RRB RPF 02/2024: ಅಂತಿಮ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್‌)ಯ ಕಾನ್‌ಸ್ಟೇಬಲ್‌(ಕಾರ್ಯನಿರ್ವಾಹಕ) ಹುದ್ದೆಗೆ ಅರ್ಹತೆ ಪಡೆದ 4205 ಅಭ್ಯರ್ಥಿಗಳ ಅಂತಿಮ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಸಿಇಎನ್‌ ಆರ್‌ಪಿಎಫ್‌02/2024ರಡಿ 4208 ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು 2025ರ ಮಾ.2ರಿಂದ 7, 9ರಿಂದ 12 ಮತ್ತು ಮಾ.17ರಿಂದ 18ರವೆರೆಗೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆಯನ್ನು ನ.13 ರಿಂದ ಡಿ.06ರವರೆಗೆ ನಡೆಸಲಾಗಿತ್ತು. ದಾಖಲಾತಿ ಪರಿಶೀಲನೆ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳು ಆಯಾ ಆರ್‌ಆರ್‌ಬಿ ಅಧಿಕೃತ ಜಾಲತಾಣದ(https://indianrailways.gov.in/railwayboard/view_section.jsp?lang=0&id=0,7,1281) ಮೂಲಕ … More

RRB NTPC(Graduate): CBT-1ರ ವೇಳಾಪಟ್ಟಿ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 06/2025ರಡಿ ಅಧಿಸೂಚಿಸಿದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಫೆ.13ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಒಟ್ಟು 5810 ಸ್ಥಾನಗಳ ಭರ್ತಿಗಾಗಿ ಮೊದಲ ಹಂತದ ಸಿಬಿಟಿ ಪರೀಕ್ಷೆಯು ಮಾರ್ಚ್ 16 ರಿಂದ 27ರವರೆಗೆ ಜರುಗಲಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಆರ್‌ಆರ್‌ಬಿಯ ಆಯಾ ಪ್ರಾದೇಶಿಕ ಜಾಲತಾಣಗಳಲ್ಲಿ(https://indianrailways.gov.in/railwayboard/view_section.jsp?lang=0&id=0,7,1281) ಪರಿಶೀಲಿಸಬಹುದು. ಪರೀಕ್ಷಾ ದಿನಾಂಕಕ್ಕಿಂತ 4 ದಿನಗಳ ಮೊದಲು ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ಐಡಿ … More

RRB JE CEN 05/2025: ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ, ಸಿಟಿ ಇಂಟಿಮೇಷನ್‌ ಸ್ಲಿಪ್‌ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ(RRB)ಯು ಸಿಇಎನ್ 05/2025ರಡಿ ಅಧಿಸೂಚಿತ ಜೆಇ/ಡಿಎಂಎಸ್‌/ಸಿಎಂಎ ವರ್ಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ-I)ಯ ಪರಿಷ್ಕೃತ ವೇಳಾಪಟ್ಟಿಯ ಜೊತೆಗೆ ಸಿಟಿ ಇಂಟಿಮೇಷನ್‌ ಸ್ಲಿಪ್‌ಅನ್ನು ಫೆ.10ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನಿಯರ್ ಎಂಜಿನಿಯ‌ರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಸೇರಿದಂತೆ ಒಟ್ಟು 2570 ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT-I)ಯು ಫೆಬ್ರವರಿ 19, 20 ಹಾಗೂ 25 ರಂದು ಒಟ್ಟು 3 ದಿನಗಳ … More

RRB: ವಿವಿಧ ಹುದ್ದೆಗಳ CBT ಪರೀಕ್ಷಾ ವೇಳಾಪಟ್ಟಿ ಪ್ರಕಟ

ರೈಲ್ವೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ರೈಲ್ವೆ ನೇಮಕ ಮಂಡಳಿ(RRB)ಯು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)ಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಸಿಇಎನ್‌ ಸಂಖ್ಯೆ.05/2025ರಡಿ ಅಧಿಸೂಚಿತ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್‌, ರಾಸಾಯನಿಕ ಮತ್ತು ಲೋಹಶಾಸ್ತ್ರ ಸಹಾಯಕ ಹುದ್ದೆಗಳಿಗಾಗಿ ಒಂದನೇ ಹಂತದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು ಫೆ.19, 20 ಮತ್ತು ಮಾ.04ರಂದು ನಡೆಯಲಿದೆ. ಸಿಇಎನ್‌ ಸಂಖ್ಯೆ.03/2025ರಡಿ ಅಧಿಸೂಚಿತ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು ಮಾ.10 ರಿಂದ ಮಾ.12ರವರೆಗೆ ಜರುಗಲಿದೆ. ಸಿಇಎನ್‌ … More

ಆರ್‌ಆರ್‌ಬಿ NPTC ಯುಜಿ ಸಿಬಿಟಿ-2ರ ಕೀ ಉತ್ತರ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (ಪದವಿಪೂರ್ವ) ಹಂತದ ಹುದ್ದೆಗಳ ನೇಮಕಾತಿಗಾಗಿ ಡಿ.20ರಂದು ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-2ರ ಪರೀಕ್ಷೆಯ ಕೀ ಉತ್ತರವನ್ನು ಬುಧವಾರ ಬಿಡುಗಡೆಗೊಳಿಸಿದೆ. ಆರ್‌ಆರ್‌ಬಿ ಸಿಇಎನ್‌ ಸಂಖ್ಯೆ 06/2024ರಡಿ ಒಟ್ಟು 3445 ಹುದ್ದೆಗಳ ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರವನ್ನು ಆರ್‌ಆರ್‌ಬಿ ಅಧಿಕೃತ ಜಾಲತಾಣ https://www.rrbapply.gov.in/#/auth/homeದಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ 50 ರೂ. ಶುಲ್ಕ ಜೊತೆಗೆ ಪ್ರತಿ ಪ್ರಶ್ನೆಗೆ ಅನ್ವಯವಾಗುವ ಬ್ಯಾಂಕ್ ಸೇವಾ ಶುಲ್ಕಗಳನ್ನು ಪಾವತಿಸುವ ಮೂಲಕ ಡಿ.30ರೊಳಗೆ ಆಕ್ಷೇಪಣೆ … More

RRB NTPC ಪದವಿ ಹಂತದ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ(CBAT) ದಿನಾಂಕ ನಿಗದಿ

ರೈಲ್ವೆ ನೇಮಕಾತಿ ಮಂಡಳಿಯು CEN05/2024ರಡಿ ಅಧಿಸೂಚಿಸಲಾದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆಯ ವೇಳಾಪಟ್ಟಿಯನ್ನು (ಡಿ.16)ರಂದು ಬಿಡುಗಡೆ ಮಾಡಿದೆ. ಒಟ್ಟು 8113 ಹುದ್ದೆಗಳ ಭರ್ತಿಗಾಗಿ ಸಿಬಿಟಿ-I ಹಾಗೂ ಸಿಬಿಟಿ-II ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ (CBAT)ಯನ್ನು ಡಿ.28ರಂದು ನಡೆಸಲು ನಿರ್ಧರಿಸಲಾಗಿದೆ. ಸದರಿ CBAT ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಆರ್‌ಆರ್‌ಬಿಯ ಪ್ರಾದೇಶಿಕ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಬಿಡುಗಡೆ ಮಾಡಲಾಗಿದೆ, ಅರ್ಹ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು. … More

ಆರ್‌ಆರ್‌ಬಿ NPTC ಪದವಿ ಹಂತದ ಸಿಬಿಟಿ-2ರ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಅಕ್ಟೋಬರ್‌ 13 ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆ 2ರ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. CEN05/2024ರಡಿ ಅಧಿಸೂಚಿಸಲಾಗಿತ್ತು. ಒಟ್ಟು 8113 ಅಭ್ಯರ್ಥಿಗಳ ಭರ್ತಿಗಾಗಿ ಪರೀಕ್ಷೆ ನಡೆದಿದೆ. ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಿಬಿಟಿ ಪರೀಕ್ಷೆ-2 ಅನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಮೂಲಕ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಟೈಪಿಂಗ್ ಕೌಶಲ್ಯ ಪರೀಕ್ಷೆಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪಟ್ಟಿ ಇರುವ … More

RRB ವಿಭಾಗ ನಿಯಂತ್ರಕ(SC) ಅರ್ಜಿ ಸ್ಥಿತಿ ಬಿಡುಗಡೆ

ರೈಲ್ವೆ ನೇಮಕಾತಿ ಮಂಡಳಿಯು ವಿಭಾಗ ನಿಯಂತ್ರಕ(SC) ಹುದ್ದೆಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ್ದು, ಅರ್ಜಿ ಸ್ಥಿತಿಯನ್ನು ತಿಳಿಯಲು ಅಭ್ಯರ್ಥಿಗಳಿಗೆ ಡಿ.12 ರಿಂದ ಅವಕಾಶ ಕಲ್ಪಿಸಿದೆ. ಅಧಿಸೂಚನೆ ಸಂಖ್ಯೆ ಸಿಇಎನ್‌ 04/2025ರಡಿ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿಯು ಸ್ವೀಕರಿಸಲಾಗಿದೆಯೋ, ಇಲ್ಲವೋ ಅಥವಾ ಷರತ್ತುಬದ್ಧವಾಗಿ ಸ್ವೀಕರಿಸಲಾಗಿದೆಯೋ ಎಂಬುದನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ https://www.rrbapply.gov.in/#/auth/homeನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ನೋಂದಾಯಿತ ಮೊಬೈಲ್‌ ಸಂಖ್ಯೆಗೂ ಸಂದೇಶ ಕಳುಹಿಸಲಾಗಿದೆ. ಅಭ್ಯರ್ಥಿಗಳು ಲಾಗಿನ್‌ ವಿಳಾಸಗಳನ್ನು ಬಳಸಿ ಅರ್ಜಿ ಸ್ಥಿತಿ ಪರಿಶೀಲನೆ ಮಾಡಬಹುದು ಎಂದು ಮಂಡಳಿ … More

RRB ಜೂನಿಯರ್ ಎಂಜಿನಿಯರ್(JE) ಹುದ್ದೆಗಳ ಭರ್ತಿ

ರೈಲ್ವೆ ನೇಮಕಾತಿ ಮಂಡಳಿಯು (CEN)ಸಂಖ್ಯೆ.05/2025)ರ ಅಡಿಯಲ್ಲಿ ಒಟ್ಟು 2569 ಜೂನಿಯರ್ ಎಂಜಿನಿಯರ್(JE) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಭಾರತದಾದ್ಯಂತ ರೈಲ್ವೆಯ ವಿವಿಧ ವೃಂದಗಳಲ್ಲಿ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ರೈಲ್ವೆ ಇಲಾಖೆಯಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್‌ಆರ್‌ಬಿ ಅಧಿಕೃತ ಜಾಲತಾಣ https://rrbapply.gov.in/ಕ್ಕೆ ಭೇಟಿ ನೀಡಿ. ಡಿ.10ರೊಳಗೆ ಆನ್ಲೈನ್ … More

RRB ಪ್ಯಾರಾಮೆಡಿಕಲ್ ವರ್ಗಗಳ ನೇಮಕಾತಿ: ಅರ್ಜಿ ಸ್ಥಿತಿ ಪರಿಶೀಲಿಸಿ

ರೈಲ್ವೆ ನೇಮಕಾತಿ ಮಂಡಳಿಯು (RRB) CEN ಸಂಖ್ಯೆ 03/2025ರಡಿ ಅಧಿಸೂಚಿಸಲಾದ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸಲ್ಲಿಸಲಾದ ಅರ್ಜಿ ಸ್ಥಿತಿಯನ್ನು ಡಿ.09ರಿಂದ ಪರಿಶೀಲಸಲು ಅವಕಾಶ ಕಲ್ಪಿಸಿದೆ. ಒಟ್ಟು 434 ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಿ, ಅರ್ಜಿ ಸ್ವೀಕರಿಸಿತ್ತು. ಇದೀಗ ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅರ್ಜಿ ಸ್ಥಿತಿಯನ್ನು RRB ಅಧಿಕೃತ ಜಾಲತಾಣ https://www.rrbapply.gov.in/#/auth/homeದಲ್ಲಿ ಬಿಡುಗಡೆ ಮಾಡಲಾಗಿದೆ. ಪ್ಯಾರಾಮೆಡಿಕಲ್ ವರ್ಗಗಳ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು … More