SSC ಜೂ.ಎಂಜಿನಿಯರ್ 2025: ಪತ್ರಿಕೆ-Iರ ಫಲಿತಾಂಶ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು ಜೂನಿಯರ್ ಎಂಜಿನಿಯರ್(ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ 2025ರ ಡಿ.03 ರಿಂದ 06 ರವರೆಗೆ ಹಾಗೂ 13ರಂದು ನಡೆಸಲಾದ ಪತ್ರಿಕೆ-I(ಕಂಪ್ಯೂಟರ್‌ ಆಧಾರಿತ ಪರೀಕ್ಷೆ)ರ ಫಲಿತಾಂಶವನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಸದರಿ ಪತ್ರಿಕೆಯಲ್ಲಿ ಸಿವಿಲ್ ಎಂಜಿನಿಯರ್‌ ಹುದ್ದೆಗೆ 11593 ಅಭ್ಯರ್ಥಿಗಳು, ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌ ಎಂಜಿನಿಯರ್‌ ಹುದ್ದೆಗೆ 4014 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ ಆಗಿದ್ದು, ಮುಂದಿನ ಹಂತದ ಪತ್ರಿಕೆ-IIಕ್ಕೆ ಅರ್ಹತೆ ಹೊಂದಿದ್ದಾರೆ. ಎಸ್‌ಎಸ್‌ಸಿ ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಫಲಿತಾಂಶ ಮತ್ತು ಕಟ್‌ ಆಫ್‌ ವಿವರಗಳನ್ನು ಪರಿಶೀಲಿಸಬಹುದು. … More

ಜಿಡಿಎಸ್‌ 2026: ಮೊದಲ ಮೆರಿಟ್‌ ಪಟ್ಟಿ ಪ್ರಕಟ

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ವೇಳಾಪಟ್ಟಿ-1ರ ಗ್ರಾಮೀಣ ಡಾಕ್‌ ಸೇವಕ್‌(GDS) 28636 ಹುದ್ದೆಗಳ ಮೊದಲ ಸುತ್ತಿನ ಮೆರಿಟ್‌ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಸದರಿ ಮೆರಿಟ್‌ ಪಟ್ಟಿಯಲ್ಲಿ ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳು ಮಾ.23ರೊಳಗೆ ತಾವು ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ ಪ್ರತಿಗಳ ಜೊತೆಗೆ ಎರಡು ಸೆಟ್‌ ಝರಾಕ್ಸ್‌ ಪ್ರತಿಗಳೊಂದಿಗೆ ಭೇಟಿ ನೀಡಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ https://indiapost.gov.in/gdsonlineengagementದಲ್ಲಿ ಮೆರಿಟ್‌ ಪಟ್ಟಿಯನ್ನು ಪರಿಶೀಲಿಸಬಹುದು. ರಾಜ್ಯ/ವೃತ್ತವಾರು ಜಿಡಿಎಸ್‌ ಮೆರಿಟ್‌ ಪಟ್ಟಿ-1ರ … More

RRB ಗ್ರೂಪ್ ಡಿ: ಪರೀಕ್ಷೆಯ ಕೀ ಉತ್ತರ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌ ನಂ-08/2024ರಡಿ ಅಧಿಸೂಚಿತ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ 2025ರ ನ.27 ರಿಂದ ಫೆ.10ರವರೆಗೆ ನಡೆಸಲಾದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಕೀ ಉತ್ತರಗಳನ್ನು ಮಂಗಳವಾರ(ಫೆ.17) ಪ್ರಕಟಿಸಿದೆ. ಪ್ರಕಟಿತ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳಿದ್ದಲ್ಲಿ, ಪ್ರತಿ ಪ್ರಶ್ನೆಗೆ ₹50ರಂತೆ ಬ್ಯಾಂಕ್‌ ಶುಲ್ಕ ಪಾವತಿಸಿ ಫೆ.23ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಕೀ ಉತ್ತರಗಳನ್ನು ವೀಕ್ಷಿಸಲು, ಆಕ್ಷೇಪಣೆ ಸಲ್ಲಿಸಲು ಆರ್‌ಆರ್‌ಬಿಯ ಅಧಿಕೃತ ಜಾಲತಾಣದ ಲಿಂಕ್‌ https://rrb.digialm.com/EForms/configuredHtml/33015/96410/login.htmlಗೆ ಭೇಟಿ ನೀಡಿ. ಕೀ ಉತ್ತರ ನೋಡುವ ವಿಧಾನ: • … More

ಕೆಇಎ: ಅಂತಿಮ ಅಂಕಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಿವಿಧ ಇಲಾಖೆ/ನಿಗಮ/ಮಂಡಳಿ/ಸಂಸ್ಥೆಗಳಲ್ಲಿನ ಮೂಲ ಉಳಿಕೆ ವೃಂದ(ನಾನ್‌-ಹೆಚ್‌ಕೆ)ದ ವಿವಿಧ ಹುದ್ದೆಗಳ ಭರ್ತಿಗಾಗಿ ರಾಜ್ಯದಾದ್ಯಂತ ಜ.17, 18 ಹಾಗೂ 25ರಂದು ನಡೆಸಿದ್ದ ಪರೀಕ್ಷೆಗಳ ಅಂತಿಮ ಅಂಕಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/vdptrecnhk2025ದ ಮೂಲಕ ಅಂತಿಮ ಫಲಿತಾಂಶ ಅಂಕಪಟ್ಟಿ ಪರಿಶೀಲನೆ ಮಾಡಿಕೊಳ್ಳಬಹುದು. ಇಲಾಖಾವಾರು ಅಂತಿಮ ಅಂಕಪಟ್ಟಿಗಳ ಪಿಡಿಎಫ್‌ ಲಿಂಕ್‌ಗಳು: ಎನ್‌ಡಬ್ಲ್ಯೂಕೆಆರ್‌ಟಿಸಿ (ಸಹಾಯಕ ಸಂಚಾರ ನಿರೀಕ್ಷಕ) ಡೌನ್ಲೋಡ್‌ ಮಾಡಿ ಕೆಎಸ್‌ಎಸ್‌ಐಡಿಸಿ(ಕಿರಿಯ ಸಹಾಯಕ) ಡೌನ್ಲೋಡ್‌ ಮಾಡಿ ಕೆಎಸ್‌ಡಿಎಲ್‌(ಜೂನಿಯರ್‌ ಆಪೀಸರ್‌) ಡೌನ್ಲೋಡ್‌ ಮಾಡಿ ಕೆಕೆಆರ್‌ಟಿಸಿ (ನಿರ್ವಾಹಕ-ಕಂಡೆಕ್ಟರ್‌) ಡೌನ್ಲೋಡ್‌ … More

RRB RPF 02/2024: ಅಂತಿಮ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್‌)ಯ ಕಾನ್‌ಸ್ಟೇಬಲ್‌(ಕಾರ್ಯನಿರ್ವಾಹಕ) ಹುದ್ದೆಗೆ ಅರ್ಹತೆ ಪಡೆದ 4205 ಅಭ್ಯರ್ಥಿಗಳ ಅಂತಿಮ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಸಿಇಎನ್‌ ಆರ್‌ಪಿಎಫ್‌02/2024ರಡಿ 4208 ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು 2025ರ ಮಾ.2ರಿಂದ 7, 9ರಿಂದ 12 ಮತ್ತು ಮಾ.17ರಿಂದ 18ರವೆರೆಗೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆಯನ್ನು ನ.13 ರಿಂದ ಡಿ.06ರವರೆಗೆ ನಡೆಸಲಾಗಿತ್ತು. ದಾಖಲಾತಿ ಪರಿಶೀಲನೆ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳು ಆಯಾ ಆರ್‌ಆರ್‌ಬಿ ಅಧಿಕೃತ ಜಾಲತಾಣದ(https://indianrailways.gov.in/railwayboard/view_section.jsp?lang=0&id=0,7,1281) ಮೂಲಕ … More

ಬಿ.ಇಡಿ ಪ್ರವೇಶಾತಿ 2025: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

2025-26ನೇ ಸಾಲಿನ ಬಿ.ಇಡಿ ಕೋರ್ಸ್‌ ಪ್ರವೇಶಾತಿಗೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯು ಮಂಗಳವಾರ ಪ್ರಕಟಿಸಿದೆ. ಅರ್ಜಿ ಸಲ್ಲಿಕೆಗೆ ಅ.3 ರಿಂದ ನ.3ವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳನ್ವಯ ರೋಸ್ಟರ್‌ ಮತ್ತು ಮೆರಿಟ್‌ ಆಧಾರದಲ್ಲಿ ಸೀಟು ಹಂಚಿಕೆ ಪಟ್ಟಿ ತಯಾರಿಸಿ ಇಲಾಖೆಯ ವೆಬ್‌ಸೈಟ್‌ https://sts.karnataka.gov.in/GPSTRHK/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್‌ ಬಳಸಿ ನ.25 ರಿಂದ ಡಿ.5ರೊಳಗೆ ನಿಗದಿತ ಶುಲ್ಕದ … More

DHFWS ಉತ್ತರ ಕನ್ನಡ ನೇಮಕಾತಿ: 70 ಹುದ್ದೆಗಳಿಗೆ ಆಫ್ಲೈನ್‌ ನಲ್ಲಿ ಅರ್ಜಿ ಆಹ್ವಾನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಉತ್ತರ ಕನ್ನಡ (DHFWS Uttara Kannada) ಸೆಪ್ಟೆಂಬರ್ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಈ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಉತ್ತರ ಕನ್ನಡ ಜಿಲ್ಲೆಯ ತಾಲೂಕಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ತಜ್ಞ ವೈದ್ಯರು, ಮುಖ್ಯ ವೈದ್ಯಾಧಿಕಾರಿ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಸಾಮಾನ್ಯ ವೈದ್ಯಾಧಿಕಾರಿ ಹುದ್ದೆಗಳಿಗೆ ಗುತ್ತಿಗೆ ಒಪ್ಪಂದದ ಷರತ್ತಿಗೆ ಒಳಪಟ್ಟು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ … More

ನ್ಯಾಷನಲ್ ಹೌಸಿಂಗ್​​ ಬ್ಯಾಂಕ್​​ನಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಅ.21 ಕೊನೆದಿನ

ನ್ಯಾಷನಲ್ ಹೌಸಿಂಗ್​​ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಅಧಿಕಾರಿ ಮಟ್ಟದ ಏಳು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 1 ರಿಂದ ಆರಂಭವಾಗಿದ್ದು, ಅಕ್ಟೋಬರ್ 21, 2025 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಒಟ್ಟು ಹುದ್ದೆಗಳು: ಶೈಕ್ಷಣಿಕ ಅರ್ಹತೆ: ನೇಷನಲ್ ಹೌಸಿಂಗ್ ಬ್ಯಾಂಕ್ … More

ದೇಶದ ಹೆಮ್ಮೆಯ ಸಂಸ್ಥೆ DRDOನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

ಭಾರತದ ರಾಷ್ಟ್ರೀಯ ಹೆಮ್ಮೆಯಾದ, ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಬಯಸುತ್ತಿರುವವರಿಗೆ ಸುವರ್ಣಾವಕಾಶ ಒದಗಿ ಬಂದಿದೆ. DRDOನ ಜೈವಿಕ ಭದ್ರತೆಯ ತಾಂತ್ರಿಕತೆಗಳ ರಕ್ಷಣಾ ಸಂಸ್ಥೆಯು (DIBT) ಸೆಪ್ಟೆಂಬರ್ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಜೂನಿಯರ್ ರಿಸರ್ಚ್ ಫೆಲೋ, ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳು ವಿಶೇಷವಾಗಿ ಬಯೋ-ಡಿಫೆನ್ಸ್, ಲೈಫ್ ಸೈನ್ಸ್, ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಆಸಕ್ತಿ … More

ಕೇಂದ್ರ ಸರ್ಕಾರದ SECI ಸಂಸ್ಥೆಯಲ್ಲಿ 22 ಹುದ್ದೆಗಳು: ಬಿ.ಇ ಮುಗಿಸಿದವರಿಗೆ ಗುಡ್ ನ್ಯೂಸ್.!

ಸರಕಾರಿ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (Solar Energy Corporation of India) ಅಧಿಕೃತ ಅಧಿಸೂಚನೆಯ ಮೂಲಕ ಸೀನಿಯರ್ ಎಂಜಿನಿಯರ್, ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಅಡಿಷನಲ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹಾಗೂ ಜೂನಿಯರ್ ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. … More