಜ.19) ಪ್ರಕಟಿಸಿದೆ. ಪ್ರಕಟಿತ ಅಂತಿಮ ಕೀ ಉತ್ತರ, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶಕ್ಕೆ ಜ.21ರ ಬೆಳಗ್ಗೆ 9 ರೊಳಗೆ ಪ್ರಾಧಿಕಾರ ವೆಬ್‌ಸೈಟ್‌ https://cetonline.karnataka.gov.in/kea/vdptrecnhk2025ನಲ್ಲಿ ಲಭ್ಯವಿರುವ ಲಿಂಕ್‌ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ. ಕೆಇಎ … More

ಕೆಇಎ ಜ.17, 18ರ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೂಲ ಉಳಿಕೆ ವೃಂದದ ಕಿರಿಯ ಅಧಿಕಾರಿ(ಸಾಮಾಗ್ರಿ ಮತ್ತು ಉಗ್ರಾಣ, ಉತ್ಪಾದನೆ ಮತ್ತು ನಿರ್ವಹಣೆ) ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಬಿಡುಗಡೆಗೊಳಿಸಿದೆ. ನಿರ್ದಿಷ್ಟ ಪತ್ರಿಕೆ-2 ಅನ್ನು ಒಳಗೊಂಡ ಪರೀಕ್ಷೆಯು ಜ.17ಕ್ಕೆ ಕಿರಿಯ ಅಧಿಕಾರಿ(ಸಾಮಾಗ್ರಿ ಮತ್ತು ಉಗ್ರಾಣ) ಹುದ್ದೆಗೆ ಮಧ್ಯಾಹ್ನ 3 ರಿಂದ ಸಂಜೆ 5ರವೆಗೆ ಹಾಗೂ 18ರಂದು ಕಿರಿಯ ಅಧಿಕಾರಿ(ಉತ್ಪಾದನೆ ಮತ್ತು ನಿರ್ವಹಣೆ) ಹುದ್ದೆಗಾಗಿ … More

ಕೆಇಎ ಜ.10, 11ರ ಪರೀಕ್ಷೆಯ ಕೀ ಉತ್ತರ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೂಲ ಉಳಿಕೆ ವೃಂದದ ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಕಿರಿಯ ಅಭಿಯಂತರ(ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಹುದ್ದೆಗಳ ಭರ್ತಿಗಾಗಿ ಜ.10 ಹಾಗೂ 11 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ. ಪ್ರಕಟಿಸಿದ ಕೀ ಉತ್ತರಗಳಿಗೆ ಜ.14ರ ಬೆಳಗ್ಗೆ 11 ಗಂಟೆಯೊಳಗೆ ನಿಗದಿತ ಲಿಂಕ್‌ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ನ “ವಿವಿಧ ಇಲಾಖೆಗಳ ನೇಮಕಾತಿ(NON-HK) – 2025” ವಿಭಾಗದಲ್ಲಿ … More

ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶ ಪರೀಕ್ಷೆ: Morarji Desai School Admission Application Form 2026-27

2026-27ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು, ಪಠ್ಯಕ್ರಮ ಮುಂತಾದ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದೆ. Morarji Desai School Admission 2026-27 2026-27ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಈ ಕೆಳಗಿನಂತಿವೆ ಅಭ್ಯರ್ಥಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು; ವಿದ್ಯಾರ್ಥಿ … More