ಪಶ್ಚಿಮ ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್‌; 5349 ಸ್ಲಾಟ್ಸ್‌..!

ಪಶ್ಚಿಮ ರೈಲ್ವೆ(WR)ಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 5349 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ ತರಬೇತಿ ನೀಡಲಿದ್ದು, ಅರ್ಹರ ಆಯ್ಕೆಗಾಗಿ ರೈಲ್ವೆ ನೇಮಕಾತಿ ಕೋಶ(RRC)ವು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾ.23 ಕೊನೆಯ ದಿನವಾಗಿದೆ. ವಿವಿಧ ವಿಭಾಗಗಳು/ಘಟಕಗಳು/ಕಾರ್ಯಾಗಾರಗಳ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ವೈರ್‌ಮ್ಯಾನ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ ಹಾಗೂ ಮೆಕ್ಯಾನಿಕ್ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಒಂದು ವರ್ಷದ ಅವಧಿಯವರೆಗೆ ತರಬೇತಿ ಒದಗಿಸಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಹೊಂದಿರುವವರು ಆರ್‌ಆರ್‌ಸಿ ಡಬ್ಲ್ಯೂಆರ್‌ ಅಧಿಕೃತ ಜಾಲತಾಣ https://www.rrc-wr.com/ಕ್ಕೆ ಭೇಟಿ … More

HPCLನಲ್ಲಿ ಪದವೀಧರ ಅಪ್ರೆಂಟಿಸ್ ಟ್ರೈನಿಗಳ ಭರ್ತಿ

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಬರುವ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(HPCL)ನ ವಿವಿಧ ವಿಭಾಗಗಳಿಗೆ ಪದವೀಧರ ಅಪ್ರೆಂಟಿಸ್‌ ಟ್ರೈನಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ಹೆಚ್‌ಪಿಸಿಎಲ್‌ನ ಮಾರ್ಕೆಟಿಂಗ್ ವಿಭಾಗದ ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್ ವಿಭಾಗಗಳಿಗೆ ಒಟ್ಟು 608 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಕರ್ನಾಟಕಕ್ಕೆ 44 ಸ್ಥಾನಗಳು ಮೀಸಲಿವೆ. ಬಿ.ಇ ಅಥವಾ ಬಿ.ಟೆಕ್ ಪದವೀಧರ ಅಭ್ಯರ್ಥಿಗಳು ಮಾ.02ರೊಳಗೆ ಅಧಿಕೃತ ವೆಬ್ಸೈಟ್ https://www.hindustanpetroleum.com/job-openingsನ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು … More

ಐಐಟಿ ಬಾಂಬೆಯಲ್ಲಿ ತಾಂತ್ರಿಕ ಅಧೀಕ್ಷಕ, ಅಧಿಕಾರಿ, ಲ್ಯಾಬ್ ಸಹಾಯಕ, ಶಿಕ್ಷಕ ಹುದ್ದೆಗಳು..

ಬಾಂಬೆ ಭಾರತೀಯ ತಂತ್ರಜ್ಞಾನ ಸಂಸ್ಥೆ(IITB)ಯಲ್ಲಿ ವಿವಿಧ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಅಧೀಕ್ಷಕ(09), ತಾತ್ಕಾಲಿಕ ಪೂರ್ವ ಪ್ರಾಥಮಿಕ ಶಿಕ್ಷಕ(02), ಜೂನಿಯ‌ರ್ ತರಬೇತಿ ಪಡೆದ ಪದವೀಧರ ಶಿಕ್ಷಕ(04), ತಾಂತ್ರಿಕ ಅಧಿಕಾರಿ(02), ಜೂನಿಯ‌ರ್ ಲ್ಯಾಬ್ ಸಹಾಯಕ(01), ಜೂನಿಯ‌ರ್ ಎಂಜಿನಿಯರ್(01) ಸೇರಿದಂತೆ ಇತರೆ ಒಟ್ಟು 19 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಕೇಲವು ಹುದ್ದೆಗಳನ್ನು ಶಾಶ್ವತ ಆಧಾರ, ಇನ್ನೂ ಕೇಲವು ಹುದ್ದೆಗಳ ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಳ್ಳಿದೆ. ಸದರಿ ಹುದ್ದೆಗಳಿಗಿರುವ ಅರ್ಹತಾಮಾನದಂಡಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸಿ ಹಾಗೂ ಅರ್ಜಿ … More

“IIT ಬಾಂಬೆ”ಯಲ್ಲಿ ಅಪ್ರೆಂಟಿಸ್‌ಶಿಪ್‌

ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಯಲ್ಲಿ ಅಪ್ರೆಂಟಿಸ್‌ ಕಾಯ್ದೆಯಡಿ 70 ಪದವೀಧರ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್‌ ತರಬೇತಿ ನೀಡಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ತಾಂತ್ರಿಕೇತರ ವಿಭಾಗಕ್ಕೆ ಆಯ್ಕೆ ಮಾಡಿಕೊಂಡು, 03 ವರ್ಷದ ಅವಧಿಯವರೆಗೆ ತರಬೇತಿ ನೀಡಲಿದೆ. ಪದವೀಧರ ಅಭ್ಯರ್ಥಿಗಳು ಅಧಿಕೃತ ಲಿಂಕ್‌ (https://docs.google.com/forms/d/e/1FAIpQLSfZcDbmuZjSHthVrRJufJK-_8n1_V34Ol3XvaBpaJPfbHAEow/viewform?usp=header)ನ ಮೂಲಕ ಫೆ.28ರೊಳಗೆ ನೋಂದಣಿಯಾಗಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 2023 ನಂತರದಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ವ್ಯವಹಾರ ಆಡಳಿತ, ಕಂಪ್ಯೂಟರ್ ಅಪ್ಲಿಕೇಶನ್‌, ಹೋಟೆಲ್ … More

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ವಿಜಯಪುರ: ಜಿಲ್ಲೆಯ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ಕಿರಿಯ ಸಹಾಯಕ ಮತ್ತು ಸಿಪಾಯಿ/ವಾಹನ ಚಾಲಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ. 05 ಕಿರಿಯ ಸಹಾಯಕ ಹಾಗೂ 05 ಸಿಪಾಯಿ/ವಾಹನ ಚಾಲಕ ಸೇರಿದಂತೆ ಒಟ್ಟು 10 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ, ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಬ್ಯಾಂಕಿನ ಅಧಿಕೃತ ಜಾಲತಾಣ(https://www.cmsbank.in/notifications/)ದಲ್ಲಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ನಿಗದಿತ ದಾಖಲೆಗಳನ್ನು ಲಗತ್ತಿಸಿ, ‘ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ ನಿ., … More

RRB ಗ್ರೂಪ್ ಡಿ: ಪರೀಕ್ಷೆಯ ಕೀ ಉತ್ತರ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌ ನಂ-08/2024ರಡಿ ಅಧಿಸೂಚಿತ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ 2025ರ ನ.27 ರಿಂದ ಫೆ.10ರವರೆಗೆ ನಡೆಸಲಾದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಕೀ ಉತ್ತರಗಳನ್ನು ಮಂಗಳವಾರ(ಫೆ.17) ಪ್ರಕಟಿಸಿದೆ. ಪ್ರಕಟಿತ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳಿದ್ದಲ್ಲಿ, ಪ್ರತಿ ಪ್ರಶ್ನೆಗೆ ₹50ರಂತೆ ಬ್ಯಾಂಕ್‌ ಶುಲ್ಕ ಪಾವತಿಸಿ ಫೆ.23ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಕೀ ಉತ್ತರಗಳನ್ನು ವೀಕ್ಷಿಸಲು, ಆಕ್ಷೇಪಣೆ ಸಲ್ಲಿಸಲು ಆರ್‌ಆರ್‌ಬಿಯ ಅಧಿಕೃತ ಜಾಲತಾಣದ ಲಿಂಕ್‌ https://rrb.digialm.com/EForms/configuredHtml/33015/96410/login.htmlಗೆ ಭೇಟಿ ನೀಡಿ. ಕೀ ಉತ್ತರ ನೋಡುವ ವಿಧಾನ: • … More

ಕೆಇಎ: ಅಂತಿಮ ಅಂಕಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಿವಿಧ ಇಲಾಖೆ/ನಿಗಮ/ಮಂಡಳಿ/ಸಂಸ್ಥೆಗಳಲ್ಲಿನ ಮೂಲ ಉಳಿಕೆ ವೃಂದ(ನಾನ್‌-ಹೆಚ್‌ಕೆ)ದ ವಿವಿಧ ಹುದ್ದೆಗಳ ಭರ್ತಿಗಾಗಿ ರಾಜ್ಯದಾದ್ಯಂತ ಜ.17, 18 ಹಾಗೂ 25ರಂದು ನಡೆಸಿದ್ದ ಪರೀಕ್ಷೆಗಳ ಅಂತಿಮ ಅಂಕಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/vdptrecnhk2025ದ ಮೂಲಕ ಅಂತಿಮ ಫಲಿತಾಂಶ ಅಂಕಪಟ್ಟಿ ಪರಿಶೀಲನೆ ಮಾಡಿಕೊಳ್ಳಬಹುದು. ಇಲಾಖಾವಾರು ಅಂತಿಮ ಅಂಕಪಟ್ಟಿಗಳ ಪಿಡಿಎಫ್‌ ಲಿಂಕ್‌ಗಳು: ಎನ್‌ಡಬ್ಲ್ಯೂಕೆಆರ್‌ಟಿಸಿ (ಸಹಾಯಕ ಸಂಚಾರ ನಿರೀಕ್ಷಕ) ಡೌನ್ಲೋಡ್‌ ಮಾಡಿ ಕೆಎಸ್‌ಎಸ್‌ಐಡಿಸಿ(ಕಿರಿಯ ಸಹಾಯಕ) ಡೌನ್ಲೋಡ್‌ ಮಾಡಿ ಕೆಎಸ್‌ಡಿಎಲ್‌(ಜೂನಿಯರ್‌ ಆಪೀಸರ್‌) ಡೌನ್ಲೋಡ್‌ ಮಾಡಿ ಕೆಕೆಆರ್‌ಟಿಸಿ (ನಿರ್ವಾಹಕ-ಕಂಡೆಕ್ಟರ್‌) ಡೌನ್ಲೋಡ್‌ … More

ಕೆಇಎ: ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

ಬಿಡಿಎ, ಡಿಟಿಇ, ಆರ್‌ಜಿಯುಎಚ್‌ಎಸ್, ಬಿಡಬ್ಲ್ಯೂಎಸ್‌ಎಸ್‌ಬಿ, ಕೆಎಸ್‌ಎಸ್‌ಐಡಿಸಿ, ಕೆಕೆಆರ್‌ಟಿಸಿ, ಕೆಎಸ್‌ಡಿಎಲ್‌ನ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫೆ.21 ಮತ್ತು 22 ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಸೋಮವಾರ(ಫೆ.16)ದಿಂದ ಡೌನ್ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಫೆ.21ರಂದು ಆಪರೇಟರ್ ಹುದ್ದೆಗಾಗಿ ನಿರ್ದಿಷ್ಟ ಪತ್ರಿಕೆ-2 ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ಗಂಟೆಯವೆರೆಗೆ ನಡೆಯಲಿದೆ. ಫೆ.22ಕ್ಕೆ ಸಾಮಾನ್ಯ ಜ್ಞಾನ ಪತ್ರಿಕೆ-1 ಬೆಳಗ್ಗೆ 10:30ರಿಂದ 12:30ರವರೆಗೆ ಹಾಗೂ ಕನ್ನಡ,ಇಂಗ್ಲೀಷ್‌,ಕಂಪ್ಯೂಟರ್‌ ಜ್ಞಾನ ವಿಷಯಗಳನ್ನೊಳಗೊಂಡ ಪತ್ರಿಕೆ-2 ಮಧ್ಯಾಹ್ನ 2:30 … More

RRB ತಂತ್ರಜ್ಞ ಹುದ್ದೆಗಳು: CBT ಪರಿಷ್ಕೃತ ವೇಳಾಪಟ್ಟಿ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 02/2025ರಡಿ ಅಧಿಸೂಚಿಸಿದ ತಂತ್ರಜ್ಞ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ(ಫೆ.16) ಪ್ರಕಟಿಸಿದ್ದು, ಪರೀಕ್ಷೆಗಳು ಮಾರ್ಚ್ 06, 09 ಹಾಗೂ 10ರಂದು ನಡೆಯಲಿವೆ. ಒಟ್ಟು 6238 ತಂತ್ರಜ್ಞ ಗ್ರೇಡ್-I ಸಿಗ್ನಲ್ ಮತ್ತು ತಂತ್ರಜ್ಞ ಗ್ರೇಡ್-III ವರ್ಗದ ವಿವಿಧ ಹುದ್ದೆಗಳ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ಜರುಗುತ್ತಿದೆ. ಆರ್‌ಆರ್‌ಬಿ ಆಯಾ ಪ್ರಾದೇಶಿಕ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ • … More

RRB RPF 02/2024: ಅಂತಿಮ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್‌)ಯ ಕಾನ್‌ಸ್ಟೇಬಲ್‌(ಕಾರ್ಯನಿರ್ವಾಹಕ) ಹುದ್ದೆಗೆ ಅರ್ಹತೆ ಪಡೆದ 4205 ಅಭ್ಯರ್ಥಿಗಳ ಅಂತಿಮ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಸಿಇಎನ್‌ ಆರ್‌ಪಿಎಫ್‌02/2024ರಡಿ 4208 ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು 2025ರ ಮಾ.2ರಿಂದ 7, 9ರಿಂದ 12 ಮತ್ತು ಮಾ.17ರಿಂದ 18ರವೆರೆಗೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆಯನ್ನು ನ.13 ರಿಂದ ಡಿ.06ರವರೆಗೆ ನಡೆಸಲಾಗಿತ್ತು. ದಾಖಲಾತಿ ಪರಿಶೀಲನೆ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳು ಆಯಾ ಆರ್‌ಆರ್‌ಬಿ ಅಧಿಕೃತ ಜಾಲತಾಣದ(https://indianrailways.gov.in/railwayboard/view_section.jsp?lang=0&id=0,7,1281) ಮೂಲಕ … More