ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಅವಶ್ಯಕತೆ; ಅರ್ಜಿ ಆಹ್ವಾನ

ದೆಹಲಿಯ ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ. ಸಲಹೆಗಾರ(04), ಕಾನೂನು ಸಲಹೆಗಾರ(02) ಮತ್ತು ಹಿರಿಯ ಯೋಜನಾ ಸಲಹೆಗಾರ(01) ಸೇರಿದಂತೆ ಒಟ್ಟು 07 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಸಚಿವಾಲಯದ ಅಧಿಕೃತ ಜಾಲತಾಣ(https://ayush.gov.in/)ದ ಮೂಲಕ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ, ಫೆ.20ರೊಳಗೆ ತಲುಪುವಂತೆ “ಶ್ರೀಮತಿ ಶೀಲಾ ಟಿರ್ಕಿ, ಅಂಡರ್ ಸೆಕ್ರೆಟರಿ (ಆಡಳಿತ), … More

ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ನಾನ್ ಟೆಕ್ನಿಷಿಯನ್ ಉದ್ಯೋಗಾವಕಾಶ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ಅಂಗಸಂಸ್ಥೆ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ವಿವಿಧ ತಂತ್ರಜ್ಞರಲ್ಲದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಿರಿಯ ಹಿಂದಿ ಅನುವಾದಕ(01), ಭದ್ರತಾ ಸಹಾಯಕ ಮತ್ತು ಕಾವಲು ‍& ವಾರ್ಡ್ ಸಹಾಯಕ(01), ಬಹುಕಾರ್ಯಕ ಸಿಬ್ಬಂದಿ(10) ಸೇರಿ ಒಟ್ಟು 12 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು CRRI ಅಧಿಕೃತ ಜಾಲತಾಣ https://crridom.gov.in/en/recruitmentದಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಫೆ.23ರೊಳಗೆ ಆನ್‌ಲೈನ್‌ ಮುಖೇನ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಪ್ರಮುಖ … More

DRDO: ಬೆಂಗಳೂರಿನ CABSನಲ್ಲಿ ಫೆಲೋಶಿಪ್‌

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಮುಖ ಸಂಶೋಧನಾ ಕೇಂದ್ರವಾಗಿರುವ ಬೆಂಗಳೂರಿನ ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ಸ್(CABS)ನಲ್ಲಿ 10 ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗಾಗಿ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಅಥವಾ ಎಂ.ಇ/ಎಂ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ಫೆ.22 ರೊಳಗೆ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಸ್ಥೆಯ ಇ-ಮೇಲ್‌ ವಿಳಾಶಕ್ಕೆ ರವಾನಿಸಬೇಕು. ನಂತರ ಫೆ.25, 26ಕ್ಕೆ “ಸೆಂಟರ್ ಫಾರ್ ಏರ್‌ಬೋರ್ನ್ … More

CCMB ಕೇಂದ್ರದಲ್ಲಿ ತಂತ್ರಜ್ಞರ ನೇಮಕಾತಿ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಅಂಗ ಸಂಸ್ಥೆಯಾಗಿರುವ ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರ(CCMB)ದಲ್ಲಿ 50 ತಂತ್ರಜ್ಞ-1 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.23ರೊಳಗೆ ಅರ್ಜಿ ಸಲ್ಲಿಕೆಗಾಗಿ CCMB ಅಧಿಕೃತ ಜಾಲತಾಣ (https://www.ccmb.res.in/Careers/Regular-Positions)ಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 55% ಅಂಕಗಳೊಂದಿಗೆ ವಿಜ್ಞಾನ ವಿಷಯಗಳೊಂದಿಗೆ ಎಸ್‌ಎಸ್‌ಸಿ/10ನೇ ತರಗತಿ ಅಥವಾ ತತ್ಸಮಾನ ಅರ್ಹತೆಯೊಂದಿಗೆ … More

ಯಂತ್ರ ಇಂಡಿಯಾದಲ್ಲಿ ಅಪ್ರೆಂಟಿಸ್‌ಶಿಪ್‌

ರಕ್ಷಣಾ ಸಚಿವಾಲಯ ಅಧೀನದ ಯಂತ್ರ ಇಂಡಿಯಾ ಲಿಮಿಟೆಡ್‌ದಲ್ಲಿ ಅಪ್ರೆಂಟಿಸ್‌ ಕಾಯ್ದೆ 1961ರಡಿ 59ನೇ ಬ್ಯಾಚ್‌ ಮೂಲಕ ಟ್ರೇಡ್‌ ಅಪ್ರೆಂಟಿಸ್‌ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಐಟಿಐ ವರ್ಗ(2843), ನಾನ್ ಐಟಿಐ ವರ್ಗ(1136) ಸೇರಿದಂತೆ ಸುಮಾರು 3979 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ನೆಲೆಗೊಂಡಿರುವ ಭಾರತೀಯ ಆರ್ಡಿನೆನ್ಸ್ ಮತ್ತು ಆರ್ಡನೆನ್ಸ್ ಸಲಕರಣೆ ಕಾರ್ಖಾನೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು, ತರಬೇತಿ ನೀಡಲಿದೆ. 10ನೇ ಹಾಗೂ ಐಟಿಐ ಪೂರ್ಣಗೊಳಿಸಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾ.03ರೊಳಗೆ ಅಧಿಕೃತ … More

ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ನೋಂದಣಿ ಪ್ರಾರಂಭ

ಕೇಂದ್ರ ಲೋಕಸೇವಾ ಆಯೋಗ 2026ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ನೋಂದಣಿಗಾಗಿ ಬುಧವಾರ ಅಧಿಸೂಚನೆ ಬಿಡುಗಡೆಗೊಳಿಸಿದೆ. ಐಎಎಸ್‌, ಐಪಿಎಸ್‌, ಐಪಿಎಸ್‌ ಸೇರಿದಂತೆ ಇತರೆ ಹುದ್ದೆಗಳ ಭರ್ತಿ ಸಂಬಂಧ ಮೇ 24ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಸದರಿ ಪರೀಕ್ಷೆಯ ಮೂಲಕ ಸುಮಾರು 933 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಪದವೀಧರ ಅಭ್ಯರ್ಥಿಗಳು ಪರೀಕ್ಷೆಯ ನೋಂದಣಿಗೆ ಅರ್ಹರು. ಆಸಕ್ತರು ನೋಂದಣಿಗಾಗಿ ಆಯೋಗದ ಅಧಿಕೃತ ವೆಬ್‌ಸೈಟ್‌ https://upsconline.nic.in/loginಗೆ ಭೇಟಿ ನೀಡಿ. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. … More

ಕ್ರೀಡಾ ಅಭ್ಯರ್ಥಿಗಳಿಗೆ ತೆರಿಗೆ ಇಲಾಖೆಯಲ್ಲಿ ನೌಕರಿ

ಗುಜರಾತ್‌ ಆದಾಯ ಮತ್ತು ತೆರಿಗೆ ಇಲಾಖೆ ಕ್ರೀಡಾ ನೇಮಕಾತಿಯಡಿ ತೆರಿಗೆ ಸಹಾಯಕ ಮತ್ತು ಬಹು-ಕಾರ್ಯಕಾರಿ ಸಿಬ್ಬಂದಿ(MTS) ಹುದ್ದೆಗಳ ನೇಮಕಾತಿಗಾಗಿ ಅರ್ಹ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತೆರಿಗೆ ಸಹಾಯಕ(18) ಹಾಗೂ ಬಹು-ಕಾರ್ಯಕಾರಿ ಸಿಬ್ಬಂದಿ(28) ಸೇರಿ ಒಟ್ಟು 46 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಿದೆ. ವಿವಿಧ ಕ್ರೀಡೆ/ಆಟಗಳಲ್ಲಿ ಸಾಧನೆಗೈದ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ಆಸಕ್ತ ಉದ್ಯೋಗಾಕಾಂಕ್ಷಿಗಳು ಫೆ.21ರೊಳಗೆ ಗುಜರಾತ್‌ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://incometaxgujarat.gov.in/ನ ಮೂಲಕ ಅರ್ಜಿ ಸಲ್ಲಿಸಲು … More

ಕೋಲಾರ: ಡಾಟಾ ಮ್ಯಾನೇಜರ್ ಭರ್ತಿ; ಸಂದರ್ಶನಕ್ಕೆ ಆಹ್ವಾನ

ಕೋಲಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ಸ್ ಸೊಸೈಟಿ ಅಧೀನದ ಜಿಲ್ಲೆಯ ಏಡ್ಸ್ ನಿಯಂತ್ರಣ ಘಟಕಕ್ಕೆ ಡಾಟಾ ಮ್ಯಾನೇಜರ್ ಹುದ್ದೆಯ ಭರ್ತಿ ಸಂಬಂಧ ಫೆ.06ರಂದು ಬೆಳಗ್ಗೆ 11ಗಂಟೆಗೆ ಎಸ್‌.ಎನ್‌.ಆರ್‌ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ನೇರ ಸಂದರ್ಶನ ಜರುಗಲಿದೆ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿಗಳು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಯಾವುದೇ ವಿಷಯದಲ್ಲಿ ಪದವಿ ಹಾಗೂ ಸಂಬಂಧಿಸಿದ ವಿಷಯದಲ್ಲಿ ಅನುಭವ ಹೊಂದಿರುವ, 60 ವರ್ಷದೊಳಗಿನ ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ತಿಳಿಸಲಾದ ದಿನದಂದು … More

NCERT ಮಂಡಳಿಯಲ್ಲಿ ಪ್ರೊಫೆಸರ್ ಹಾಗೂ ಲೈಬ್ರೆರಿಯನ್ ಹುದ್ದೆಗಳು

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಯು ವಿವಿಧ ಶೈಕ್ಷಣಿಕ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ (ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಪ್ರೊಫೆಸರ್, ಡೆಪ್ಯೂಟಿ ಲೈಬ್ರೆರಿಯನ್ ಹಾಗೂ ಅಸಿಸ್ಟೆಂಟ್ ಲೈಬ್ರೆರಿಯನ್) ಸೇರಿದಂತೆ ಒಟ್ಟು 117 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.20 ರೊಳಗೆ ಅರ್ಜಿ ಸಲ್ಲಿಸಲು NCERT ಅಧಿಕೃತ ಜಾಲತಾಣ https://ncertrec.samarth.edu.in/ಕ್ಕೆ ಭೇಟಿ ನೀಡಿ. ಪ್ರಮುಖ ದಿನಾಂಕಗಳು: … More

BSNLನಲ್ಲಿ ಕಾರ್ಯನಿರ್ವಾಹಕ ತರಬೇತಿದಾರ(SET)ರ ನೇರ ನೇಮಕಾತಿ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL)ನಲ್ಲಿ 120 ಹಿರಿಯ ಕಾರ್ಯನಿರ್ವಾಹಕ ತರಬೇತಿದಾರರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಟೆಲಿಕಾಂ ಆಪರೇಷನ್ಸ್ ವಿಭಾಗಕ್ಕೆ 95 ಸ್ಥಾನಗಳು ಹಾಗೂ ಫೈನಾನ್ಸ್ ವಿಭಾಗಕ್ಕೆ 25 ಸ್ಥಾನಗಳು ಮೀಸಲಿದ್ದು, ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಪದವಿ, ಸಿಎ/ಸಿಎಂಎ ಓದಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು ಬಿಎಸ್‌ಎನ್‌ಎಲ್‌ ಅಧಿಕೃತ ಜಾಲತಾಣ https://externalexam.bsnl.co.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಯ ಕೊನೆ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಬಿಎಸ್‌ಎನ್‌ಎಲ್‌ … More