ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ ಅಪ್ರೆಂಟಿಸ್‌ಶಿಪ್‌

ನವದೆಹಲಿ: ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನಲ್ಲಿ ಅಪ್ರೆಂಟಿಸ್‌ಶಿಪ್‌ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 21ರಿಂದ ಜೂನ್ 06 ರವರೆಗೆ ಕಾಲಾವಕಾಶವಿದೆ. ದೇಶದ ವಿವಿಧ ರಾಜ್ಯದಲ್ಲಿನ ತನ್ನ ಬ್ಯಾಂಕ್‌ ಶಾಖೆಗಳಿಗೆ ಒಟ್ಟು 635 ಸ್ಥಾನಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ತರಬೇತಿ ಒದಗಿಸಲಿದೆ. ಆಸಕ್ತರು ಐಬಿಪಿಎಸ್‌ನ ಅಧಿಕೃತ ಜಾಲತಾಣ https://ibpsreg.ibps.in/psbeoaapr26/ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ನೇಮಕಾತಿಯ ಪ್ರಮುಖ ದಿನಾಂಕಗಳು: ರಾಜ್ಯವಾರು ಖಾಲಿ … More

ಬ್ಯಾಂಕ್ ಆಫ್ ಬರೋಡದಲ್ಲಿ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡ 2026-27ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 5000 ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿಗಾಗಿ ಅಧಿಸೂಚನೆ ಹೊರಡಿಸಿದೆ. ಭಾರತದಾದ್ಯಂತ ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ತನ್ನ ಶಾಖೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಜೂ.08ರೊಳಗೆ ಅಧಿಕೃತ ಜಾಲತಾಣ https://nats.education.gov.in/ ಅಥವಾ https://www.apprenticeshipindia.gov.in/ಗೆ ಭೇಟಿ ನೀಡಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ವಿವರ: ಅಂಡಮಾನ್ ಮತ್ತು … More

ಎಸ್‌ಬಿಐನಲ್ಲಿ 7150 ಸೀಟುಗಳ ಅಪ್ರೆಂಟಿಸ್‌ಶಿಪ್‌.!

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 2026-27ನೇ ಸಾಲಿಗೆ 1961ರ ಅಪ್ರೆಂಟಿಸ್ ಕಾಯ್ದೆಯಡಿ ಒಂದು ವರ್ಷದ ಅಪ್ರೆಂಟಿಸ್‌ ತರಬೇತಿಗಾಗಿ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ(276 ಸೀಟು) ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ತನ್ನ ಬ್ಯಾಂಕಿನ ಶಾಖೆಗಳಿಗೆ ಒಟ್ಟು 7150 ಸೀಟುಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ಒದಗಿಸಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಅರ್ಜಿದಾರರು ಎಸ್‌ಬಿಐ ಅಧಿಕೃತ ಜಾಲತಾಣ https://sbi.bank.in/web/careers/current-openings ಅಥವಾ https://ibpsreg.ibps.in/sbiaapr26/ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯಾ ರಾಜ್ಯದ ಜಿಲ್ಲಾವಾರು ತರಬೇತಿ … More

ಆಗ್ನೇಯ ಕೇಂದ್ರ ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್‌; ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬಿಲಾಸ್ಪುರ್ ಆಗ್ನೇಯ ಕೇಂದ್ರ ರೈಲ್ವೆಯಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 1191 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು 1 ವರ್ಷಗಳವರೆಗೆ ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಜೂ.11ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು NAPS ಅಧಿಕೃತ ಜಾಲತಾಣ https://www.apprenticeshipindia.gov.in/ಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಟ್ರೇಡ್ ಗಳ ಅನುಸಾರ ಖಾಲಿ ಇರುವ ಅಪ್ರೆಂಟಿಸ್‌ ಹುದ್ದೆಗಳ … More

ಜೆಸ್ಕಾಂನಲ್ಲಿ ಶಿಶಿಕ್ಷು ತರಬೇತಿಗೆ; ಅರ್ಜಿ ಆಹ್ವಾನ

ಕಲಬುರಗಿ: ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ)ವು ರಾಷ್ಟೀಯ ಶಿಶಿಕ್ಷು ಯೋಜನೆಯಡಿ 2026-27ನೇ ಸಾಲಿಗೆ ಇಂಜಿನಿಯರಿಂಗ್ ಪದವವೀಧರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಶಿಶಿಕ್ಷು(ಅಪ್ರೆಂಟಿಸ್‌) ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ 175 ಸ್ಥಾನಗಳು, ಡಿಪ್ಲೊಮಾ ಅಪ್ರೆಂಟಿಸ್‌ 100 ಸ್ಥಾನಗಳು ಸೇರಿದಂತೆ ಒಟ್ಟು 275 ಅಭ್ಯರ್ಥಿಗಳನ್ನು ಒಂದು ವರ್ಷಗಳ ಅವಧಿಯವರೆಗೆ ಶಿಶಿಕ್ಷು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಿದೆ. ಆಫ್‌ಲೈನ್‌ ಮುಖೇನ ಅರ್ಜಿ ಸಲ್ಲಿಸಲು ಜೂ.05ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಅಧಿಕೃತ … More

NMDC ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್‌ಶಿಪ್‌; ವಾಕ್-ಇನ್ ಸಂದರ್ಶನಕ್ಕೆ ಆಹ್ವಾನ

ಛತ್ತೀಸ್‌ಗಢ್‌: ಬಚೇಲಿಯ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಬೈಲಾಡಿಲ ಕಬ್ಬಿಣದ ಅದಿರು ಗಣಿಯಲ್ಲಿ ಅಪ್ರೆಂಟಿಸ್‌ ಕಾಯ್ದೆಯಡಿ ಅಪ್ರೆಂಟಿಸ್‌ ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ವಾಕ್-ಇನ್ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವೃಂದದ ಟ್ರೇಡ್ ಅಪ್ರೆಂಟಿಸ್‌, ಪದವೀಧರ ಅಪ್ರೆಂಟಿಸ್ ಹಾಗೂ ತಂತ್ರಜ್ಞ ಅಪ್ರೆಂಟಿಸ್‌ಗಳಿಗೆ 180 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಸದರಿ ಅಪ್ರೆಂಟಿಸ್ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಮತ್ತು ಆಸಕ್ತ ಅರ್ಜಿದಾರರು ಜೂನ್ 01 ರಿಂದ 11ರವರೆಗೆ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಮೊದಲು … More

‘ಸೆಸ್ಕಾಂ’ನಲ್ಲಿ ಶಿಷ್ಯವೃತ್ತಿ ತರಬೇತಿ; ಅರ್ಜಿ ಆಹ್ವಾನ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕಾಂ)ದಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್‌ಶಿಪ್‌ ಕಾಯ್ದೆಯಡಿ ಶಿಷ್ಯವೃತ್ತಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 80-ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌, 55-ಡಿಪ್ಲೊಮಾ ಅಪ್ರೆಂಟಿಸ್‌, ಹಾಗೂ 65-ಪದವೀಧರ ಅಪ್ರೆಂಟಿಸ್‌ ಸೇರಿದಂತೆ ಒಟ್ಟು 200 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಶಿಷ್ಯವೃತ್ತಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಮೇ 29ರವರೆಗೆ ಕಾಲಾವಕಾಶವನ್ನು ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಎನ್‌ಎಟಿಎಸ್‌ ಅಧಿಕೃತ ಜಾಲತಾಣ https://nats.education.gov.in/index.php ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯು ಒಂದು ವರ್ಷದ್ದಾಗಿದೆ. … More

ಆಗ್ನೇಯ ಮಧ್ಯ ರೈಲ್ವೆಯಲ್ಲಿ ಶಿಶಿಕ್ಷು ತರಬೇತಿ; ಐಟಿಐ ಅರ್ಹತೆ

ರಾಯ್‌ಪುರ: ಆಗ್ನೇಯ ಮಧ್ಯ ರೈಲ್ವೆಯಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಟ್ರೇಡ್‌ ಅಪ್ರೆಂಟಿಸ್‌(ಶಿಶಿಕ್ಷು)ಗಳ ಭರ್ತಿಗಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿಯು ಅಧಿಸೂಚನೆ ಹೊರಡಿಸಿದೆ. ಇಲ್ಲಿನ ಡಿಆರ್‌ಎಂ ಕಚೇರಿ ಹಾಗೂ ವ್ಯಾಗನ್ ರಿಪೇರ್ ಶಾಪ್‌ನಲ್ಲಿ ವೆಲ್ಡರ್, ಟರ್ನರ್, ಫಿಟ್ಟರ್, ಎಲೆಕ್ಟ್ರಿಷಿಯನ್‌, ಸ್ಟೆನೋಗ್ರಾಫರ್ ಸೇರಿದಂತೆ ಇತರೆ ನಾನಾ ಟ್ರೇಡ್‌ಗಳಿಗೆ ಒಟ್ಟು 1644 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ನಿಗದಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಆಸಕ್ತರು ಅಪ್ರೆಂಟಿಶಿಪ್ ಇಂಡಿಯಾ ಅಧಿಕೃತ ಜಾಲತಾಣhttps://www.apprenticeshipindia.gov.in/ಕ್ಕೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಜೂ.04ರೊಳಗೆ ಅರ್ಜಿ ಸಲ್ಲಿಸಬಹುದು. … More

ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ: ಅರ್ಜಿ ಗಡುವು ಮತ್ತೊಮ್ಮೆ ವಿಸ್ತರಣೆ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಡಿ.ಫಾರ್ಮದಲ್ಲಿ ಉತ್ತೀರ್ಣರಾದವರಿಗೆ ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ ನೋಂದಣಿಯ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏ.18ರವೆರೆಗೆ ವಿಸ್ತರಿಸಿದೆ. ಒಟ್ಟು 1000 ಸೀಟುಗಳಲ್ಲಿ ಮೊದಲ ಸುತ್ತಿನಲ್ಲಿ 123 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇನ್ನುಳಿದ ಸೀಟುಗಳನ್ನು ಎರಡನೇ ಸುತ್ತಿನಲ್ಲಿ ಭರ್ತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳಿಗೆ 11 ತಿಂಗಳು ತರಬೇತಿ ಒದಗಿಸಲಿದೆ. ಸರ್ಕಾರಿ ಕೋಟಾದಡಿ ಆಯ್ಕೆಯಾಗಿದ್ದವರಿಗೆ ಆದ್ಯತೆ ನೀಡಲಾಗುತ್ತದೆ. ಸರ್ಕಾರದ ರೋಸ್ಟರ್‌ ಪದ್ಧತಿಯಂತೆ ಮೀಸಲಾತಿ ನಿಯಮ ಅನುಸರಿಸಲಾಗುತ್ತದೆ. ಆಸಕ್ತರು ಕೆಇಎ ಅಧಿಕೃತ … More

ಕೇಂದ್ರ ರೈಲ್ವೆ(CR)ಯಲ್ಲಿ ಅಪ್ರೆಂಟಿಸ್‌ ನೇಮಕಾತಿ

ರೈಲ್ವೆ ನೇಮಕಾತಿ ಕೋಶವು ಅಪ್ರೆಂಟಿಸ್‌ ಕಾಯ್ದೆಯಡಿ ಕೇಂದ್ರ ರೈಲ್ವೆ ವ್ಯಾಪ್ತಿಯಲ್ಲಿರುವ ವಿವಿಧ ಕಾರ್ಯಾಗಾರಗಳು/ಘಟಕಗಳಿಗೆ 51 ಅಭ್ಯರ್ಥಿಗಳನ್ನು ನೇಮಕ ಮಾಡಲು ಪೂರಕ(Supplementary) ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಿದೆ. ಅರ್ಜಿ ಸಲ್ಲಿಸಲು ಏ.09ರವರೆಗೆ ಕಾಲಾವಕಾಶವಿದೆ. ಸದರಿ ತರಬೇತಿಗೆ ಹಾಜರಾಗಬಯಸುವ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆರ್‌ಆರ್‌ಸಿ ಸಿಆರ್‌ ಅಧಿಕೃತ ಜಾಲತಾಣ https://rrccr.etrpindia.com/rrccrapprentice/applicationIndexದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ … More