NTA ನೀಟ್(ಯುಜಿ) 2026ರ ನೋಂದಣಿ ಪ್ರಾರಂಭ

ಭಾರತದಲ್ಲಿನ ವಿವಿಧ ಪದವಿಪೂರ್ವ ವೈದ್ಯಕೀಯ (MBBS, BDS, BAMS, BUMS, BSMS, BHMS ಮತ್ತು ಇತರೆ) ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಯುಜಿ-ನೀಟ್‌)ಯ ನೋಂದಣಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಭಾನುವಾರದಿಂದ ಪ್ರಾರಂಭಿಸಿದೆ. ಕನ್ನಡ ಭಾಷೆ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಪ್ರವೇಶ ಪರೀಕ್ಷೆ ಜರುಗಲಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳನ್ನು ಅಭ್ಯಸಿಸಿ ತೇರ್ಗಡೆ ಹೊಂದಿರುವ ಅಥವಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೋಂದಣಿಗೆ ಅರ್ಹರು. ಆಸಕ್ತ ವಿದ್ಯಾರ್ಥಿಗಳು ಎನ್‌ಟಿಎ ನೀಟ್‌ ಅಧಿಕೃತ ವೆಬ್‌ಸೈಟ್ … More

RBIನಲ್ಲಿ ವಿವಿಧ ಹುದ್ದೆಗಳ ಭರ್ತಿ: ಹೀಗೆ ಅಪ್ಲೈ ಮಾಡಿ

ಬ್ಯಾಂಕುಗಳ ಬ್ಯಾಂಕಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್‌(RBI) ವಿವಿಧ ಗ್ರೇಡ್‌ “ಎ”, “ಬಿ” ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಫೆ.6ರಿಂದ ಆರಂಭವಾಗಿದೆ. ಕಾನೂನು ಅಧಿಕಾರಿ ಮತ್ತು ವಿವಿಧ ವೃಂದದ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹುದ್ದೆಗಳು ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.26ರೊಳಗೆ IBPS ಅಧಿಕೃತ ಜಾಲತಾಣದ ಲಿಂಕ್‌(https://ibpsreg.ibps.in/rbijan26/) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: … More

RRB NTPC ಪದವಿಪೂರ್ವ ಹಂತದ ನೇಮಕಾತಿ 2026: ಅರ್ಜಿ ಸ್ಥಿತಿ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು (RRB) CEN ಸಂಖ್ಯೆ 07/2025ರಡಿ ಅಧಿಸೂಚಿಸಲಾದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿಪೂರ್ವ ಹಂತದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಅರ್ಜಿ ಸ್ಥಿತಿಯನ್ನು ಫೆ.06ರಿಂದ ಪರಿಶೀಲಸಲು ಅವಕಾಶ ಕಲ್ಪಿಸಿದೆ. ಒಟ್ಟು 3058 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಿ ಅರ್ಜಿ ಸ್ವೀಕರಿಸಿತ್ತು. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅರ್ಜಿ ಸ್ಥಿತಿಯನ್ನು RRB ಅಧಿಕೃತ ಜಾಲತಾಣ http://www.rrbapply.gov.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು … More

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ “ಅಪ್ರೆಂಟಿಸ್‌ಶಿಪ್‌”; 5138 ಸೀಟುಗಳು!

ಬ್ಯಾಂಕಿಂಗ್‌ ವಲಯದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸುವವರಿಗೆ ಇದೊಂದು ಉತ್ತಮ ಅವಕಾಶ. ಪಂಜಾಬ್ ನ್ಯಾಷನಲ್ ಬ್ಯಾಂಕ್ 2025-26ನೇ ಸಾಲಿಗೆ ಅಪ್ರೆಂಟಿಸ್‌ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5138 ಸೀಟುಗಳಿದ್ದು, ಕರ್ನಾಟಕಕ್ಕೆ 64 ಸೀಟುಗಳು ಮೀಸಲಿವೆ. ದೇಶದಲ್ಲಿನ ತನ್ನ ಬ್ಯಾಂಕಿನ ಶಾಖೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಿದೆ. ವಿವಿಧ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತಿ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ಜಾಲತಾಣ … More

ನಂದಿನಿ ‘ಶಿಮುಲ್’ನಲ್ಲಿ 194 ಹುದ್ದೆಗಳ ಭರ್ತಿ; ಮರು ಅರ್ಜಿ ಆಹ್ವಾನ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(SHIMUL)ದಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ 194 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಮರು ಅರ್ಜಿ ಆಹ್ವಾನಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಾಯಕ ವ್ಯವಸ್ಥಾಪಕ, ಎಂಐಎಸ್/ಸಿಸ್ಟಂ ಆಫೀಸರ್, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಮುಖೇನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತಾ ಮಾನದಂಡ ಪೂರೈಸುವ … More

ನಿಮ್ಹಾನ್ಸ್‌ನಲ್ಲಿ ಗ್ರೂಪ್ “ಬಿ” ಮತ್ತು “ಸಿ” ಹುದ್ದೆಗಳು

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯಲ್ಲಿ ಗ್ರೂಪ್ “ಬಿ” ಹಾಗೂ ಗ್ರೂಪ್ “ಸಿ” ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್, ಇಸಿಜಿ ಟೆಕ್ನಿಷಿಯನ್, ಲೈಬ್ರರಿ ಅಸಿಸ್ಟೆಂಟ್, ಆರ್ಟಿಸ್ಟ್, ಫೋಟೋಗ್ರಾಫರ್ ಹಾಗೂ ಸ್ಟೆನೋಗ್ರಾಫರ್ ಸೇರಿದಂತೆ ಇತರೆ ಒಟ್ಟು 52 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಮಾ.04ರೊಳಗೆ ನಿಮ್ಹಾನ್ಸ್ ಅಧಿಕೃತ ಜಾಲತಾಣ https://nimhans.lntedutech.com/job-openings/recruitment-sectionಕ್ಕೆ ಭೇಟಿ ನೀಡಿ ಅರ್ಜಿ … More

SSC ಆಯ್ಕೆ ಹುದ್ದೆಗಳ(ಹಂತ-13)ಪರೀಕ್ಷೆ 2025ರ CBT ಫಲಿತಾಂಶ ಪ್ರಕಟ

2025ರ ಆಯ್ಕೆ ಹುದ್ದೆಗಳ(ಹಂತ-13) ಪರೀಕ್ಷೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜು.24 ರಿಂದ ಆ.02ವರೆಗೆ ಹಾಗೂ ಆ.29ರಂದು ನಡೆಸಲಾದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಫಲಿತಾಂಶವನ್ನು ಸಿಬ್ಬಂದಿ ಆಯ್ಕೆ ಆಯೋಗ ಗುರುವಾರ ಪ್ರಕಟಿಸಿದೆ. ಸದರಿ ಪರೀಕ್ಷೆಯಲ್ಲಿ ಮೆಟ್ರಿಕ್ಯುಲೇಶನ್‌ ಮಟ್ಟದ ಹುದ್ದೆಗಳಿಗೆ 17,720 ಅಭ್ಯರ್ಥಿಗಳು, ಪಿಯುಸಿ(10+2) ಮಟ್ಟದ ಹುದ್ದೆಗಳಿಗೆ 14,768 ಅಭ್ಯರ್ಥಿಗಳು ಹಾಗೂ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟದ ಹುದ್ದೆಗಳಿಗೆ 35,055 ಅಭ್ಯರ್ಥಿಗಳು ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗಾಗಿ ಶಾರ್ಟ್‌ಲಿಸ್ಟ್‌ ಮಾಡಲಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷೆ ಹಾಜರಾಗಿದ್ದ … More

ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಅವಶ್ಯಕತೆ; ಅರ್ಜಿ ಆಹ್ವಾನ

ದೆಹಲಿಯ ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ. ಸಲಹೆಗಾರ(04), ಕಾನೂನು ಸಲಹೆಗಾರ(02) ಮತ್ತು ಹಿರಿಯ ಯೋಜನಾ ಸಲಹೆಗಾರ(01) ಸೇರಿದಂತೆ ಒಟ್ಟು 07 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಸಚಿವಾಲಯದ ಅಧಿಕೃತ ಜಾಲತಾಣ(https://ayush.gov.in/)ದ ಮೂಲಕ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ, ಫೆ.20ರೊಳಗೆ ತಲುಪುವಂತೆ “ಶ್ರೀಮತಿ ಶೀಲಾ ಟಿರ್ಕಿ, ಅಂಡರ್ ಸೆಕ್ರೆಟರಿ (ಆಡಳಿತ), … More

ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ನಾನ್ ಟೆಕ್ನಿಷಿಯನ್ ಉದ್ಯೋಗಾವಕಾಶ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ಅಂಗಸಂಸ್ಥೆ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(CRRI)ಯಲ್ಲಿ ವಿವಿಧ ತಂತ್ರಜ್ಞರಲ್ಲದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಿರಿಯ ಹಿಂದಿ ಅನುವಾದಕ(01), ಭದ್ರತಾ ಸಹಾಯಕ ಮತ್ತು ಕಾವಲು ‍& ವಾರ್ಡ್ ಸಹಾಯಕ(01), ಬಹುಕಾರ್ಯಕ ಸಿಬ್ಬಂದಿ(10) ಸೇರಿ ಒಟ್ಟು 12 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು CRRI ಅಧಿಕೃತ ಜಾಲತಾಣ https://crridom.gov.in/en/recruitmentದಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಫೆ.23ರೊಳಗೆ ಆನ್‌ಲೈನ್‌ ಮುಖೇನ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಪ್ರಮುಖ … More

DRDO: ಬೆಂಗಳೂರಿನ CABSನಲ್ಲಿ ಫೆಲೋಶಿಪ್‌

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಮುಖ ಸಂಶೋಧನಾ ಕೇಂದ್ರವಾಗಿರುವ ಬೆಂಗಳೂರಿನ ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ಸ್(CABS)ನಲ್ಲಿ 10 ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗಾಗಿ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಅಥವಾ ಎಂ.ಇ/ಎಂ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ಫೆ.22 ರೊಳಗೆ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಸ್ಥೆಯ ಇ-ಮೇಲ್‌ ವಿಳಾಶಕ್ಕೆ ರವಾನಿಸಬೇಕು. ನಂತರ ಫೆ.25, 26ಕ್ಕೆ “ಸೆಂಟರ್ ಫಾರ್ ಏರ್‌ಬೋರ್ನ್ … More