ವಾಯುಪಡೆ(IAF)ಯಲ್ಲಿ ಅಗ್ನಿವೀರ್‌ ವಾಯುಗಳ ಭರ್ತಿ: ಅರ್ಜಿ ಸಲ್ಲಿಕೆಗೆ ಅವಕಾಶ

ದೇಶದ ಯುವಕ-ಯುವತಿಯರಿಗೆ ನಾಲ್ಕು ವರ್ಷಗಳ ಅವಧಿವರೆಗೆ ಮಿಲಿಟರಿ ಜೀವನ ಅನುಭವಿಸುವ ಅವಕಾಶ. ಭಾರತೀಯ ವಾಯುಪಡೆ (IAF)ಯು ಅಗ್ನಿಪಥ ಯೋಜನೆಯಡಿ ಅಗ್ನಿವೀರ್‌ ವಾಯು (ಇಂಟೆಕ್ 01/2027) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಕೆ ಕೊನೆಯ ದಿನವನ್ನು ಫೆ.08ರವರೆಗೆ ವಿಸ್ತರಣೆಯಾಗಿದೆ. ಆಸಕ್ತ ಮತ್ತು ಅರ್ಹ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://cdn.digialm.com/EForms/configuredHtml/1258/97277/login.html ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ … More

ಚಾರ್ಟರ್ಡ್ ಸಹಕಾರಿ ಬ್ಯಾಂಕಿನಲ್ಲಿ ಕಿರಿಯ ಸಹಾಯಕ, ಚಾಲಕ ಹುದ್ದೆಗಳ ನೇಮಕಾತಿ

ಬೆಂಗಳೂರಿನ ಚಾರ್ಟರ್ಡ್ ಸಹಕಾರಿ ಬ್ಯಾಂಕಿನಲ್ಲಿ ಕಿರಿಯ ಸಹಾಯಕ ಮತ್ತು ಚಾಲಕ ಕಮ್‌ ಅಟೆಂಡರ್‌ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಿರಿಯ ಸಹಾಯಕ(07), ಚಾಲಕ ಕಮ್ ಅಟೆಂಡರ್(02) ಸೇರಿದಂತೆ ಒಟ್ಟು 09 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.csbank.in/recruitment.phpದಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಜೊತೆಗೆ ನಿಗದಿತ ದಾಖಲೆಗಳನ್ನು ಫೆ.18ರೊಳಗೆ ‘ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ, ನಂ. 1, 1ನೇ ಮುಖ್ಯ ರಸ್ತೆ, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034’ಗೆ ಖುದ್ದಾಗಿ … More

KVS, NVS ಬೋಧಕ ಮತ್ತು ಬೋಧಕೇತರ ಪರೀಕ್ಷೆಯ ಕೀ ಉತ್ತರ ಪ್ರಕಟ

ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಜ.10 ಹಾಗೂ 11ರಂದು ನಡೆಸಲಾದ ಶ್ರೇಣಿ-1ರ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. CBSE ಅಧಿಕೃತ ಜಾಲತಾಣದ ಲಿಂಕ್‌ https://cbseit.in/cbse/2026/kvjnvkey/ನ ಮೂಲಕ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಕೀ ಉತ್ತರವನ್ನು ಪರಿಶೀಲಿಸಿಕೊಳ್ಳಬಹುದು. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಫೆಬ್ರವರಿ 04 ರ ರಾತ್ರಿ 11:59 ರೊಳಗೆ, ಪ್ರತಿ ಪ್ರಶ್ನೆಗೆ ₹1000/-ರಂತೆ ಪಾವತಿಸಿ ಆಕ್ಷೇಪಿಸಬಹುದು. ಕೀ ಉತ್ತರವನ್ನು … More

ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ವೇಳಾಪಟ್ಟಿ-Iರಡಿ ತನ್ನ ವಿವಿಧ ವೃತ್ತಗಳಿಗೆ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(BPM),ಅಸಿಸ್ಟಂಟ್‌ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(ABPM) ಮತ್ತು ಡಾಕ್‌ ಸೇವಕ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಸಲು ಫೆ.02ರಿಂದ ಫೆ.16ರವೆರೆಗೆ ಅವಕಾಶವಿದೆ. ಸುಮಾರು 29,000+* ಸ್ಥಾನಗಳಿಗೆ ಭರ್ತಿ ನಡೆಯುತ್ತಿದೆ. ಯಾವುದೇ ನೇಮಕಾತಿ ಪರೀಕ್ಷೆ ಇಲ್ಲದೇ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್‌(https://app.indiapost.gov.in/gdscandidate) ಮೂಲಕ ಅರ್ಜಿ … More

SBIನಲ್ಲಿ ಆಫೀಸರ್ ಹುದ್ದೆಗಳ ಬೃಹತ್‌ ಭರ್ತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ವಿವಿಧ ರಾಜ್ಯಗಳಲ್ಲಿರುವ ಬ್ಯಾಂಕಿನ ಶಾಖೆಗಳಿಗೆ ಸರ್ಕಲ್ ಬೇಸ್ಡ್ ಆಫೀಸರ್(CBO) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಜ.29ರಿಂದ ಆರಂಭವಾಗಿದೆ. ಒಟ್ಟು 2,273 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಪದವೀಧರರು ಅರ್ಜಿ ಸಲ್ಲಿಕೆಗೆ ಅರ್ಹರು. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗಾವಕಾಶವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆ.18ರೊಳಗೆ ಅಧಿಕೃತ ಜಾಲತಾಣದ ಲಿಂಕ್‌ https://ibpsreg.ibps.in/sbicbonov25/ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು … More

AWEILನಲ್ಲಿ ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗಳ ಭರ್ತಿ

ರಕ್ಷಣಾ ಸಚಿವಾಲಯದಡಿ ಬರುವ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳು ಭಾರತ ಲಿಮಿಟೆಡ್(AWEIL)ನಲ್ಲಿ ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತನ್ನ ವಿವಿಧ ಘಟಕಗಳಿಗೆ 14 ಅರ್ಹ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಪೂರ್ಣ ಸಮಯದವರೆಗೆ ಭರ್ತಿ ಮಾಡಿಕೊಳ್ಳಲಿದೆ. ಸಿಎ/ಸಿಎಂಎ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಸಬಹುದು. ಆಸಕ್ತರು ಅಧಿಕೃತ ವೆಬ್‌ಸೈಟ್‌https://www.aweil.in/ನಲ್ಲಿ ಅರ್ಜಿ ನಮೂನೆ ಪಡೆದು ಮಾಹಿತಿ ತುಂಬಿ, ಫೆ.23ರೊಳಗೆ ‘ಜನರಲ್ ಮ್ಯಾನೇಜರ್ (HR), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಆರ್ಡನೆನ್ಸ್ ಫ್ಯಾಕ್ಟರಿ ಕಪ್ಲಿ ರಸ್ತೆ ಕಾನ್ಪುರ್-208009’ … More

ತಾಂತ್ರಿಕ ಸಹಾಯಕ, ತಾಂತ್ರಿಕ ಅಧಿಕಾರಿ ಉದ್ಯೋಗಾವಕಾಶ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯಡಿ ಕಾರ್ಯನಿರ್ವಹಿಸುವ ಸಂಶೋಧನಾ ಸಂಸ್ಥೆಯಾಗಿರುವ ಹೈದರಾಬಾದ್‌ನ ಕೋಶ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (CCMB)ದಲ್ಲಿ ತಾಂತ್ರಿಕ ಸಹಾಯಕ ಮತ್ತು ತಾಂತ್ರಿಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ. ತಾಂತ್ರಿಕ ಸಹಾಯಕ(25) ಹಾಗೂ ತಾಂತ್ರಿಕ ಅಧಿಕಾರಿ(05) ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸಂಬಂಧಿಸಿದ ವಿಭಾಗದಲ್ಲಿ ಬಿಎಸ್ಸಿ/ಎಂ.ಎಸ್ಸಿ/ಡಿಪ್ಲೋಮಾ/ಬಿ.ಇ./ಬಿ.ಟೆಕ್ ಓದಿದವರು ಅರ್ಜಿ ಸಲ್ಲಿಕೆ ಮಾಡಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು ಫೆ.23ರೊಳಗೆ ಅಧಿಕೃತ ಜಾಲತಾಣ https://www.ccmb.res.in/Careers/Regular-Positions ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ … More

ಆರ್ಮರ್ಡ್ ವೆಹಿಕಲ್ಸ್ ನಿಗಮದ ‘HVF’ನಲ್ಲಿ ಜೂ.ಟೆಕ್ನಿಷಿಯನ್ ಹುದ್ದೆಗಳು

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದ ಪ್ರಮುಖ ಸಾರ್ವಜನಿಕ ವಲಯ ಉದ್ದಿಮೆಯಾಗಿರುವ ಆರ್ಮರ್ಡ್ ವೆಹಿಕಲ್ಸ್ ನಿಗಮ ಲಿಮಿಟೆಡ್(AVNL)ನ ಒಂದು ಘಟಕವಾಗಿರುವ ಚೆನ್ನೈನ ಅವಡಿಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿ(HVF)ಯಲ್ಲಿ 220 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ. ರಿಗ್ಗರ್‌, ಹೀಟ್‌ ಟ್ರೀಟ್ಮೆಂಟ್‌ ಆಪರೇಟರ್‌, ಫಿಟ್ಟರ್‌ ಆಟೋ ಎಲೆಕ್ಟ್ರಿಕ್, ಮಶಿನಿಷ್ಟ್ ವಿಭಾಗಗಳು ಸೇರಿದಂತೆ ಇತರೆ ವಿಭಾಗಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.ಸಂಬಂಧಿತ ಟ್ರೇಡ್‌ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು … More

ಕೆಇಎ ಜ.25ರ ಪರೀಕ್ಷೆಯ ಕೀ ಉತ್ತರ ಪ್ರಕಟ

ವಿವಿಧ ಇಲಾಖೆ/ಸಂಸ್ಥೆ/ಮಂಡಳಿ/ನಿಗಮದ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಜ.25ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮಂಗಳವಾರ(ಜ.27) ಪ್ರಕಟಿಸಿದೆ. ಕೀ ಉತ್ತರಗಳಿಗೆ ಜ.29ರ ಬೆಳಗ್ಗೆ 09 ಗಂಟೆಯೊಳಗೆ ಪ್ರತಿ ಆಕ್ಷೇಪಣೆಗೆ ₹25ರಂತೆ ಪಾವತಿಸಿ, ಆಕ್ಷೇಪಣೆ ಸಲ್ಲಿಸಬಹುದು. ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ದ ಮೂಲಕ ಪತ್ರಿಕೆವಾರು ಕೀ ಉತ್ತರಗಳ ಪರಿಶೀಲನೆ ಹಾಗೂ ಆಕ್ಷೇಪಣೆ ಸಲ್ಲಿಸಬಹುದು. ಕೆಇಎ ಜ.25ರ ಪರೀಕ್ಷೆಯ ಕೀ ಉತ್ತರಗಳನ್ನು ಹೇಗೆ ಡೌನ್ಲೋಡ್‌ ಮಾಡುವುದು? ಹಂತ-1 ಕೆಇಎ ಅಧಿಕೃತ … More

ಕೆಕೆಆರ್‌ಟಿಸಿಯಲ್ಲಿ ಡ್ರೈವರ್‌ ಹುದ್ದೆಗಳ ಭರ್ತಿ

ಬೀದರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ-1, ಬೀದರ-2, ಭಾಲ್ಕಿ, ಔರಾದ, ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳಿಗೆ ಚಾಲಕ ಹುದ್ದೆಗಳ ಭರ್ತಿಗಾಗಿ ಫೆ.3 ಮತ್ತು 04ರಂದು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಯೋಶ ಸಹಕಾರ ಸಂಘ ನಿಯಮಿತದ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಚೇರಿಯಲ್ಲಿ ನೇರ ಸಂದರ್ಶನ ಜರುಗಲಿದೆ. ಒಟ್ಟು 78 ಸ್ಥಾನಗಳಿಗೆ ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು … More