ಹೆಸ್ಕಾಂನಲ್ಲಿ ಶಿಶುಕ್ಷುಗಳ ಆಯ್ಕೆ; ಆರ್ಜಿ ಆಹ್ವಾನ

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಲಿಮಿಟೆಡ್‌ ವತಿಯಿಂದ 2026-27ನೇ ಸಾಲಿನ ಅವಧಿಗೆ ಐಟಿಐ ಎಲೆಕ್ಟ್ರಿಷಿಯನ್ ವೃತ್ತಿ ತರಬೇತಿಗಾಗಿ ಶಿಶುಕ್ಷುಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿ 1 ವರ್ಷದ್ದಾಗಿದೆ. ಐಟಿಐ ಪೂರ್ಣಗೊಳಿಸಿರುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಪ್ರೆಂಟಿಸ್‌ಶಿಪ್‌ ಅಧಿಕೃತ ಜಾಲತಾಣ https://www.apprenticeshipindia.gov.in/ ನೋಂದಣಿಯಾಗಿ. ಹೆಸ್ಕಾಂನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಡೌನ್ಲೋಡ್‌ ಮಾಡಿಕೊಂಡು ಭರ್ತಿ ಮಾಡಿ, ʼಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ), ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – … More

BOB ಆಫೀಸ್‌ ಅಸಿಸ್ಟಂಟ್‌(ಪ್ಯೂನ್‌): ಪ್ರವೇಶ ಪತ್ರ ಪ್ರಕಟ

ಬ್ಯಾಂಕ್‌ ಆಫ್‌ ಬರೋಡಾದ ಉಪ ಸಿಬ್ಬಂದಿ ಕೇಡರ್‌ನಲ್ಲಿ ಆಫೀಸ್‌ ಅಸಿಸ್ಟಂಟ್‌(ಪ್ಯೂನ್‌) ಹುದ್ದೆಗಳ ಭರ್ತಿ ಸಂಬಂಧ ಫೆ.22 ಮತ್ತು 23ರಂದು ನಡೆಯಲಿರುವ ಆನ್‌ಲೈನ್‌ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ ಭಾನುವಾರ ಬಿಡುಗಡೆಯಾಗಿದೆ. ಒಟ್ಟು 500 ಹುದ್ದೆಗಳ(ಕರ್ನಾಟಕಕ್ಕೆ 31 ಹುದ್ದೆ)ನ್ನು ನಿಯಮಿತ ಆಧಾರದ ಮೇಲೆ ನೇಮಕಾತಿಗಾಗಿ 02.05.2025ರಂದು ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಫೆ.14 ರಿಂದ 23ರವೆರೆಗೆ ಅಧಿಕೃತ ಜಾಲತಾಣದ ಲಿಂಕ್‌ https://ibpsonline.ibps.in/bobapr25/opecla_feb26/login.php?appid=5801100cbb3da9bfd57d947475d1149dನ ಮೂಲಕ ಡೌನ್ಲೋಡ್‌ ಮಾಡಿಕೊಳ್ಳಬಹುದು. ಪ್ರವೇಶ ಪತ್ರ ಹೇಗೆ ಡೌನ್ಲೋಡ್‌ ಮಾಡುವುದು? ಹಂತ-1 ಅಧಿಕೃತ ಲಿಂಕ್‌ … More

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC)ದಲ್ಲಿ ವಿವಿಧ ಉದ್ಯೋಗಾವಕಾಶ

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.17 ಕೊನೆಯ ದಿನವಾಗಿದೆ. ಶಿಫ್ಟ್ ಮ್ಯಾನೇಜರ್, ವೆಲ್ಫೇರ್ ಆಫೀಸರ್, ಅಸಿಸ್ಟೆಂಟ್ ಶಿಫ್ಟ್ ಇಂಚಾರ್ಜ್, ಅಸಿಸ್ಟೆಂಟ್ ಕೊಲಿಯರಿ ಎಂಜಿನಿಯರ್, ಅಸಿಸ್ಟೆಂಟ್ ಸೇಫ್ಟಿ ಆಫೀಸರ್ ಹಾಗೂ ಓವರ್‌ಮನ್ ಸೇರಿದಂತೆ ಒಟ್ಟು 22 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಮತ್ತು ಆಸಕ್ತ ಅರ್ಜಿದಾರರು ಎನ್‌ಎಂಡಿಸಿಯ ಅಧಿಕೃತ ವೆಬ್ಸೈಟ್ ಲಿಂಕ್‌ https://jobapply.in/NMDC2025Tokisud/ಗೆ ಭೇಟಿ ನೀಡಿ … More

RRB NTPC(Graduate): CBT-1ರ ವೇಳಾಪಟ್ಟಿ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 06/2025ರಡಿ ಅಧಿಸೂಚಿಸಿದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಫೆ.13ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಒಟ್ಟು 5810 ಸ್ಥಾನಗಳ ಭರ್ತಿಗಾಗಿ ಮೊದಲ ಹಂತದ ಸಿಬಿಟಿ ಪರೀಕ್ಷೆಯು ಮಾರ್ಚ್ 16 ರಿಂದ 27ರವರೆಗೆ ಜರುಗಲಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಆರ್‌ಆರ್‌ಬಿಯ ಆಯಾ ಪ್ರಾದೇಶಿಕ ಜಾಲತಾಣಗಳಲ್ಲಿ(https://indianrailways.gov.in/railwayboard/view_section.jsp?lang=0&id=0,7,1281) ಪರಿಶೀಲಿಸಬಹುದು. ಪರೀಕ್ಷಾ ದಿನಾಂಕಕ್ಕಿಂತ 4 ದಿನಗಳ ಮೊದಲು ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ಐಡಿ … More

NPCILನಲ್ಲಿ ಕಾರ್ಯನಿರ್ವಾಹಕ ತರಬೇತಿದಾರರ ಭರ್ತಿ

ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL)ನ ಕೈಗಾರಿಕಾ ಮತ್ತು ಅಗ್ನಿ ಸುರಕ್ಷತೆ(I&FS) ಹಾಗೂ ಭೌತಶಾಸ್ತ್ರ ವಿಭಾಗಗಳಿಗೆ ಕಾರ್ಯನಿರ್ವಾಹಕ ತರಬೇತಿದಾರರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ. ಬಿಇ/ಬಿ.ಟೆಕ್‌/ಬಿಎಸ್ಸಿ/ಎಂ.ಟೆಕ್‌/ಎಂಇ/ಎಂಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಎನ್‌ಪಿಸಿಐಎಲ್‌ನ ಅಧಿಕೃತ ಜಾಲತಾಣ https://www.npcilcareers.co.in/MainSiten/DefaultInfo.aspxಕ್ಕೆ ಭೇಟಿ ನೀಡಿ. ಮಾ.04 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ … More

ಕೆಸಿಇಟಿ 2026: ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ನೋಂದಣಿಯ ಕೊನೆ ದಿನಾಂಕವನ್ನು ಫೆ.16 ರಿಂದ ಫೆ.22ರವೆರೆಗೆ ವಿಸ್ತರಿಸಿದೆ. ಅರ್ಜಿ ಶುಲ್ಕ ಪಾವತಿಸಲು ಫೆ.24ರ ಸಂಜೆ 5:30ರವೆರೆಗೆ ಅವಕಾಶವಿದೆ. ಇನ್ನು ಯಾರು ಅರ್ಜಿ ಸಲ್ಲಿಕೆ ಮಾಡಿಲ್ಲವೋ ಹಾಗೂ ಅರ್ಜಿ ಶುಲ್ಕ ಪಾವತಿಸಲು ಬಾಕಿ ಉಳಿದ ಅಭ್ಯರ್ಥಿಗಳ ಅನುಕೂಲಕ್ಕಾಗಿ ದಿನಾಂಕವನ್ನು ವಿಸ್ತರಿಸಲಾಗಿದೆ. ಸದರಿ ಪರೀಕ್ಷೆಗೆ ಇಲ್ಲಿಯವರೆಗೆ ಸುಮಾರು 287909 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಕೆಇಎ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. … More

ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ದಲಾಯತ್/ಸೇವಕ ಹುದ್ದೆ..

ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಓರ್ವ ದಲಾಯತ್/ಸೇವಕ ಹುದ್ದೆಯ ಭರ್ತಿಗಾಗಿ ಆಫ್‌ಲೈನ್‌ ಮೂಲಕ ಆರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಮುಗಿಸಿರುವವರು ಅರ್ಜಿ ಸಲ್ಲಿಕೆಗೆ ಅರ್ಹರು. ಅರ್ಜಿ ಸಲ್ಲಿಸಲು ಫೆ.19 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://chamarajanagara.dcourts.gov.inದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಮಾಹಿತಿ ತುಂಬಿ ನಿಗದಿತ ದಾಖಲೆಗಳನ್ನು ಲಗತ್ತಿಸಿ, “ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್. … More

ಉಚಿತ ಎಂಬ್ರಾಯಡರಿ ಮತ್ತು ಫ್ಯಾಬ್ರಿಕ್‌ ಪೈಂಟಿಂಗ್ ತರಬೇತಿ

ಹೊಸಕೋಟೆ: ತಾಲೂಕಿನ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ಮಾರ್ಚ್‌ ತಿಂಗಳ ಮೊದಲ ವಾರದಿಂದ 31 ದಿನಗಳ ಉಚಿತ ಎಂಬ್ರಾಯಡರಿ (ಆರಿ ವರ್ಕ್‌ ಮತ್ತು ಸ್ಯಾರಿ ಕುಚ್ಚು ಹಾಕುವುದು) ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಂಬರೀಶ್‌ ಬಿ ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬ್ಲೌಸ್‌ಗಳಿಗೆ ಆರಿ ವರ್ಕ್‌ ಮಾಡುವುದು, ಸ್ಯಾರಿ ಕುಚ್ಚು ಮತ್ತು ಫ್ಯಾಬ್ರಿಕ್‌ ಪೈಂಟಿಂಗ್‌ ಬಗ್ಗೆ ತರಬೇತಿ ನೀಡಲಾಗುವುದು. ಕನ್ನಡ ಓದಲು ಮತ್ತು ಬರೆಯಲು ತಿಳಿದಿರುವ, … More

UPSC IES, ISS ಸೇವೆಗಳ ಪರೀಕ್ಷೆ 2026ರ ನೋಂದಣಿ ಆರಂಭ

ಕೇಂದ್ರ ಲೋಕಸೇವಾ ಆಯೋಗವು(UPSC) 2026ನೇ ಸಾಲಿನ “ಭಾರತೀಯ ಆರ್ಥಿಕ ಸೇವೆ, ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ”ಯ ನೋಂದಣಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಸದರಿ ಪರೀಕ್ಷೆಯ ಮೂಲಕ ಭಾರತೀಯ ಆರ್ಥಿಕ ಸೇವೆ(IES)ಗೆ 16 ಹುದ್ದೆಗಳು ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ(ISS)ಗೆ 28 ಹುದ್ದೆಗಳಿಗೆ, ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಮಾ.03ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsc.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: … More

ಅಗ್ನಿವೀರ್‌ ನೇಮಕಾತಿ ಅಧಿಸೂಚನೆ ಪ್ರಕಟ; ಅರ್ಜಿ ಆಹ್ವಾನ

ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ನೇಮಕಾತಿ ವರ್ಷಕ್ಕೆ ಸೇನೆಯ ವಿವಿಧ ವಿಭಾಗಗಳಿಗೆ ಅಗ್ನಿವೀರ್‌ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಜನರಲ್ ಡ್ಯೂಟಿ, ಜಿಡಿ-ಮಹಿಳಾ ಮಿಲಿಟರಿ ಪೊಲೀಸ್, ಟೆಕ್ನಿಕಲ್, ಸಿಪಾಯಿ ಫಾರ್ಮಾ, ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್‌ಮೇನ್‌ ವಿಭಾಗಗಳಿಗೆ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಮತ್ತು ಸಂಬಂಧಿತ ವಿಷಯದಲ್ಲಿ ಪಿಯುಸಿ ಅಭ್ಯಾಸ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹರು ಏ.10ರೊಳಗೆ ಭಾರತೀಯ ಸೇನೆ ಅಧಿಕೃತ ವೆಬ್ ಸೈಟ್ https://www.joinindianarmy.nic.in/BRAVOUserLogin.htmಗೆ … More