ನೌಕಾಪಡೆಯಲ್ಲಿ ‘ಎಸ್‌ಎಸ್‌ಸಿ ಅಧಿಕಾರಿ’ಗಳ ನೇಮಕಾತಿ

ಕೇರಳದ ಎಜಿಮಲದ ಭಾರತೀಯ ನೌಕಾ ಅಕಾಡೆಮಿ(INA)ಯ ವಿವಿಧ ಶಾಖೆಗಳಿಗೆ ಜನವರಿ2027ರಿಂದ ಆರಂಭವಾಗಲಿರುವ ಶಾರ್ಟ್‌ ಸರ್ವಿಸ್‌ ಕಮಿಷನ್‌(SSC) ಕೋರ್ಸ್‌ಗಳ ಮೂಲಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಭಾರತೀಯ ನೌಕಾಪಡೆಯು ಅರ್ಜಿ ಆಹ್ವಾನಿಸಿದೆ. ತಾಂತ್ರಿಕ ಶಾಖೆ(149 + ಹೈಡ್ರೋ ಕೇಡರ್ 06), ಶಿಕ್ಷಣ ಶಾಖೆ(15), ಕಾರ್ಯನಿರ್ವಾಹಕ ಶಾಖೆ(96)ಗೆ ಒಟ್ಟು 266 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆ.24ರೊಳಗೆ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. … More

ಅಪ್ರೆಂಟಿಸ್‌ಶಿಪ್‌ ಟ್ರೈನಿಗಳ ಭರ್ತಿ; ಸಂದರ್ಶನಕ್ಕೆ ಆಹ್ವಾನ

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು(NAL) ಘಟಕದಲ್ಲಿ ಅಪ್ರೆಂಟಿಸ್‌ಶಿಪ್‌ ಟ್ರೈನಿಗಳ ಭರ್ತಿಗಾಗಿ ವಾಕ್‌-ಇನ್‌-ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಒಟು 35 ಸ್ಥಾನಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಿಕೊಳ್ಳಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್‌ ಪೋರ್ಟಲ್‌ https://www.apprenticeshipindia.gov.in/ನಲ್ಲಿ ನೋಂದಣಿಯಾಗಬೇಕು. ನಂತರ ಅರ್ಜಿ ನಮೂನೆ ಪಡೆದುಕೊಂಡು ತುಂಬಿ, ಫೆ.4 ಮತ್ತು 5ರಂದು ಬೆಳಿಗ್ಗೆ 08.30 ರಿಂದ 9.30 … More

CTET 2026ರ ಸಿಟಿ ಇಂಟಿಮೇಶನ್‌ ಬಿಡುಗಡೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಫೆ.08ರಂದು ನಡೆಸಲಿರುವ 21ನೇ ಆವೃತ್ತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET)2026ರ ಪರೀಕ್ಷಾ ದಿನಾಂಕ ಹಾಗೂ ನಗರ ಮಾಹಿತಿ ಕುರಿತು ಮುಂಗಡ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಪತ್ರಿಕೆ ಎರಡು, ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಪತ್ರಿಕೆ ಒಂದು, ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ 132 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 20 ಭಾಷೆಗಳಲ್ಲಿ ನಡೆಯಲಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ಜಾಲತಾಣ … More

RITES ಲಿಮಿಟೆಡ್‌ನಲ್ಲಿ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಲಿಮಿಟೆಡ್‌, ಕೇರಳದ ಯೋಜನಾ ಸ್ಥಳಗಳಿಗೆ ವಿವಿಧ ಎಂಜಿನಿಯರ್ ವೃತ್ತಿಪರರ ಅಗತ್ಯವಿದ್ದು, ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಫೆ.26 ಕೊನೆದಿನವಾಗಿದೆ. ವಿವಿಧ ವಿಭಾಗಗಳಿಗೆ ಟೀಮ್ ಲೀಡರ್(09), ಪ್ರಾಜೆಕ್ಟ್ ಎಂಜಿನಿಯರ್(08) ಹಾಗೂ ಜೂನಿಯರ್ ಎಂಜಿನಿಯರ್(31) ಸೇರಿ ಒಟ್ಟು 48 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು RITES ಲಿಮಿಟೆಡ್ ಅಧಿಕೃತ ಜಾಲತಾಣ https://recruit.rites.com/frmRegistration.aspxಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹದು. … More

ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ನೋಂದಣಿ ಆರಂಭ | Adarsha Vidyalaya Online Application Form 2026-27

2026-27ನೇ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು ಮುಂತಾದ ಮಾಹಿತಿಯನ್ನಈ ಲೇಖನದಲ್ಲಿ ನೀಡಲಾಗಿದೆ. ಈ ಮಾಹಿತಿ ನಿಮಗೆ ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೆ ತಪ್ಪದೆ ಶೇರ್ ಮಾಡಿ. ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ(Start Date) 23 ಜನವರಿ 2026 ಅರ್ಜಿ ಸಲ್ಲಿಕೆ ಕೊನೆ ದಿನಾಂಕ(Last Date) ಮಾರ್ಚ್‌ 02, 2026 ಪ್ರವೇಶ ಪರೀಕ್ಷೆ ದಿನಾಂಕ(Exam … More

ಯುಕೋ ಬ್ಯಾಂಕಿನಲ್ಲಿ ಜನರಲಿಸ್ಟ್, ಸ್ಪೆಷಲಿಸ್ಟ್ ಕೇಡರ್‌ ಹುದ್ದೆಗಳ ಭರ್ತಿ

ಭಾರತ ಸರ್ಕಾರದ ಒಂದು ಉದ್ಯಮವಾಗಿರುವ ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿ(UCO Bank)ನಲ್ಲಿ ಜನರಲಿಸ್ಟ್ ಮತ್ತು ಸ್ಪೆಷಲಿಸ್ಟ್ ಕೇಡರ್ ಅಡಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಸೂಚನೆ ಬಿಡುಗಡೆಯಾಗಿದೆ. ಜೆಎಂಜಿಎಸ್‌-I ಹಾಗೂ ಎಂಎಂಜಿಎಸ್‌-II ಸ್ಕೇಲ್‌ನಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್, ಟ್ರೆಜರಿ ಆಫೀಸರ್, ಚಾರ್ಟೆಡ್ ಅಕೌಂಟೆಂಟ್, ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ ಹಾಗೂ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಇತರೆ ಹುದ್ದೆಗಳೂ ಸೇರಿದಂತೆ ಒಟ್ಟು 173 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಯಮಿತ ಆಧಾರದ ಮೇಲೆ ಭರತಿ ಮಾಡಿಕೊಳ್ಳಲಿದೆ. ಆಸಕ್ತರು ಫೆ.02ರೊಳಗೆ ಯುಕೋ ಬ್ಯಾಂಕಿನ ಅಧಿಕೃತ ಜಾಲತಾಣದ ಲಿಂಕ್ https://onlineappl.ucoonline.bank.in/SPE_RCER/ಕ್ಕೆ … More

ಶುಶ್ರೂಷಣಾಧಿಕಾರಿ ನೇಮಕಾತಿ; ಸಂದರ್ಶನಕ್ಕೆ ಆಹ್ವಾನ

ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಶುಶ್ರೂಷಣಾಧಿಕಾರಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ. ಒಟ್ಟು 55 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತರು ಜನವರಿ 27ರಿಂದ ಸಂಘದ ಕಚೇರಿಯಲ್ಲಿ ಜರುಗಲಿರುವ ಸಂದರ್ಶನಕ್ಕೆ ನಿಗದಿತ ದಾಖಲೆಗಳೊಂದಿಗೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಜಿಎನ್‌ಎಂ/ಬಿ.ಎಸ್ಸಿ ಪೂರ್ಣಗೊಳಿಸಬೇಕು ಜೊತೆಗೆ ಕರ್ನಾಟಕ … More

ಮೈಸೂರಿನಲ್ಲಿ NHM ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಹೀಗೆ ಅಪ್ಲೈ ಮಾಡಿ

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ವಿವಿಧ ವೃಂದಗಳಲ್ಲಿ ಖಾಲಿ ಇರುವ (ಅರವಳಿಕೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಒಟಿ ಟೆಕ್ನಿಷಿಯನ್, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಶುಶ್ರೂಷಕ ಅಧಿಕಾರಿಗಳು) ಸೇರಿದಂತೆ ಇತರೆ ಒಟ್ಟು 67 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ … More

ಏಕಲವ್ಯ ಮಾದರಿ ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ನೋಂದಣಿ ಆರಂಭ

2026-27ನೇ ಸಾಲಿಗೆ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 12 ಏಕಲವ್ಯ ಮಾದರಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ನೋಂದಣಿ ಮಾಡಬಹುದು. ಕೆಇಎ ಪರೀಕ್ಷೆ ನಡೆಸಿ, ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಿದೆ. ಪ್ರವೇಶ ಪರೀಕ್ಷೆಯು ಮಾ.01ರಂದು ಜರುಗಲಿದೆ. ಫೆ.02ರೊಳಗೆ ನೋಂದಣಿ ಮಾಡಲು ನಿಮಗೆ ಹತ್ತಿರವಿರುವ, ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗೆ ನಿಗದಿತ ದಾಖಲೆಗಳೊಂದಿಗೆ ಭೇಟಿ ನೀಡಿ. ಮುಖ್ಯ ದಿನಾಂಕಗಳು: … More

KREIS 6ನೇ ತರಗತಿ ಪ್ರವೇಶಾತಿ ಪರೀಕ್ಷೆ; ನೋಂದಣಿ ಪ್ರಾರಂಭ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026-27ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಒಳಪಡುವ ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿ ದಾಖಲಾತಿಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಪ್ರವೇಶ ಪರೀಕ್ಷೆ ಮಾ.01ರಂದು ನಡೆಯಲಿದೆ. ಪ್ರಸ್ತುತ 5ನೇ ತರಗತಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಮಗೆ ಹತ್ತಿರವಿರುವ ಸಂಘದ ಅಧೀನದ ಯಾವುದೇ ವಸತಿ ಶಾಲೆಗೆ ಫೆ.07ರೊಳಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆಗೆ ವಾರ್ಷಿಕ ಆದಾಯದ … More