‘ಬೋಕರೋ’ದಲ್ಲಿ ಸಹಾಯಕ ವ್ಯವಸ್ಥಾಪಕರ ನೇಮಕಾತಿ

ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರವಾಗಿರುವ ಬೋಕರೋ ಪವರ್‌ ಸಪ್ಲೈ ಕಂಪನಿ ಲಿಮಿಟೆಡ್‌ನಲ್ಲಿ ಸಹಾಯಕ ವ್ಯವಸ್ಥಾಪಕರ (ಬಾಯ್ಲರ್ ಕಾರ್ಯಾಚರಣೆ ಎಂಜಿನಿಯರ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.05 ಕೊನೆದಿನವಾಗಿದೆ. ಒಟ್ಟು 15 ಸ್ಥಾನಗಳಿಗೆ ಬಿ.ಇ./ಬಿ.ಟೆಕ್ ಪದವೀಧರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಅಭ್ಯರ್ಥಿಗಳು ಬಿಪಿಎಸ್‌ಸಿಎಲ್‌ ಅಧಿಕೃತ ಜಾಲತಾಣ https://bpscl.com/our_people/careers/ದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ … More

ಆರ್‌ಆರ್‌ಬಿ ವಿಭಾಗ ನಿಯಂತ್ರಕ(SC) ಸಿಬಿಟಿ ಕೀ ಉತ್ತರ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌ 04/2025ರಡಿ ಅಧಿಸೂಚಿತ ವಿಭಾಗ ನಿಯಂತ್ರಕ(ಎಸ್‌ಸಿ) ಹುದ್ದೆಗಳ ಭರ್ತಿ ಸಂಬಂಧ ಫೆ.11 ಮತ್ತು 12ರಂದು ನಡೆಸಿದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ(ಸಿಬಿಟಿ)ಯ ಕೀ ಉತ್ತರಗಳನ್ನು ಗುರುವಾರ(ಫೆ.26) ಬಿಡುಗಡೆಗೊಳಿಸಿದೆ. ಕೀ ಉತ್ತಗಳನ್ನು ವಿಕ್ಷೀಸಲು, ಆಕ್ಷೇಪಣೆ ಸಲ್ಲಿಸಲು ಮಾ.03ರವೆರೆಗೆ ಅವಕಾಶವಿದೆ. ಪ್ರತಿ ಪ್ರಶ್ನೆಗೆ ₹50 ಜೊತೆಗೆ ಬ್ಯಾಂಕಿನ ಸೇವಾ ಶುಲ್ಕವನ್ನು ಪಾವತಿಸಿ ಆಕ್ಷೇಪಿಸಬಹುದು. ಅಧಿಕೃತ ಜಾಲತಾಣ ಲಿಂಕ್‌ https://rrb.digialm.com//EForms/configuredHtml/33128/97801/login.htmlಗೆ ಭೇಟಿ ನೀಡಿ, ತಮ್ಮ ಲಾಗಿನ್‌ ರುಜುವಾತುಗಳನ್ನು ತುಂಬಿ ಕೀ ಉತ್ತರಗಳನ್ನು ಪರಿಶೀಲನೆ ಮಾಡಬಹುದು. ಪ್ರಶ್ನೆ ಪತ್ರಿಕೆ ಜೊತೆಗೆ … More

NCLನಲ್ಲಿ ಸಹಾಯಕ ಫೋರ್‌ಮನ್ ನೇಮಕಾತಿ

ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ನಾರ್ದರ್ನ್ ಕೋಲ್‌ ಫೀಲ್ಡ್ಸ್ ಲಿಮಿಟೆಡ್‌ನಲ್ಲಿ ಮೇಲ್ವಿಚಾರಣಾ ಸ್ಥಾನಗಳಡಿ ವಿವಿಧ ವಿಭಾಗಗಳಿಗೆ ಸಹಾಯಕ ಫೋರ್‌ಮನ್(ಗ್ರೇಡ್-ಸಿ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಫೋರ್‌ಮನ್ (ಇ & ಟಿ) (ತರಬೇತಿ) 14 ಹುದ್ದೆಗಳು, ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) (ತರಬೇತಿ) ಗ್ರೇಡ್-ಸಿ 108 ಹುದ್ದೆಗಳು, ಸಹಾಯಕ ಫೋರ್‌ಮನ್ (ಎಲೆಕ್ಟ್ರಿಕಲ್) (ತರಬೇತಿ) 148 ಹುದ್ದೆಗಳು ಸೇರಿ ಒಟ್ಟು 270 ಸಹಾಯಕ ಫೋರ್‌ಮನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು … More

ಹಾವೇರಿ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿ; ನಾಳೆ ಸಂದರ್ಶನ

ಹಾವೇರಿ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ ಫೆ.24ರಂದು ನೇರ ಸಂದರ್ಶನ ನಡೆಯಲಿದೆ. ವಿವಿಧ ವೃಂದಗಳಿಗೆ ಪಿಆರ್‌ಟಿ ಶಿಕ್ಷಕ, ಟಿಜಿಟಿ ಶಿಕ್ಷಕ, ಪಿಆರ್‌ಟಿ ಸಂಗೀತ ಶಿಕ್ಷಕ, ದೈಹಿಕ ಮತ್ತು ಆರೋಗ್ಯ ಶಿಕ್ಷಣ ಶಿಕ್ಷಕ ಹಾಗೂ ಕ್ರೀಡಾ ತರಬೇತುದಾರ ಸೇರಿದಂತೆ ಇತರೆ ಶಿಕ್ಷಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ‘ಕೇಂದ್ರೀಯ ವಿದ್ಯಾಲಯ ಹಾವೇರಿ ಡಯಟ್ ಕ್ಯಾಂಪಸ್, ಕರ್ಜಗಿ … More

GATE 2026ರ ಕೀ ಉತ್ತರ ಪ್ರಕಟ

ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಗುವಾಹಟಿ ಸಂಸ್ಥೆಯು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (GATE) 2026ರ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರವನ್ನು ಭಾನುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಫೆಬ್ರವರಿ 07, 08, 14 ಮತ್ತು 15 ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಕೀ ಉತ್ತರವನ್ನು https://goaps.iitg.ac.in/loginಗೆ ಭೇಟಿ ಪರಿಶೀಲಿಸಬಹುದು. GATE 2026ರ ಕೀ ಉತ್ತರ ಪರಿಶೀಲಿಸುವ ವಿಧಾನ • ಮೊದಲಿಗೆ ವಿದ್ಯಾರ್ಥಿಗಳು IITG ಅಧಿಕೃತ ಜಾಲತಾಣ https://gate2026.iitg.ac.in/index.html ಕ್ಕೆ … More

ಯುಪಿಎಸ್ಸಿ ಅಸಿಸ್ಟಂಟ್‌ ಕಮಾಂಡಂಟ್ಸ್‌(AC) ನೇಮಕಾತಿ; ಪರೀಕ್ಷೆ ನೋಂದಣಿ ಆರಂಭ

2026ನೇ ಸಾಲಿನ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಅಸಿಸ್ಟಂಟ್‌ ಕಮಾಂಡಂಟ್ಸ್‌ ಗ್ರೂಪ್-ಎ) ನೇಮಕಾತಿ ಪರೀಕ್ಷೆಗೆ ಕೇಂದ್ರ ಲೋಕಸೇವಾ ಆಯೋಗ(UPSC) ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ಬಿ.ಎಸ್.ಎಫ್(108), ಸಿ.ಆರ್‌.ಪಿ.ಎಫ್(106), ಐ.ಟಿ.ಬಿ.ಪಿ(12), ಎಸ್‌.ಎಸ್‌.ಬಿ(53), ಸಿ.ಐ.ಎಸ್.ಎಫ್(70) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಒಟ್ಟು 349 ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಯಾವುದೇ ಪದವಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಮಾ.12ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.nic.in/loginಗೆ ಭೇಟಿ ನೀಡಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು … More

ಯುಜಿ-ಸಿಇಟಿ 2026: ನೋಂದಣಿ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2026ನೇ ಸಾಲಿಗೆ ಇಂಜಿನಿಯರಿಂಗ್‌, ಕೃಷಿವಿಜ್ಞಾನ, ಪಶುಸಂಗೋಪನೆ, ಫಾರ್ಮಸಿ, ಬಿ.ಎಸ್ಸಿ(ನರ್ಸಿಂಗ್) ಸೇರಿ ಇತರೆ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸುವ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ(ಯುಜಿಸಿಇಟಿ)ಯ ನೋಂದಣಿಯ ಕೊನೆಯ ದಿನಾಂಕವನ್ನು ಫೆ.27ರವರೆಗೆ ವಿಸ್ತರಿಸಿದೆ. ಏ.22, 23 ಮತ್ತು 24ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭ್ಯಸಿಸಿಸುತ್ತಿರುವ/ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನೋಂದಣಿಗಾಗಿ https://cetonline.karnataka.gov.in/onlineapp2026/forms/login.aspxಗೆ ಭೇಟಿ ನೀಡಿ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಆರ್‌ಡಿ ಪ್ರಮಾಣ ಪತ್ರಗಳಲ್ಲಿ ಇರುವ ಹೆಸರು … More

KREIS ಪ್ರವೇಶ ಪರೀಕ್ಷೆ 2026 ಹಾಲ್‌ ಟಿಕೆಟ್‌ ಬಿಡುಗಡೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ವಸತಿ ಶಾಲೆಗಳಿಗೆ 2026ನೇ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾ.01ರಂದು ನಡೆಸಲಿರುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಿದೆ. ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಸತಿ ಶಾಲೆಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. KREIS Entrance Exam 2026 Hall Ticket Link(School Login) Login More … More

SSP ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿವೇತನ | SSP Post Matric scholarship 2025-26 Last Date?

2025-26ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು 10ನೇ ತರಗತಿಯ ನಂತರ ಬರುವ ಕೋರ್ಸ್’ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಎಂದು ಹೇಳಬಹುದು. SSP Post Matric scholarship 2025-26 ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಡಿಯಲ್ಲಿ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದಲ್ಲಿ ಬರುವ ವಿವಿಧ ಇಲಾಖೆಗಳು ಈ ಕೆಳಗಿನಂತಿವೆ • ಸಮಾಜ ಕಲ್ಯಾಣ ಇಲಾಖೆ• ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ• ಹಿಂದುಳಿದ … More

ವಿವಿಧ ವ್ಯವಸ್ಥಾಪಕ, ಕಚೇರಿ ಸಹಾಯಕ, ಮೇಲ್ವಿಚಾರಕ ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘ(KSRLPS)ವು ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 22 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಸಿಂಧಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ಹಾಗೂ ವಿಜಯಪುರ ತಾಲೂಕುಗಳಿಗೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ, ಜಿಲ್ಲಾ ವ್ಯವಸ್ಥಾಪಕ, ಕಚೇರಿ ಸಹಾಯಕ, ಬ್ಲಾಕ್ ಮ್ಯಾನೇಜರ್ ಹಾಗೂ ಕ್ಲಸ್ಟರ್ ಮೇಲ್ವಿಚಾರಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು ಮಾ.05ರೊಳಗೆ ಕೆಎಸ್‌ಆರ್‌ಎಲ್‌ಪಿಎಸ್‌ ಅಧಿಕೃತ ಜಾಲತಾಣ https://jobsksrlps.karnataka.gov.in/ಕ್ಕೆ … More