ಗೆಜೆಟೆಡ್‌ ಪ್ರೊಬೇಷನರ್‌: ವ್ಯಕ್ತಿತ್ವ ಪರೀಕ್ಷೆ ವೇಳಾಪಟ್ಟಿ ಹಿಂಪಡೆದ ಕೆಪಿಎಸ್ಸಿ.!

ಬೆಂಗಳೂರು: 2024-25ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ ಗ್ರೂಪ್‌ ಎ ಮತ್ತು ಬಿ ವೃಂದದ 384 ಹುದ್ದೆಗೆ ಸಂಬಂಧ ಮಾ.23 ರಿಂದ ಮೇ.04ರವೆರೆಗೆ ನಡೆಸಲು ಉದ್ದೇಶಿಸಲಾಗಿದ್ದ, ವ್ಯಕ್ತಿತ್ವ ಪರೀಕ್ಷೆ ಹಾಗೂ ಮೂಲ ದಾಖಲೆ ಪರಿಶೀಲನೆಯ ವೇಳಾಪಟ್ಟಿಯನ್ನು ಹಿಂಪಡಿಯಲಾಗಿದೆ. ಮಾ.10ರಂದು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದ ವೇಳಾಪಟ್ಟಿಯನ್ನು ಆಡಳಿತಾತ್ಮಕ ಕಾರಣಗಳಿಂದ ಹಿಂಪಡೆಯಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಕೆಪಿಎಸ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.

CTET 2026: ಪರೀಕ್ಷೆಯ ಕೀ ಉತ್ತರ ಪ್ರಕಟ

2026ನೇ ಸಾಲಿನ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(ಸಿಟಿಇಟಿ), ಫೆಬ್ರವರಿ ಆವೃತ್ತಿಗೆ ಸಂಬಂಧಿಸಿದಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್ಸಿ)ಯು ಫೆ.07 ಮತ್ತು 08ರಂದು ನಡೆಸಿದ ಪರೀಕ್ಷೆಯ ಕೀ ಉತ್ತರಗಳನ್ನು ಗುರುವಾರ ಪ್ರಕಟಿಸಿದೆ. ಪ್ರಕಟಿತ ಕೀ ಉತ್ತರಗಳನ್ನು ಅಧಿಕೃತ ಜಾಲತಾಣ https://cbseit.in/cbse/2026/ctetkey/ಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು. ಕೀ ಉತ್ತರಳ ಮೇಲೆ ಸವಾಲುಗಳಿದ್ದಲ್ಲಿ ಪತ್ರಿ ಪ್ರಶ್ನೆಗೆ ₹1000ರಂತೆ ಪಾವತಿಸಿ, ಮಾ.15ರೊಳಗೆ ಸಲ್ಲಿಸಬಹುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ. ಕೀ ಉತ್ತರ ಪರಿಶೀಲನೆ ಹೇಗೆ.? ಹಂತ-1 ಅಧಿಕೃತ ಲಿಂಕ್‌ https://cbseit.in/cbse/2026/ctetkey/ಗೆ ಭೇಟಿ. ಹಂತ-2 … More

UPSC CMSE 2026: ವೈದ್ಯಕೀಯ ಸೇವೆಗಳ ಪರೀಕ್ಷೆಗೆ ನೋಂದಣಿ ಆರಂಭ

ಕೇಂದ್ರ ಲೋಕಸೇವಾ ಆಯೋಗ(UPSC)ವು 2026ನೇ ಸಾಲಿನ ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ(CMSE)ಯ ನೋಂದಣಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಪರೀಕ್ಷೆ ಆ.02ರಂದು ಜರುಗಲಿದೆ. ಸದರಿ ಪರೀಕ್ಷೆಯ ಮೂಲಕ ಒಟ್ಟು 1358 ವಿವಿಧ ವೃಂಧದ ವೈದ್ಯಕೀಯ ಅಧಿಕಾರಿ ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಎಂಬಿಬಿಎಸ್ ಉತ್ತೀರ್ಣರಾಗಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಮಾ.31ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.nic.in/loginನ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಖಾಲಿ ಇರುವ ತಾತ್ಕಾಲಿಕ ಹುದ್ದೆಗಳ ವಿವರ: ಸಾಮಾನ್ಯ ಕರ್ತವ್ಯ ವೈದ್ಯಕೀಯ … More

ವಿಮಾನ ನಿಲ್ದಾಣ ಪ್ರಾಧಿಕಾರ(AAI); ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ತನ್ನ ಪ್ರಾದೇಶಿಕ ಪ್ರಧಾನ ಕಚೇರಿ(ಉತ್ತರ ವಲಯ) ವ್ಯಾಪ್ತಿಯ ವಿವಿಧ ವಿಮಾನ ನಿಲ್ದಾಣಗಳಿಗೆ ಅಪ್ರೆಂಟಿಸ್ ಕಾಯ್ದೆಯಡಿ ಪದವೀಧರ, ಡಿಪ್ಲೊಮಾ, ಐಟಿಐ ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರಿಗೆ 22 ಸ್ಥಾನ, ಡಿಪ್ಲೊಮಾ ಅಭ್ಯರ್ಥಿಗಳಿಗೆ 64 ಸ್ಥಾನ, ಐಟಿಐ ಅಭ್ಯರ್ಥಿಗಳಿಗೆ 47 ಸ್ಥಾನ ಸೇರಿದಂತೆ ಒಟ್ಟು 133 ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು, ಆಯ್ದ ಅಭ್ಯರ್ಥಿಗಳಿಗೆ 01 ವರ್ಷದ ಅವಧಿಯವರೆಗೆ ತರಬೇತಿ ಒದಗಿಸಲಿದೆ. ವ್ಯಾಪ್ತಿಗೆ ಒಳಪಡುವ ಆಸಕ್ತರು ಪದವೀಧರ/ಡಿಪ್ಲೊಮಾ ಅಪ್ರೆಂಟಿಸ್‌ಗಾಗಿ https://nats.education.gov.in/, ಐಟಿಐ ಅಪ್ರೆಂಟಿಸ್‌ಗಾಗಿ https://www.apprenticeshipindia.gov.in/ನ … More

ನೌಕಾಪಡೆಯಲ್ಲಿ ಅಗ್ನಿವೀರ್(ಎಂಆರ್‌, ಎಸ್‌ಎಸ್‌ಆರ್‌, ಎಸ್‌ಎಸ್‌ಆರ್‌ ಮೆಡಿಕಲ್‌) ನೇಮಕಾತಿ

ಭಾರತೀಯ ನೌಕಾಪಡೆಯು ಅಗ್ನಿವೀರ್ (ಮ್ಯಾಟ್ರಿಕ್ ನೇಮಕಾತಿ-ಎಂಆರ್‌ & ಹಿರಿಯ ಮಾಧ್ಯಮಿಕ ನೇಮಕಾತಿ-ಎಸ್‌ಎಸ್‌ಆರ್‌) ಮತ್ತು ನಾವಿಕ (ಎಸ್‌ಎಸ್‌ಆರ್‌ ಮೆಡಿಕಲ್ ವಿಭಾಗ) ಹುದ್ದೆಗಳ 01/2027 ಮತ್ತು 02/2027 ಬ್ಯಾಚ್‌ಗಳ ಭರ್ತಿಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಅವಧಿಯು ಮಾ.14 ರಿಂದ ಏ.06ರವೆರೆಗೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ವಿಜ್ಞಾನ ವಿಷಯಗಳೊಂದಿಗೆ ತೇರ್ಗಡೆ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ಹೊಂದಿರುವವರು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ ಸೈಟ್ https://www.joinindiannavy.gov.in/en/account/eligibilitylistನ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ … More

ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ, ಬೆರಳಚ್ಚುಗಾರ, ಪ್ಯೂನ್‌ ಭರ್ತಿ; 13 ರಿಂದ ಅರ್ಜಿ

ಚಾಮರಾಜನಗರ: ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶವರ ಕಚೇರಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಗೆ ಮಾ.13 ರಿಂದ ಏ.13ರ ಗಡುವು ನೀಡಿದೆ. ಸ್ಟೆನೋಗ್ರಾಫರ್(ಶೀಘ್ರಲಿಪಿಗಾರ) 02 ಸ್ಥಾನ, ಟೈಪಿಸ್ಟ್ (ಬೆರಳಚ್ಚುಗಾರ) 06 ಸ್ಥಾನ, ಟೈಪಿಸ್ಟ್-ಕಾಪಿಇಸ್ಟ್(ಬೆರಳಚ್ಚು-ನಕಲುಗಾರ) 04 ಸ್ಥಾನ, ಪ್ಯೂನ್‌(ಸೇವಕ) 13 ಸ್ಥಾನ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು … More

ಆದರ್ಶ ವಿದ್ಯಾಲಯ ಪ್ರವೇಶ 2026; ಪರೀಕ್ಷೆಯ ಹಾಲ್‌ ಟಿಕೆಟ್‌ ಪ್ರಕಟ

ಪ್ರಸಕ್ತ ಸಾಲಿಗೆ ರಾಜ್ಯದಲ್ಲಿನ ಆದರ್ಶ ವಿದ್ಯಾಲಯ ಮಾದರಿ ವಸತಿ ಶಾಲೆಗಳಿಗೆ 6ನೇ ತರಗತಿ ಪವೇಶಾತಿಗೆ ಸಂಬಂಧಿಸಿದಂತೆ ಮಾ.22ರಂದು ನಡೆಯಲಿರುವ ಪ್ರವೇಶ ಪರೀಕ್ಷೆಯ ಹಾಲ್‌ ಟಿಕೆಟನ್ನು ಮಾ.10ರಿಂದ ಡೌನ್ಲೋಡ್‌ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸಿದೆ. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಪರೀಕ್ಷೆ ನಡೆಯಲಿದ್ದು, ಅಧಿಕೃತ ಜಾಲತಾಣದ ಲಿಂಕ್‌(http://164.100.133.7:82/frmnotify.aspx)ನ ಮೂಲಕ ತಮ್ಮ ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು. ಆದರ್ಶ ವಿದ್ಯಾಲಯ ಪ್ರವೇಶ 2026; ಪರೀಕ್ಷೆಯ ಹಾಲ್‌ ಟಿಕೆಟ್‌ ಹೇಗೆ ಡೌನ್ಲೋಡ್‌ … More

ಕೊಚ್ಚಿನ್ ಶಿಪ್‌ಯಾರ್ಡ್ GME ಕೋರ್ಸ್ ಪ್ರವೇಶಾತಿ ಪ್ರಾರಂಭ

ನೇವಿಯಲ್ಲಿ ಮರೈನ್ ಎಂಜಿನಿಯರ್‌ಗಳಾಗಿ ವೃತ್ತಿಜೀವನವನ್ನು ಮುಂದುವರಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಉತ್ತಮ ಸದಾವಕಾಶ, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಕೊಚ್ಚಿಯ ಮರೈನ್ ಎಂಜಿನಿಯರಿಂಗ್ ತರಬೇತಿ ಸಂಸ್ಥೆಯು ಗ್ರಾಜುಯೇಟ್ ಮರೈನ್ ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಾತಿಗಾಗಿ ನೋಂದಣಿ ಪ್ರಾರಂಭಿಸಿದೆ. ಗ್ರಾಜುಯೇಟ್ ಮರೈನ್ ಎಂಜಿನಿಯರಿಂಗ್ ಕೋರ್ಸ್ ಪೂರ್ವ ತರಬೇತಿಯನ್ನು 01 ವರ್ಷದ ಅವಧಿಯವರೆಗೆ ನೀಡಲಾಗುತ್ತದೆ, ಯಶಸ್ವಿಯಾಗಿ ಕೋರ್ಸು ಪೂರ್ಣಗೊಳಿಸಿದ ಅಭ್ಯರ್ಥಿಗಳು ನೇವಿ ಮರೈನ್ ಎಂಜಿನಿಯರ್ ಆಫೀಸರ್ ಪ್ರಮಾಣೀಕರಣಕ್ಕೆ ಅರ್ಹರಾಗುತ್ತಾರೆ. ಪತ್ರಿ ವರ್ಷ 160 ಸೀಟುಗಳನ್ನು ಭರ್ತಿ ಮಾಡಿಕೊಳ್ಳುತ್ತದೆ. ಸದರಿ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು … More

ರಾಷ್ಟ್ರೀಯ ಗುಪ್ತಚರ ಗ್ರಿಡ್‌ನಲ್ಲಿ ಉದ್ಯೋಗಾವಕಾಶ

ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಗುಪ್ತಚರ ಗ್ರಿಡ್(NATGRID)ನಲ್ಲಿ 23 ವಿವಿಧ ನಿರ್ದೇಶಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿರ್ದೇಶಕ 01 ಹುದ್ದೆ, ಉಪನಿರ್ದೇಶಕ 05 ಹುದ್ದೆ, ಸಹಾಯಕ ನಿರ್ದೇಶಕ 17 ಹುದ್ದೆ ಅಭ್ಯರ್ಥಿಗಳನ್ನು ಡೆಪ್ಯೂಟೇಶನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಧಿಕೃತ ಜಾಲತಾಣ ದಲ್ಲಿ ಪ್ರಚುರಪಡಿಸಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, “ಅಧೀನ ಕಾರ್ಯದರ್ಶಿ (estt), NATGRID, ಗೃಹ ವ್ಯವಹಾರಗಳ ಸಚಿವಾಲಯ, 1, … More

KSRLPS; ಬ್ಲಾಕ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ

ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ(ಕೆಎಸ್‌ಆರ್‌ಎಲ್‌ಪಿಎಸ್)ಯು ಯಾದಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ ವ್ಯಾಪ್ತಿಗೆ ವಿವಿಧ ಬ್ಲಾಕ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾ.11 ಕೊನೆಯ ದಿನವಾಗಿದೆ. ಒಟ್ಟು 03 ಸ್ಥಾನಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಕೆಎಸ್‌ಆರ್‌ಎಲ್‌ಪಿಎಸ್‌ನ ಉದ್ಯೋಗ ಅಧಿಕೃತ ಜಾಲತಾಣ https://jobsksrlps.karnataka.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ … More