ಕೆಇಎ: ಅಂಕಪಟ್ಟಿ ಪ್ರಕಟ

ವಿವಿಧ ಇಲಾಖೆ/ಮಂಡಳಿ/ಸಂಸ್ಥೆ/ನಿಗಮದ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ರಾಜ್ಯದಾದ್ಯಂತ ಜ.25ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂಕ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಇಲಾಖಾವಾರು ಪ್ರತ್ಯೇಕ ಅಂಕಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/keaದಲ್ಲಿ ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಬಹುದಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ಸಹಾಯಕ ಸಂಚಾರ ನಿರೀಕ್ಷಕ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಜೂನಿಯರ್ ಸಹಾಯಕ, ಕರ್ನಾಟಕ ಸೋಪ್ಸ್ … More

ಭಾರತೀಯ ಸೇನೆ: NCC ವಿಶೇಷ ಪ್ರವೇಶ

ಭಾರತೀಯ ಸೇನೆಯು 2026ನೇ ಸಾಲಿಗೆ ಎನ್‌ಸಿಸಿ ವಿಶೇಷ ಪ್ರವೇಶ ಯೋಜನೆ, ಕೋರ್ಸ್‌ 124ರಡಿ 76 ಹುದ್ದೆಗಳಿಗೆ ಅವಿವಾಹಿತ ಪುರುಷ ಮತ್ತು ಮಹಿಳೆಯರ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 70 ಪುರುಷ ಹಾಗೂ 06 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು 49 ವಾರಗಳವರೆಗೆ ತರಬೇತಿ ನೀಡಲಿದೆ. ತದನಂತರ ಅಭ್ಯರ್ಥಿಗಳು ಲೆಫ್ಟಿನೆಂಟ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಯುದ್ಧದಲ್ಲಿ ಸಾವನ್ನಪ್ಪಿದ ಸೇನಾ ಸಿಬ್ಬಂದಿ ವಾರ್ಡ್ ವರ್ಗಕ್ಕೂ ಕೂಡಾ ಹುದ್ದೆಗಳು ಮೀಸಲಿವೆ. ಆಸಕ್ತರು ಮಾ.16ರೊಳಗೆ ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ https://joinindianarmy.nic.in/officers-notifications.htmಗೆ ಭೇಟಿ … More

NTPC ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ತರಬೇತಿದಾರ(EET)ರ ಭರ್ತಿ

ಭಾರತದ ಅತಿದೊಡ್ಡ ವಿದ್ಯುತ್ ಸಮೂಹವಾಗಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(NTPC) ಗೇಟ್-2025ರ ಮೂಲಕ ತನ್ನ ವಿವಿಧ ವಿಭಾಗಗಳಿಗೆ ಎಂಜಿನಿಯರಿಂಗ್ ಕಾರ್ಯನಿರ್ವಾಹಕ ತರಬೇತಿದಾರರ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಎಲೆಕ್ಟ್ರಿಕಲ್(165), ಮೆಕ್ಯಾನಿಕಲ್(210), ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್(125), ಕಂಪ್ಯೂಟರ್ ಸೈನ್ಸ್/ಇನ್ಫಾರ್ಮಶನ್ ಟೆಕ್ನಾಲಜಿ(15) ವಿಭಾಗಗಳಿಗೆ ಒಟ್ಟು 515 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಇಂಜಿನಿಯರ್‌ ಪದವೀಧರರು ಫೆ.25ರೊಳಗೆ ಎನ್‌ಟಿಪಿಸಿ ಅಧಿಕೃತ ಜಾಲತಾಣ https://careers.ntpc.co.in/recruitment/index.phpಕ್ಕೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: NTPC ಅಧಿಕೃತ … More

RRB JE CEN 05/2025: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ, ಸಿಟಿ ಇಂಟಿಮೇಷನ್‌ ಸ್ಲಿಪ್‌ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ(RRB)ಯು ಸಿಇಎನ್ 05/2025ರಡಿ ಅಧಿಸೂಚಿತ ಜೆಇ/ಡಿಎಂಎಸ್‌/ಸಿಎಂಎ ವರ್ಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ-I)ಯ ಪರಿಷ್ಕೃತ ವೇಳಾಪಟ್ಟಿಯ ಜೊತೆಗೆ ಸಿಟಿ ಇಂಟಿಮೇಷನ್‌ ಸ್ಲಿಪ್‌ಅನ್ನು ಫೆ.10ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನಿಯರ್ ಎಂಜಿನಿಯ‌ರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಸೇರಿದಂತೆ ಒಟ್ಟು 2570 ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT-I)ಯು ಫೆಬ್ರವರಿ 19, 20 ಹಾಗೂ 25 ರಂದು ಒಟ್ಟು 3 ದಿನಗಳ … More

ಬ್ಯಾಂಕ್ ಆಫ್ ಬರೋಡಾದ MSME ಇಲಾಖೆಯಲ್ಲಿ ಉದ್ಯೋಗಾವಕಾಶ

ಬ್ಯಾಂಕ್ ಆಫ್ ಬರೋಡಾ(BOB)ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(MSME) ಬ್ಯಾಂಕಿಂಗ್ ಇಲಾಖೆಯಲ್ಲಿ ಅಸಿಸ್ಟಂಟ್‌ ವೈಸ್‌ ಪ್ರೆಸಿಡೆಂಟ್‌ ಸೇರಿದಂತೆ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಫೆ.26 ರೊಳಗೆ ಅರ್ಜಿಸಲ್ಲಿಸಲು ಅವಕಾಶವಿದೆ. ಇಲಾಖೆಯ ಕ್ರೇಡಿಟ್‌ ಅನಾಲಿಸಿಸ್ಟ್‌, ಸಂಬಂಧ, ಮಾರಾಟ ವಿಭಾಗಗಳಿಗೆ ನಿಯಮಿತ ಆಧಾರದ ಮೇಲೆ 166 ಸ್ಥಾನಗಳು ಹಾಗೂ ಗುತ್ತಿಗೆ ಆಧಾರದ ಮೇಲೆ 253 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ … More

‘ಬೆಸ್ಕಾಂ’ನಲ್ಲಿ ಅಪ್ರೆಂಟಿಸ್‌ಶಿಪ್‌

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(ಬೆಸ್ಕಾಂ) 2025-26ನೇ ಸಾಲಿಗೆ ಅಪ್ರೆಂಟಿಸ್‌ಶಿಪ್‌ ಕಾಯ್ದೆಯಡಿ 520 ಪದವೀಧರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತರಬೇತಿ ಅವಧಿಯು ಒಂದು ವರ್ಷದ್ದಾಗಿದೆ. ಎಂಜಿನಿಯರಿಂಗ್‌ ಪದವೀಧರ ಅಪ್ರೆಂಟಿಸ್‌ 130 ಸ್ಥಾನಗಳು, ಪದವೀಧರ ಅಪ್ರೆಂಟಿಸ್‌(ಎಂಜಿನಿಯರಿಂಗ್ ಹೊರತುಪಡಿಸಿ) 315 ಸ್ಥಾನಗಳು, ಡಿಪ್ಲೊಮಾ ಅಪ್ರೆಂಟಿಸ್‌ 75 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ವಿವಿಧ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಪದವೀಧರ ಪಡೆದಿರುವ ಅಭ್ಯರ್ಥಿಗಳು ತರಬೇತಿಗೆ ಅರ್ಹರು. ಆಸಕ್ತರು NATS ಅಧಿಕೃತ ಜಾಲತಾಣ https://nats.education.gov.in/ಕ್ಕೆ ಭೇಟಿ … More

ಬ್ಯಾಂಕ್ ಆಫ್ ಬರೋಡಾದ ಐಟಿ ಇಲಾಖೆಯಲ್ಲಿ ಹಲವು ಹುದ್ದೆಗಳು

ಬ್ಯಾಂಕ್ ಆಫ್ ಬರೋಡಾ(BOB)ದ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ 418 ವಿವಿಧ ಸೀನಿಯರ್ ಮ್ಯಾನೇಜರ್, ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.19 ಕೊನೆಯ ದಿನವಾಗಿದೆ. ಅಭ್ಯರ್ಥಿಗಳನ್ನು ನಿಯಮಿತ ಆಧಾರ ಮೇಲೆ ನೇಮಕ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು BOB ಅಧಿಕೃತ ವೆಬ್‌ಸೈಟ್ ಲಿಂಕ್‌ https://bankappsweb.bankofbaroda.bank.in/BOBRECRUITMENT_JAN_ITD2608724/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ … More

“ಆಹಾರ ವಾಹಿನಿ”ಯಡಿ ₹3 ಲಕ್ಷ ಸಹಾಯಧನ; ಅರ್ಜಿ ಆಹ್ವಾನ

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ ಆಹಾರ ವಾಹಿನಿ(ಆಹಾರ ಕಿಯೋಸ್ಟ್) ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಒಕ್ಕಲಿಗ ಅಥವಾ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರಬೇಕು. ಸರ್ಕಾರ ಸದರಿ ಯೋಜನೆಯಡಿ ನಾಲ್ಕು ಚಕ್ರಗಳ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ಒಳಗೊಂಡ ಇವಿ-ಗೂಡ್ಸ್ ವಾಹನಗಳ ಖರೀದಿಗೆ 3 ಲಕ್ಷರೂ.ವರೆಗೆ ಸಹಾಯಧನ ನೀಡುತ್ತಿದೆ. ಸ್ವಂತ ಉದ್ಯೋಗ ಕೈಗೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ನಿಗದಿತ ಕೊನೆಯ … More

ಇಂಡಿಯನ್‌ ಆಯಿಲ್‌ನಲ್ಲಿ ಟ್ರೇಡ್‌ ಮತ್ತು ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL)ನ ಮಥುರಾ ಸಂಸ್ಕರಣಾ ಘಟಕದ ವಿವಿಧ ವಿಭಾಗಗಳಿಗೆ 1961ರ ಅಪ್ರೆಂಟಿಸ್‌ ಕಾಯ್ದೆಯಡಿ ಟ್ರೇಡ್‌ ಮತ್ತು ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌, ಇನ್ಸ್ಟ್ರುಮೆಂಟೇಶನ್‌, ಅಕೌಂಟೆಂಟ್‌ ವಿಭಾಗಗಳಿಗೆ ಟ್ರೇಡ್‌ ಅಪ್ರೆಂಟಿಸ್‌ 42 ಸೀಟುಗಳು ಹಾಗೂ ಟೆಕ್ನಿಷಿಯನ್‌ ಅಪ್ರೆಂಟಿಸ್‌ 66 ಸೀಟುಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ/ವಿಷಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ಒದಗಿಸಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆ.20ರೊಳಗೆ … More

PSI ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿಗೆ ವಸತಿ ಸಹಿತ ಸಬ್‌ ಇನ್‌ಸ್ಪೆಕ್ಟರ್‌(PSI) ಆಯ್ಕೆ ಪೂರ್ವ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗದ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಪದವೀಧರ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತರಬೇತಿಗೆ ಅರ್ಹರು. ತರಬೇತಿ ಅವಧಿ ಅಂದಾಜು 75 ದಿನಗಳಾಗಿರುತ್ತವೆ. ಈ ಅವಧಿಯಲ್ಲಿ ಉಚಿತ ವಸತಿ ಜೊತೆಗೆ ಊಟದ ವ್ಯವಸ್ಥೆ ಇರುತ್ತದೆ. ಆಸಕ್ತರು http://164.100.133.164:81/PSI_2526/App_form.aspxಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ … More