ಪದವೀಧರರಿಗೆ ‘ಆರ್‌ಬಿಐ’ನಲ್ಲಿ ಸಹಾಯಕ ಹುದ್ದೆಗಳು.. ಅರ್ಜಿ ಸಲ್ಲಿಕೆಗೆ ಗಡುವು

ಭಾರತೀಯ ರಿಸರ್ವ್ ಬ್ಯಾಂಕ್‌(RBI) ಪ್ಯಾನಲ್ ವರ್ಷ 2025ರಡಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಕೊನೆ ದಿನಾಂಕವನ್ನು ಮಾ.10ರವೆರೆಗೆ ವಿಸ್ತರಿಸಲಾಗಿದೆ. ಒಟ್ಟು 650 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪದವೀಧರ ಉದ್ಯೋಗಾಕಾಂಕ್ಷಿಗಳು ಐಬಿಪಿಎಸ್‌ ಅಧಿಕೃತ ಜಾಲತಾಣದ ಲಿಂಕ್‌ https://ibpsreg.ibps.in/rbiafeb26/ನ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ … More

ಪಿಯುಸಿ ವಿದ್ಯಾರ್ಥಿಗಳಿಗೆ.. ಉಚಿತ ಪ್ರವೇಶ ಪರೀಕ್ಷೆಗಳ ತರಬೇತಿ.!!

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಶೈಕ್ಷಣಿಕ ಸಾಲಿಗೆ ಪಿಯುಸಿ ಓದುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಉಚಿತ ಶಿಕ್ಷಣ/ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೀಟ್‌/ಐಐಟಿ/ಜೆಇಇ/ಕೆ-ಸಿಇಟಿ/ಐಸಿಎಆರ್‌/ಸಿಯುಇಟಿ/ಸಿಎಲ್‌ಎಟಿ/ಸಿಎ-ಪೊಂಡೇಷನ್‌ ಪದವಿಪೂರ್ವ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ಒದಗಿಸಲಿದೆ. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಕಲಿಕಾ ಕೇಂದ್ರಗಳ ವ್ಯವಸ್ಥೆಯಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಮಾ.31ರೊಳಗೆ ತಮ್ಮ ಜಿಲ್ಲೆ/ತಾಲೂಕಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ … More

IDBI ಬ್ಯಾಂಕಿನಲ್ಲಿ 1300 ವ್ಯವಸ್ಥಾಪಕ ಹುದ್ದೆಗಳ ಭರ್ತಿ; ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(ಐಡಿಬಿಐ) ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕ ಗ್ರೇಡ್‌ ‘ಎ’ ಮತ್ತು ಕಿರಿಯ ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ಒ’ (ಪ್ರಾದೇಶಿಕ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದ್ದು, ಅರ್ಜಿ ಸಲ್ಲಿಕೆ ಮಾ.08ರಿಂದ ಆರಂಭವಾಗಿದೆ. ವಿವಿಧ ರಾಜ್ಯಗಳಲ್ಲಿರುವ ತನ್ನ ಶಾಖೆಗಳಿಗೆ ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ಎ’ (200 ಸ್ಥಾನಗಳು) ಹಾಗೂ ಕಿರಿಯ ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ಒ’ (1100 ಸ್ಥಾನಗಳು) ಸೇರಿದಂತೆ ಒಟ್ಟು 1300 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಯಾವುದೇ … More

SSC ಜೂ.ಎಂಜಿನಿಯರ್ 2025: ಪತ್ರಿಕೆ-Iರ ಫಲಿತಾಂಶ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು ಜೂನಿಯರ್ ಎಂಜಿನಿಯರ್(ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗಾಗಿ 2025ರ ಡಿ.03 ರಿಂದ 06 ರವರೆಗೆ ಹಾಗೂ 13ರಂದು ನಡೆಸಲಾದ ಪತ್ರಿಕೆ-I(ಕಂಪ್ಯೂಟರ್‌ ಆಧಾರಿತ ಪರೀಕ್ಷೆ)ರ ಫಲಿತಾಂಶವನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಸದರಿ ಪತ್ರಿಕೆಯಲ್ಲಿ ಸಿವಿಲ್ ಎಂಜಿನಿಯರ್‌ ಹುದ್ದೆಗೆ 11593 ಅಭ್ಯರ್ಥಿಗಳು, ಮೆಕ್ಯಾನಿಕಲ್‌/ಎಲೆಕ್ಟ್ರಿಕಲ್‌ ಎಂಜಿನಿಯರ್‌ ಹುದ್ದೆಗೆ 4014 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ ಆಗಿದ್ದು, ಮುಂದಿನ ಹಂತದ ಪತ್ರಿಕೆ-IIಕ್ಕೆ ಅರ್ಹತೆ ಹೊಂದಿದ್ದಾರೆ. ಎಸ್‌ಎಸ್‌ಸಿ ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಫಲಿತಾಂಶ ಮತ್ತು ಕಟ್‌ ಆಫ್‌ ವಿವರಗಳನ್ನು ಪರಿಶೀಲಿಸಬಹುದು. … More

ಜಿಡಿಎಸ್‌ 2026: ಮೊದಲ ಮೆರಿಟ್‌ ಪಟ್ಟಿ ಪ್ರಕಟ

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ವೇಳಾಪಟ್ಟಿ-1ರ ಗ್ರಾಮೀಣ ಡಾಕ್‌ ಸೇವಕ್‌(GDS) 28636 ಹುದ್ದೆಗಳ ಮೊದಲ ಸುತ್ತಿನ ಮೆರಿಟ್‌ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಸದರಿ ಮೆರಿಟ್‌ ಪಟ್ಟಿಯಲ್ಲಿ ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳು ಮಾ.23ರೊಳಗೆ ತಾವು ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ ಪ್ರತಿಗಳ ಜೊತೆಗೆ ಎರಡು ಸೆಟ್‌ ಝರಾಕ್ಸ್‌ ಪ್ರತಿಗಳೊಂದಿಗೆ ಭೇಟಿ ನೀಡಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ https://indiapost.gov.in/gdsonlineengagementದಲ್ಲಿ ಮೆರಿಟ್‌ ಪಟ್ಟಿಯನ್ನು ಪರಿಶೀಲಿಸಬಹುದು. ರಾಜ್ಯ/ವೃತ್ತವಾರು ಜಿಡಿಎಸ್‌ ಮೆರಿಟ್‌ ಪಟ್ಟಿ-1ರ … More

ಆಹಾರ ವಾಹಿನಿ ಯೋಜನೆ: ಸರ್ಕಾರದಿಂದ ಸಿಗಲಿದೆ ₹3 ಲಕ್ಷ ಸಹಾಯಧನ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಹಿಂದುಳಿದ ವರ್ಗಗಳ ಸಮುದಾಯದ ಅಭ್ಯರ್ಥಿಗಳಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಂತ ಉದ್ಯೋಗ ಕೈಗೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಹಾರವಾಹಿನಿ (ಆಹಾರ ಕಿಯೋಸ್ಟ್) ಯೋಜನೆಯಡಿ ನಾಲ್ಕು ಚಕ್ರಗಳ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳ ಇವಿ-ಗೂಡ್ಸ್ ವಾಹನಗಳ ಖರೀದಿಗೆ ನಿಗಮದಿಂದ 3 ಲಕ್ಷರೂ. ಸಹಾಯಧನವನ್ನು ನೀಡಲಾಗುತ್ತದೆ. ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ … More

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(CBI)ದಲ್ಲಿ ಸ್ಪೇಷಲಿಸ್ಟ್‌ ಆಫೀಸರ್‌ ನೇಮಕಾತಿ

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿವಿಧ ವಿಭಾಗಗಳಿಗೆ ಸ್ಪೇಷಲಿಸ್ಟ್‌ ಆಫೀಸರ್‌(ಎಸ್‌ಒ) ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 275 ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಬ್ಯಾಂಕಿನ ಅಧಿಕೃತ ಜಾಲತಾಣ(https://centralbank.bank.in/)ದಲ್ಲಿ ಲಭ್ಯವಿರುವ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳು ಮಾ.23 ರೊಳಗೆ IBPS ಅಧಿಕೃತ ವೆಬ್‌ಸೈಟ್ ಲಿಂಕ್‌ https://ibpsreg.ibps.in/cbisofeb26/ನ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ: ಸಾಫ್ಟ್‌ವೇರ್ ಡೆವಲಪರ್ (ಜಾವಾ ಡೆವಲಪರ್)-13ಮೊಬೈಲ್ ಡೆವಲಪರ್- … More

RRB ಸಿಇಎನ್ 05/2025 JE ಸಿಬಿಟಿ-1ರ ಕೀ ಉತ್ತರ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 05/2025ರಡಿ ಅಧಿಸೂಚಿಸಲಾದ ಜೂನಿಯ‌ರ್ ಎಂಜಿನಿಯ‌ರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಹಂತದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 19, 20 ಹಾಗೂ 25ರಂದು ನಡೆಸಲಾದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ-Iರ ಕೀ ಉತ್ತರವನ್ನು ಅಧಿಕೃತವಾಗಿ ಗುರುವಾರ(ಮಾ.05) ಪ್ರಕಟಿಸಿದೆ. ಕೀ ಉತ್ತರವನ್ನು RRB ಅಧಿಕೃತ ಜಾಲತಾಣ ಆಯಾ ಪ್ರಾದೇಶಿಕ ವೆಬ್‌ಸೈಟ್‌ https://indianrailways.gov.in/railwayboard/view_section.jsp?lang=0&id=0,7,1281ನಲ್ಲಿ ಅಥವಾ ನೇರವಾಗಿ https://rrb.digialm.com//EForms/configuredHtml/33128/97996/login.htmlಲಿಂಕ್‌ ನ ಮೂಲಕವೂ ಪರಿಶೀಲನೆ ಮಾಡಬಹುದು. ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ಮಾ.11ರೊಳಗೆ ಪತ್ರಿ … More

ಕೆಇಎ: ಫೆ.21, 22ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ರಾಜ್ಯದಾದ್ಯಂತ ಫೆ.21 ಮತ್ತು 22 ರಂದು ನಡಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ಅಂಕಪಟ್ಟಿಯನ್ನು ಬುಧವಾರ(ಮಾ.04) ಪ್ರಕಟಿಸಿದೆ. ಪ್ರಕಟಿತ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮಾ.06 ಬೆಳಗ್ಗೆ 11 ಗಂಟೆಯೊಳಗೆ ನಿಗದಿತ ಲಿಂಕ್‌ ಮುಖೇನ ಸಲ್ಲಿಸಬಹುದು. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/vaoresult/hkrec2025.aspxದ ಮೂಲಕ ಫಲಿತಾಂಶ ಪರಿಶೀಲಿಸಬಹುದು. ತಾತ್ಕಾಲಿಕ ಅಂಕಪಟ್ಟಿ ಹೇಗೆ ಡೌನ್ಲೋಡ್‌ ಮಾಡುವುದು? ಹಂತ-1 ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/indexnew.aspxಗೆ ಭೇಟಿ ನೀಡಿ ಹಂತ-2 ನಂತರ “ನೇಮಕಾತಿ … More

ಆರ್‌ಆರ್‌ಬಿ ಟೆಕ್ನಿಷಿಯನ್‌ ಗ್ರೇಡ್‌-1, ಗ್ರೇಡ್‌-3 ಸಿಬಿಟಿ ಪ್ರವೇಶ ಪತ್ರ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಟೆಕ್ನಿಷಿಯನ್‌ ಗ್ರೇಡ್‌-I ಸಿಗ್ನಲ್‌ ಮತ್ತು ವಿವಿಧ ವರ್ಗಗಳ ಟೆಕ್ನಿಷಿಯನ್‌ ಗ್ರೇಡ್‌-III ಹುದ್ದೆಗಳ ಭರ್ತಿಗಾಗಿ ಮಾ.06, 09, 10 ಮತ್ತು 13ರಂದು ನಡೆಸಲಿರುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆ(ಸಿಬಿಟಿ)ಯ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಲಿಂಕ್‌ https://rrb.digialm.com/EForms/configuredHtml/33128/98139/login.htmlಗೆ ಭೇಟಿ ನೀಡಿ, ನಿಗದಿತ ಪರೀಕ್ಷೆಯ ದಿನಾಂಕಕ್ಕೆ ನಾಲ್ಕು ದಿನಗಳ ಮುಂಚೆ ಅಭ್ಯರ್ಥಿಗಳು ತಮ್ಮ ಲಾಗಿನ್‌ ವಿವರಗಳನ್ನು ನಮೂದಿಸಿ ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರವೇಶ ಪತ್ರ ಹೇಗೆ ಡೌನ್ಲೋಡ್‌ ಮಾಡುವುದು? ಹಂತ-1 … More